December 20, 2024

Bhavana Tv

Its Your Channel

ಸ್ವಚ್ಛ ಭಾರತ ಕಪ್ ಮುಡಿಗೆ ಏರಿಸಿಕೊಂಡ ರೋಣ ತಾಲೂಕ ಪಂಚಾಯಿತಿ

ರೋಣ: ಫಿಟ್ ಇಂಡಿಯಾ ಅಭಿಯಾನ, ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ತಾಲೂಕು ಪಂಚಾಯತ ರೋಣ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೇಟ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ಜರುಗಿತು.

ಆರ್.ಡಿ.ಪಿ.ಆರ್. ಹಾಗೂ ಶಿಕ್ಷಣ ಇಲಾಖೆಯ ತಂಡಗಳ ನಡುವೆ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬಲಿಷ್ಠ ಶಿಕ್ಷಣ ಇಲಾಖೆ ತಂಡವನ್ನು ಮಣಿಸುವ ಮೂಲಕ ಆರ್.ಡಿ.ಪಿ.ಆರ್. ತಂಡ ಟ್ರೋಫಿ ತನ್ನ ಮುಡಿಗೇರಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶಿಕ್ಷಣ ಇಲಾಖೆ ತಂಡ ೧೦ ಓವರಗಳ ಮುಕ್ತಾಯಕ್ಕೆ ೯೦ ರನ್ ಪೇರಿಸಿತು. ಈ ಮೊತ್ತವನ್ನು ಬೆನ್ನತ್ತಿದ ಆರ್.ಡಿ.ಪಿ.ಆರ್. ತಂಡ ಕೊನೆಯ ಎಸೆತದ ವರೆಗೆ ಹೋರಾಡಿ ರೋಚಕ ಗೆಲುವು ತನ್ನದಾಗಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ರನ್ನರ ಅಪ್ ಆದ ಶಿಕ್ಷಣ ಇಲಾಖೆಯ ತಂಡ ದ್ವಿತಿಯ ಸ್ಥಾನಕ್ಕೆ ತೃಪ್ತಿಪಟ್ಟಿತು. ಅಬಕಾರಿ ಇಲಾಖೆಯ ತಂಡ ತೃತೀಯ ಸ್ಥಾನ ಗಳಿಸಿತು.

ರೋಣ ತಹಶಿಲ್ದಾರರಾದ ಶ್ರೀ ಜೆ.ಬಿ. ಜಕ್ಕನಗೌಡ್ರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಸಂತೋಷಕುಮಾರ ಪಾಟೀಲ ರವರು ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಿದರು.

ವರದಿ ವೀರಣ್ಣ ಸಂಗಳದ ರೋಣ

error: