ಹೊನ್ನಾವರ ; ದುಡಿದು ತಿನ್ನುವ ವಲಸೆ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ .ಮುಂಡಗೋಡಿನ ಮಾಯಿನಲ್ಲಿಯ ೬೬ ಜನ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಇತ್ತ ಕೆಲಸವು ಇಲ್ಲದೆ ಆಹಾರವು ಇಲ್ಲದೆ ಹೊನ್ನಾವರದ ಹಳದಿಪುರದಲ್ಲಿ ಪರದಾಡುವದನ್ನು ಗಮನಿಸಿದ ತಾಲೂಕಾಡಳಿತ ಅವರನ್ನು ಹೊನ್ನಾವರದ ಬಾಲಕಿಯರ ವಸತಿ ನಿಲಯದಲ್ಲಿ ಆಶ್ರಯ ಕಲ್ಪಿಸಿ ಕೊಟ್ಟಿದ್ದಾರೆ. ಮಾನವೀಯ ನೆಲೆಯಲ್ಲಿ ಹೊನ್ನಾವರ ಲಯನ್ಸ್ ಕ್ಲಬ್ ವತಿಯಿಂದ ಒಂದು ವಾರದ ಊಟ ತಿಂಡಿಯ ವ್ಯವಸ್ಥೆ ಮಾಡಿದ್ದು ಅದಕ್ಕೆ ಬೇಕಾಗುವ ದಿನಸಿ ಸಾಮಗ್ರಿಗಳನ್ನು ಅಧ್ಯಕ್ಷರಾದ ಶ್ರೀಕಾಂತ್ ಹೆಗ್ಡೆಕರ್ ಅಲ್ಲಿಯ ವಾರ್ಡೆನ್ ಮುಕ್ತಾ ಮಡಿವಾಳ ಅವರಿಗೆ ಹಸ್ತಾಂತರಿಸಿದರು. ಲಯನ್ಸ್ ಸದಸ್ಯರಾದ ಡಾ.ನಾಗರಾಜ್ ಬೊಸ್ಕಿ.ಜೀವೋತ್ತಮ ನಾಯಕ್,ಡಿ.ಡಿ.ಮಡಿವಾಳ,ರಾಜೇಶ್ ಸಾಲೆಹಿತ್ತಲ,ಜಗದೀಶ್ ನಾಯ್ಕ್ ನೋಡಲ್ ಅಧಿಕಾರಿ ಪಿ ಡಬ್ಲ್ಯೂ ಡಿ ಇಲಾಖೆಯ ಅಧಿಕಾರಿ ಎಂ ಎಸ್ ನಾಯ್ಕ್ ಮುಂತಾದವರು ಹಾಜರಿದ್ದರು .
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ