May 10, 2024

Bhavana Tv

Its Your Channel

ಮಕ್ಕಳಿಗೆ ಶಿಕ್ಷಣ ಕ್ಷೇತ್ರ ಒಂದು ದೊಡ್ಡ ಬುನಾದಿ- ಶಾಸಕ ಕಳಕಪ್ಪ ಬಂಡಿ.

ರೋಣ: ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವ ಹಲವಾರು ಯೋಜನೆಗಳು ಶಿಕ್ಷಣ ಕ್ಷೇತ್ರ ಉನ್ನತ್ತ ಶಿಖರಕ್ಕೇರಿಸುವ ಅತ್ಯಂತ ಮಹತ್ವದ ಜವಾಬ್ದಾರಿ ಹೊಂದಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಹೇಳಿದರು.
ಶುಕ್ರವಾರ ತಾಲೂಕಿನ ಅರಹುಣಸಿ,ಹಿರೇಮಣ್ಣೂರ ಮತ್ತು ಬಾಚಲಾಪೂರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶಾಲಾ ಕೊಠಡಿಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು ಆಧುನಿಕತೆಗೆ ತಕ್ಕಂತೆ ಸರ್ಕಾರಿ ಶಾಲೆಗಳು ಹಿಂದುಳಿಯಬಾರದು ಎನ್ನುವ ದೆಸೆಯಿಂದ ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದೆ.ಅಲ್ಲದೇ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಆಂಗ್ಲ ಮಾಧ್ಯಮವು ಸಹ ನೀಡುತ್ತಿರುವುದು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ.ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಮತಕ್ಷೇತ್ರದಲ್ಲಿ ಪ್ರಾಥಮಿಕ, ಪ್ರೌಢ ,ಪದವಿ ,ತಾಂತ್ರಿಕ ಮಹಾವಿದ್ಯಾಲಯದ ಸೇರಿ ಹಲವಾರು ಶಿಕ್ಷಣ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಮಕ್ಕಳು ಸರ್ಕಾರದ ಯೋಜನೆಯ ಲಾಭ ಪಡೆದು ವಿದ್ಯಾವಂತರಾಗಿ ಸಮಾಜದ ಪ್ರಜ್ಞಾವಂತ ಪ್ರಜೆಗಳಾಗಿ ಬೆಳೆಯಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ವಶಿಕ್ಷಣ ಅಭಿಯಾನದಡಿ ದೇಶದ ಪ್ರತಿ ಮಗುವಿಗೂ ಉಚಿತ ಪಠ್ಯಪುಸ್ತಕದಿಂದ ಹಿಡಿದು ಎಲ್ಲ ಸೌಲಭ್ಯ ನೀಡಿದೆ.ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನ್ನುವಷ್ಟು ಅಭಿವೃದ್ಧಿ ಹೊಂದಿರುವ ಜೊತೆಗೆ ತಂತ್ರಜ್ಞಾನಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರ ಸರ್ಕಾರಿ ಶಾಲೆಗಳಿಗೆ ಆದ್ಯತೆ ನೀಡಿದೆ, ಇವುಗಳನ್ನು ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಣ ಮಂಡಳ ಅಧ್ಯಕ್ಷ ಮುತ್ತಣ್ಣ ಕಡಗದ,ಎಸ್ ಡಿ ಎಂ ಸಿ ಅಧ್ಯಕ್ಷ ಯಲ್ಲಪ್ಪ ತಳವಾರ,ಎಪಿಎಂಸಿ ಅಧ್ಯಕ್ಷ ರಾಜಣ್ಣ ಹೂಲಿ,ಮುತ್ತಣ್ಣ ಲಿಂಗನಗೌಡ್ರ,ಅನಿಲ ಪಲ್ಲೇದ,ಗ್ರಾಪಂ ಅಧ್ಯಕ್ಷ ರಮೇಶ ಪಟ್ಟೇದ,ರವಿ ದೇಶನ್ನವರ, ಶಿವಾನಂದ ಜಿಡ್ಡಿಬಾಗಿಲ,ಬಸವರಾಜ ಕೊಟಗಿ ಹಾಗೂ ಗ್ರಾಪಂ ಸದಸ್ಯರು ಮತ್ತಿತರರು ಇದ್ದರು

ವರದಿ ವೀರಣ್ಣ ಸಂಗಳದ ರೋಣ

error: