ರೋಣ: ಪುರಸಭೆಯ ಸಭಾಭವನದಲ್ಲಿ ಅಧ್ಯಕ್ಷೆ ವಿದ್ಯಾ ದೊಡ್ಡಮನಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ವಿದ್ಯುತ್ ನಿರ್ವಹಣೆಗಾಗಿ ಪ್ರತಿ ತಿಂಗಳು ರೂ. ೧ ಲಕ್ಷ ಖರ್ಚು ಮಾಡಿದರು ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಆದಕಾರಣ ಇದನ್ನು ಖಾಸಗಿಯವರಿಗೆ ವಹಿಸುವ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಹಾಗೂ ಚುನಾಯಿತ ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡದ ವರ್ತನೆ ಮಾಡುತ್ತಿದ್ದಾರೆ ಎಂದು ಪಕ್ಷಾತೀತವಾಗಿ ಪುರಸಭೆಯ
ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ದ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆಯಲ್ಲಿ ದಾಖಲೆಗಳನ್ನು ಪಡೆಯಬೇಕಾದರೆ ಹಣ ನೀಡಬೇಕು ಇಲ್ಲವಾದರೆ ಸತಾಯಿಸುತ್ತಾರೆ. ಅದರಲ್ಲೂ ಮನೆ ಪಹಣಿ ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಜನರಿಗೆ ಒದಗಿ ಬಂದಿದೆ. ಪುರಸಭೆ ಸದಸ್ಯರು ಕೇಳಿದರು ಕುಂಟು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ. ಜಿ.ಪಿ.ಎಸ್ ಮಾಡಲು ಪಹಣಿ ಪಡೆಯಲು ಪೋನ್ ಪೇ ಮೂಲಕ ಹಣ ಪಡೆದ ದಾಖಲೆಗಳನ್ನು ನಮ್ಮ ಬಳಿ ಇವೆ ಎಂದು ಪುರಸಭೆ ಸದಸ್ಯ ಹಣಮಂತ ತಳ್ಳಿಕೇರಿ ಆರೋಪಿಸಿದರು. ಮತ್ತೊಬ್ಬ ಸದಸ್ಯ ಬಸವರಾಜ ಶಾಂತಗೇರಿ ಮಾತನಾಡಿ, ಪುರಸಭೆಯ ವಿರುದ್ದ ಭ್ರಷ್ಟಾಚಾರ ದೂರು ದಾಖಲಿಸಿ ಎಂದು ಸಭೆಗೆ ಒತ್ತಾಯಿಸಿದರು.
ಸಾರ್ವಜನಿಕ ಶೌಚಾಲಯಗಳನ್ನು ಶುಚಿಗೊಳಿಸುತ್ತಿಲ್ಲ, ಪಟ್ಟಣದಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲಾ. ಬೀದಿ ದೀಪಗಳ ಸರಿಯಾದ ನಿರ್ವಹಣೆಯಾಗುತ್ತಿಲ್ಲಾ. ಆದರೆ ಇವುಗಳ ನಿರ್ವಹಣೆಗಾಗಿಯೇ ದಿನಗೂಲಿ ನೌಕರರನ್ನು ತೆಗೆದುಕೊಳ್ಳಲಾಗಿದೆ. ಯಾರು ತಮ್ಮ ಕೆಲಸಗಳನ್ನು ಮಾಡುತ್ತಿಲ್ಲ ಎಂದು ಪುರಸಭೆ ಸದಸ್ಯ ಗದಿಗೇಪ್ಪ ಕಿರೇಸೂರ ಖಾರವಾಗಿ ಪ್ರಶ್ನಿಸಿದ ಘಟನೆ ನಡೆಯಿತು.
ಸಭೆಯಲ್ಲಿ ಪುರಸಭೆಯ ವ್ಯಾಪ್ತಿಯ ಪಟ್ಟಣದ ಮಾರುಕಟ್ಟೆಯ ರಸ್ತೆಯಲ್ಲಿ ಡಿವೈಡರ್‌ನ ಒಂದೇ ಒಂದು ಬೀದಿ ದೀಪ ಹಾಕಲು ಸಾಧ್ಯವಾಗುತ್ತಿಲ್ಲಾ. ಸ್ವಚ್ಚತೆ ಕಾಪಾಡಲು, ತಗ್ಗು, ಗುಂಡಿಗಳು ಬಿದ್ದ ರಸ್ತೆ ಸುಧಾರಣೆ, ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದ ಕಾರಣ ನಾಗರಿಕರು ನಮ್ಮ ಯೋಗ್ಯತೆ ಪ್ರಶ್ನಿಸುತ್ತಿದ್ದಾರೆ. ಪುರಸಭೆಯ ಸಿಬ್ಬಂದಿಗಳ ವರ್ತನೆ ಹೀಗೆ ಮುಂದುವರೆದರೆ ಸಹಿಸಲು ಸಾಧ್ಯವಿಲ್ಲಾ ಎಂದು ಸದಸ್ಯರು ಪುರಸಭೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುರಸಭೆಯಿಂದ ಬಡವರಿಗಾಗಿ ಮಂಜೂರಾಗಿರುವ ಆಶ್ರಯ ಮನೆಗಳ ಬಿಲ್ ಮಾಡಲು ಇಲ್ಲಿನ ಸಿಬ್ಬಂದಿಗಳು ಹಣ ಪಡೆಯುತ್ತಿದ್ದಾರೆ. ಹಣ ನೀಡಿದ ಫಲಾನುಭವಿಗಳಿಗೆ ಬಿಲ್ ಪಾವತಿ ಯಾಗುತ್ತಿಲ್ಲಾ. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ ಎಂದು ಆರೋಪಿಸಿದರು. ಅಮೃತ ನಿರ್ಮಲ ನಗರ ಯೋಜನೆಯಡಿ ರೋಣ ಪುರಸಭೆಗೆ ರೂ ೧ ಕೋಟಿ ಬಂದಿದ್ದು. ಇದರಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಚರ್ಚೆ ನಡೆಯಿತು.
ಪ್ರತಿಕ್ರೀಯಿಸಿದ ಮುಖ್ಯಾಧಿಕಾರಿ ಎಂ.ಎ.ನೂರುಲ್ಲಾಖಾನ್ ನಾನು ಅಧಿಕಾರ ವಹಿಸಿಕೊಳ್ಳವ ಪೂರ್ವದಲ್ಲಿ ಪುರಸಭೆಗೆ ರೂ. ೩೦ ಲಕ್ಷ ಸಾಲವಿತ್ತು. ಪೌರ ಕಾರ್ಮಿಕರಿಗೆ ೬ ತಿಂಗಳ ಸಂಬಳ ನೀಡಿರಲಿಲ್ಲಾ. ಈಗ ಪ್ರತಿ ತಿಂಗಳ ಸಂಬಳ ಪಾವತಿ ಮಾಡುತ್ತಿದ್ದೇನೆ. ರಾಜ್ಯದಲ್ಲಿಯೇ ಅತ್ಯಂತ ಕಡಿಮೆಯ ನೌಕರರಿರುವ ಪುರಸಭೆ ನಮ್ಮದಾಗಿದೆ ಅದರಲ್ಲೂ ನೌಕರರನ್ನು ತಗೆದುಕೊಂಡು ನನ್ನ ಶಕ್ತಿ ಮೀರಿ ಒಳ್ಳೆಯ ಕೆಲಸ ಮಾಡುತ್ತಿದ್ದೇನೆ. ನಿಮಗೆ ನನ್ನ ಕೆಲಸ ತೃಪ್ತಿಯಾಗದಿದ್ದರೆ, ದಯವಿಟ್ಟು ನನ್ನನ್ನು ಇಲ್ಲಿಂದ ವರ್ಗಾವಣೆಗೊಳಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಮಿಥುನ್ ಜಿ. ಪಾಟೀಲ, ಸದಸ್ಯರಾದ ಮಲ್ಲಯ್ಯ ಗುರುಬಸಪ್ಪನಮಠ, ಅಫತಾಬಾಹ್ಮದ ತಹಶೀಲ್ದಾರ, ಶಕುಂತಲಾ ದೇಶಣ್ಣವರ, ಗದಿಗೆಪ್ಪ ಕಿರೇಸೂರ, ಗೀತಾ ಮಾಡಲಗೇರಿ, ಲಕ್ಷ್ಮೀ ಕೊಪ್ಪದ, ಈಶ್ವರಪ್ಪ ಕಡಬಿನಕಟ್ಟಿ, ದುರುಗಪ್ಪ ಹಿರೇಮನಿ, ಸಂಗಪ್ಪ ಜಿಡ್ಡಿಬಾಗಿಲ, ರಂಗವ್ವ ಭಜಂತ್ರಿ, ಶಕುಂತಲಾ ಚಿತ್ರಗಾರ, ವಿಜಯೇಂದ್ರ ಗಡಗಿ, ವಿಜಯಲಕ್ಷ್ಮೀ ಕೊಡಗಿ, ರೇಣುಕಾ ರಂಗನಗೌಡ್ರ, ಸಂತೋಷ ಕಡಿವಾಲ, ಅಂದಪ್ಪ ಗಡಗಿ, ಬಸವ್ವ ಕೊಪ್ಪದ, ಬಾವಾಸಾಬ ಬೆಟಗೇರಿ, ಚನ್ನಬಸಮ್ಮ ಹಿರೇಮಠ, ದಾವಲಸಾಬ ಬಾಡಿನ, ಹನಮಂತಪ್ಪ ತಳ್ಳಿಕೇರಿ ಇದ್ದರು.
ವರದಿ ವೀರಣ್ಣ ಸಂಗಳದ ರೋಣ
More Stories
ಶಿಕ್ಷಕರು ಎಂದರೆ ದೇವರ ಪ್ರತಿರೂಪ ಬದುಕು ರೂಪಿಸುತ್ತಿರುವ ಶಿಕ್ಷಕರ ಸೇವೆ ಅವಿಸ್ಮರಣೀಯ- ಗುರುಪಾದ ಮಹಾಸ್ವಾಮಿಜೀ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು.
ಮತದಾರರ ಋಣ ತೀರಿಸುವ ಪರಿಕಲ್ಪನೆಯೊಂದಿಗೆ ಕಾರ್ಯನಿರ್ವಹಿಸಿ- ಸಚಿವ ಸಿ.ಸಿ.ಪಾಟೀಲ