April 27, 2024

Bhavana Tv

Its Your Channel

ಕಾನೂನು ಅರಿವು ನೆರವು ಕಾರ್ಯಕ್ರಮ

ನರೇಗಲ್ಲ: ಪ್ರತಿಯೊಬ್ಬ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಪ್ರಸ್ತುತ ಸಂದರ್ಭದಲ್ಲಿ ಅವಶ್ಯವಾಗಿದೆ ಎಂದು ರೋಣ ಹಿರಿಯ ದಿವಾಣಿ ನ್ಯಾಯಾಧೀಶರಾದ ರಮಾಕಾಂತ್ ಚವ್ಹಾಣ ಹೇಳಿದರು.ಅವರು ಇಲ್ಲಿನ ಜಕ್ಕಲಿ ಗ್ರಾಮ ಚಾವಡಿಯಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಪೋಲೀಸ್ ಇಲಾಖೆ, ಜಿಲ್ಲಾ ತಾಲೂಕು ಗ್ರಾಮ ಪಂಚಾಯಿತಿ, ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕಿ ಚಾಲನೆ ನೀಡಿದರು ನಂತರ ಮಾತನಾಡಿದ ಅವರು ಬಹುತೇಕ ಜನರಲ್ಲಿ ಕಾನೂನುಗಳ ಬಗ್ಗೆ ಸಮರ್ಪಕವಾದ ಮಾಹಿತಿ ಇಲ್ಲದ್ದರಿಂದ ನಾನಾ ಅವಘಡಗಳು ನಡೆಯುತ್ತವೆ. ಇವುಗಳು ಆಗಬಾರದು ಎಂದರೆ ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ಮಾಹಿತಿ ಪಡೆಯಬಹುದು ಸಂವಿಧಾನದಲ್ಲಿ ಅಳವಡಿಸಿರುವ ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಪ್ರತಿನಿತ್ಯದ ಚಟುವಟಿಕೆಗಳನ್ನು ನೆಮ್ಮದಿಯಾಗಿ ನಡೆಸಲು ಕಾನೂನು ಅರಿವು ಪಡೆಯುವುದು ಅಗತ್ಯ ಎಂದು ಅಭಿಪ್ರಾಯ ಪಟ್ಟರು ಹಾಗೂ ಮೋಟಾರು ವಾಹನಗಳ ಕುರಿತು ಮಾಹಿತಿ ನೀಡಿದರು
ನ್ಯಾಯವಾದಿ ಎನ್, ಎಲ್ ಬಾಣದ ಮುಖ್ಯ ಅತಿಥಿಗಳಾಗಿ ಜನನ ಮರಣ ನೋಂದಣಿ, ಹೆಣ್ಣು ಮಕ್ಕಳ ಆಸ್ತಿಯಲ್ಲಿ ಸಮಪಾಲು ಹಕ್ಕು ಪಡೆಯುವ ಕುರಿತು ಮತ್ತು ಕಾನೂನು ಅರಿವು ನೆರವು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗ್ರಾ ಪಂ ಅಧ್ಯಕ್ಷ ವೀರಪ್ಪ ವಾಲಿ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಚನ್ನಬಸವ ಕೊಪ್ಪದ, ಎಸ್ ಎಸ್ ಬುಳ್ಳಾ, ಗ್ರಾ ಪಂ ಉಪಾಧ್ಯಕ್ಷೆ ಅನುಸೂಯ ಜಂಗಣ್ಣವರ, ಸದಸ್ಯರಾದ ಸಂತೋಷ ಕೋರಿ, ಗುರಪ್ಪ ರೋಣದ, ಅನ್ನಪೂರ್ಣ ಮುಗಳಿ, ಸುವರ್ಣ ತಳವಾರ, ಗಂಗವ್ವ ಜಂಗಣ್ಣವರ, ಯಲ್ಲವ್ವ ಮಾದರ, ಬೀಬಿಜಾನ ಕದಡಿ, ನಿರ್ಮಲಾ ಆದಿ ಮುಖ್ಯ ಅತಿಥಿಗಳಾಗಿದ್ದರು. ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಉಪಸ್ಥಿತರಿದ್ದರು.
ಪಿಡಿಒ ಎಸ್ ಎಸ್ ರಿತ್ತಿ ಸ್ವಾಗತಿಸಿ ನಿರೂಪಿಸಿದರು
ವರದಿ ವೀರಣ್ಣ ಸಂಗಳದ

error: