May 19, 2024

Bhavana Tv

Its Your Channel

ಜಲಜೀವನ ಮೀಷನ್ ಯೋಜನೆಯ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಚಿವ ಸಿ.ಸಿ.ಪಾಟೀಲ

ರೋಣ: ನರಗುಂದ ಮತಕ್ಷೇತ್ರದ ಶಿರೋಳ ಗ್ರಾಮದಲ್ಲಿ. ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಚುನಾಯಿತ ಜನಪ್ರತಿನಿಧಿಗಳು ಕಾರ್ಯನಿರ್ವಹಿಸುವದರ ಮೂಲಕ ಗಾಂಧೀಜಿಯವರ ಗ್ರಾಮ ಸ್ವರಾಜ ಕನಸನ್ನು ನನಸಾಗಿಸಲು ಪ್ರಯತ್ನಿಸುವಂತೆ ರಾಜ್ಯ ಲೋಕೋಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ ತಿಳಿಸಿದರು.

ಶಿರೋಳ ಗ್ರಾಮದ ೧೩೧೮ ಮನೆಗಳ ಜಲಜೀವನ ಮೀಷನ್ ಯೋಜನೆಯ ನಳ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಶಿರೋಳ ಗ್ರಾಮಗಳಲ್ಲಿ ೧೭೩ ಲಕ್ಷ ಜಲಜೀವನ ಮೀಷನ್ ಯೋಜನೆಯ ಮುರುಡಿ ಮಾರುತೇಶ್ವರ ಸಮುದಾಯ ಭವನ ಅಂದಾಜು ೫ ಲಕ್ಷ ಮತ್ತು ಪಂಚಾಯತ ಕಟ್ಟಡದ ನಿರ್ಮಾಣ ಅಂದಾಜು ಮೊತ್ತ ೨೮. ಲಕ್ಷ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡ ಉದ್ಘಾಟನೆ ಭೂಮಿಪೂಜೆ ಸಮಾರಂಭ ಗ್ರಾಮೀಣ ಪ್ರದೇಶದ ಪ್ರತಿಯೊಂದು ಕುಟುಂಬಕ್ಕೂ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಜಲ ಜೀವನ್ ಮೀಷನ್ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು ಜಾರಿಗೊಳಿಸದ್ದು ಇದರಿಂದಾಗಿ ಮಹಿಳೆಯುರು ಕೊಡ ಹೊತ್ತು ಮೈಲುಗಟ್ಟಲೆ ನಡೆಯುವ ತಾಪತ್ರಯ ತಪ್ಪಲಿದೆ ಎಂದರು.
ಗ್ರಾಮಗಳಲ್ಲಿ ಜರಗುವ ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಚುನಾಯಿತ ಜನಪ್ರತಿನಿಧಿಗಳ ಜೊತೆಗೆ ಸಾರ್ವಜನಿಕರ ಸಹಕಾರ ಅತೀ ಅಗತ್ಯವಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಸಂಬAಧಿಪಟ್ಟAತೆ ಯಾವುದೇ ಅಡೆತಡೆಗಳಿದ್ದರೆ ಅವುಗಳನ್ನು ತಮ್ಮ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವಂತೆ ತಿಳಿಸಿದರು. ಸಾರ್ವಜನಿಕರು ಕಟ್ಟುವ ತೆರಿಗೆ ಹಣದಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರಕಿಸಿಕೊಡಲಾಗುತ್ತಿದ್ದು ಇದರ ಸದುಪಯೋಗವಾಗುವಂತೆ ನೋಡಿಕೊಳ್ಳುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿರುತ್ತದೆ. ಕೋವಿಡ್ ಸೊಂಕಿನಿAದಾಗಿ ಇಡೀ ಪ್ರಪಂಚದ ಆರ್ಥಿಕತೆ ಮೇಲೆ ಭೀಕರ ಪರಿಣಾಮ ಬೀರಿದ್ದು ಇದರಲ್ಲಿ ರಾಜ್ಯ ಸರ್ಕಾರದ ಆದಾಯವು ಕುಂಠಿತಗೊAಡಿದ್ದರೂ ಸಹ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಮಗಳಿಗೆ ಮಂಜೂರಾಗುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಸ್ವ ಪ್ರತಿಷ್ಠೆಯನ್ನು ಬದಿಗೊತ್ತಿ ಗ್ರಾಮಗಳ ಅಭವೃದ್ಧಿಯತ್ತ ಗಮನಹರಿಸಲು ಸೂಚಿಸಿದರು.

ಕೋವಿಡ್ ೨ನೇ ಅಲೆಯಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದ್ದು ಇದಕ್ಕೆ ರಾಜ್ಯವು ಹೊರತಾಗಿಲ್ಲ. ಜಿಲ್ಲೆಯಲ್ಲಿ ಕೋವಿಡ್ ೨ ನೇ ಅಲೆಯನ್ನು ನಿಯಂತ್ರಿಸಲಾಗಿದ್ದು ಇದಕ್ಕಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಸೇನಾನಿಗಳಿಗೆ ಅಭಿನಂದಿಸಿದರು.
ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ ಧಾರಣ ಹಾಗೂ ದೈಹಿಕ ಅಂತರ ಕಾಪಾಡಿಕೊಂಡು ತಜ್ಞರ ವರದಿಯಂತೆ ಮೂರನೇ ಅಲೆ ಈಗಾಗಲೇ ರಾಜ್ಯದ ಅಕ್ಕ ಪಕ್ಕದ ರಾಜ್ಯಗಳಲ್ಲಿ ಪ್ರಾರಂಭವಾಗಿದ್ದು ರಾಜ್ಯದಲ್ಲೂ ಇದರ ಪರಿಣಾಮ ಬೀರಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರು ಈ ಕುರಿತು ಅಗತ್ಯದ ಮುಂಜಾಗೃತಾ ಕ್ರಮಗಳಾದ ಕಡ್ಡಾಯ ಮಾಸ್ಕ ಧಾರಣೆ, ದೈಹಿಕ ಅಂತರ ಕಾಪಾಡಿಕೊಳ್ಳುವದು ಹಾಗೂ ಅನಾವಶಕವಾಗಿ ಮನೆಯಿಂದ ಹೊರ ಬರದೆ ಸಂಭಾವ್ಯ ಮೂರನೇ ಅಲೆಯನ್ನು ನಿಯಂತ್ರಿಸುವAತೆ ಸಾರ್ವಜನಿಕರಲ್ಲಿ ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಮತ್ತು ಪಿಡಿಒಗಳು ಮಾಜಿ ತಾ.ಪಂ.ಅಧ್ಯಕ್ಷರಾದ ಪ್ರಕಾಶಗೌಡ್ರ ತಿರಕನಗೌಡ್ರ, ಶ್ರೀದೇವಿ ಗುಂಡ್ಲೂರ ಗ್ರಾ.ಪಂ.ಅಧ್ಯಕ್ಷರು, ಗ್ರಾ.ಪಂ.ಉಪಾಧ್ಯಕ್ಷರಾದ ಗುರುಬಸಯ್ಯಾ ನಾಗಲೋಟಿಮಠ, ನಾಗನಗೌಡ ತಿಮ್ಮನಗೌಡ್ರ, ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು

ವರದಿ ವೀರಣ್ಣ ಸಂಗಳದ ರೋಣ

error: