December 22, 2024

Bhavana Tv

Its Your Channel

ರಾಜ್ಯದ ಎಲ್ಲ ಶಿಕ್ಷಕರಿಗೂ ಏ.೧೧ರವರೆಗೆ ರಜೆ ವಿಸ್ತರಣೆ, ಶೈಕ್ಷಣಿಕ ವರ್ಷದ ಶುಲ್ಕ ಕಟ್ಟಿಕೊಂಡಲ್ಲಿ ಶಾಲಾ ಪರವಾನಿಗೆ ರದ್ದು

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯ ಹಿನ್ನಲೆಯಲ್ಲಿ ಈಗಾಗಲೇ ಲಾಕ್ ಡೌನ್ ಜಾರಿಯಲ್ಲಿದೆ. ಮಾರ್ಚ್ ೩೧ರ ವರೆಗೆ ಮಾತ್ರವೇ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿತ್ತು. ಆದ್ರೇ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ೨೧ ದಿನಗಳ ಕಾಲ ಅಂದರೆ ಏಪ್ರಿಲ್ ೧೪ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಿದ್ದರ ಹಿನ್ನಲೆಯಲ್ಲಿ, ರಾಜ್ಯದ ಶಾಲಾ ಶಿಕ್ಷಕರ ರಜೆಯನ್ನು ಏಪ್ರಿಲ್ ೧೧ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಫೇಸ್‌ಬುಕ್ ಲೈವನಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ೨೦೨೦-೨೧ನೇ ಸಾಲಿನ ಶಾಲಾ ದಾಖಲಾತಿಯನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ. ಯಾವುದೇ ಶಾಲೆಗಳು ಪ್ರವೇಶಾತಿ ನಡೆಸುವಂತಿಲ್ಲ. ಖಾಸಗಿ ಶಾಲೆಗಳು ಶೈಕ್ಷಣಿಕ ವರ್ಷದ ಶುಲ್ಕವನ್ನು ಕಟ್ಟಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಒತ್ತಾಯಿಸುವಂತಿಲ್ಲ. ಶೈಕ್ಷಣಿಕ ಶಾಲಾ ಶುಲ್ಕ ಕಟ್ಟಲು ಡೆಡ್ ಲೈನ್ ಕೂಡ ನಿಗಧಿಪಡಿಸುವಂತಿಲ್ಲ ಎಂಬುದಾಗಿ ಸೂಚಿಸಿದರು.

ಈ ಬಗ್ಗೆ ಅನೇಕ ಪಾಲಕರ ದೂರುಗಳು ಬಂದಿದ್ದು ಒಂದು ವೇಳೆ ಈ ನಿಯಮವನ್ನು ಮೀರಿ ಶಾಲಾ ದಾಖಲಾತಿಯನ್ನು ನಡೆಸಿದ್ದಾಗಲೀ, ವಿದ್ಯಾರ್ಥಿಗಳಿಂದ ಶಾಲಾ ಶುಲ್ಕವನ್ನು ಕಟ್ಟಿಸಿಕೊಂಡು ಆದೇಶ ಮೀರಿ ನಡೆದದ್ದೇ ಆದರೇ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಂತಹ ಶಾಲೆಗಳ ಮಾನ್ಯತೆಯನ್ನೇ ರದ್ದುಗೊಳಿಸಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಲಾಕ್ ಡೌನ್ ಏಪ್ರಿಲ್ ೧೪ರ ವರೆಗೆ ಜಾರಿಯಲ್ಲಿರುವುದರಿಂದ ರಾಜ್ಯದ ಶಾಲಾ ಶಿಕ್ಷಕರ ರಜೆಯನ್ನು ಏಪ್ರಿಲ್ ೧೧ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

error: