December 20, 2024

Bhavana Tv

Its Your Channel

ಪಾಳುಬಿದ್ದ ಸ್ಥಿತಿಯಲ್ಲಿರುವ ಕರ್ನಾಟಕ ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರ ಸಮಾಧಿ, ಸ್ಮಾರಕ ನಿರ್ಮಿಸುವಂತೆ ಸರ್ಕಾರಕ್ಕೆ ಒತ್ತಾಯ

ರೋಣ: ಕರ್ನಾಟಕ ಏಕೀಕರಣದ ರೂವಾರಿಗಳ, ಸಾಹಿತಿಗಳ ನೆಲೆವೀಡಾಗಿರುವ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ನರೇಗಲ್ ಹೋಬಳಿಯ ಜಕ್ಕಲಿ ಗ್ರಾಮದಲ್ಲಿ ಕರ್ನಾಟಕ ಏಕೀಕರಣದ ರೂವಾರಿ ಹಾಗೂ ಸ್ವಾತಂತ್ರ‍್ಯ ಹೋರಾಟಗಾರರು ಆಗಿದ್ದ ಕನ್ನಡದ ಕಟ್ಟಾಳು ಅಂದಾನಪ್ಪದೊಡ್ಡಮೇಟಿ ಅವರ ಸಮಾಧಿ ಪಾಳುಬಿದ್ದ ಸ್ಥಿತಿಯಲ್ಲಿದೆ. ಅಷ್ಟೇ ಅಲ್ಲದೆ ಅಂದಾನಪ್ಪ ಡೊಡ್ಡಮೇಟಿಯವರ ಅವರ ಪುತ್ರ ಹಾಗೂ ಆದರ್ಶ ರಾಜಕಾರಣಿ, ಸಾಹಿತಿಯೂ ಆಗಿದ್ದ ಜ್ಞಾನದೇವದೊಡ್ಡಮೇಟಿ ಅವರ ಸಮಾಧಿಯು ತಂದೆಯವರ ಸಮಾಧಿ ಪಕ್ಕದಲ್ಲಿದೆ. ಅವರ ಸಮಾಧಿಯ ಮೇಲೆ ಹುಲ್ಲು ಬೆಳೆದಿದೆ. ಹೊಲದ ಕಸ ಕಡ್ಡಿ ಅವರ ಸಮಾಧಿ ಮೇಲೆ ಹಾಕಲಾಗಿದೆ.

ಹೀಗೆ ಮುಂದೊರೆದರೆ ಭವಿಷ್ಯದ ಪೀಳಿಗೆಗೆ ಕನ್ನಡದ ಕಟ್ಟಾಳು ಅಂದಾನಪ್ಪ ದೊಡ್ಡಮೇಟಿ, ಸಾಹಿತಿ ಜ್ಞಾನದೇವ ದೊಡ್ಡಮೇಟಿಯವರು ಯಾರು? ಸ್ವಾತಂತ್ರ ಹೋರಾಟ ಮತ್ತು ಕರ್ನಾಟಕ ಏಕೀಕರಣ ಹಾಗೂ ಸಾಹಿತ್ಯಕ್ಕೆ ಅವರ ಕೊಡುಗೆಗಳು ಏನು ಎಂಬುದು ತಿಳಿಯುವುದಿಲ್ಲ. ನಾಡು ನುಡಿಗೆ ಸೇವೆ ಮಾಡಿರುವ ಇಂತಹ ಮಹಾನ್ ವ್ಯಕ್ತಿಗಳಿಬ್ಬರ ಸಮಾಧಿಯನ್ನು ಸರ್ಕಾರ ಅಭಿವೃದ್ಧಿ ಪಡಿಸಿಬೇಕು ಎಂದು ಸ್ಥಳೀಯರ, ಕನ್ನಡಿಗರ ಹೋರಾಟಗಾರರ ಒತ್ತಾಯವಾಗಿದೆ.

ವರದಿ ವೀರಣ್ಣ ಸಂಗಳದ

error: