ಹೊನ್ನಾವರ ಎ. ೦೨ : ಕಿರಾಣಿ ತರಕಾರಿ, ಔಷಧ ಮೊದಲಾದ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಪರವಾನಿಗೆ ಪಡೆಯಲು ವಿಳಂಭವಾಗುತ್ತಿದೆ. ತುರ್ತು ದೊಡ್ಡ ಆಸ್ಪತ್ರೆಗೆ ದಾಖಲಾಗಬೇಕಾದ ರೋಗಿಗಳಿಗೂ ಮತ್ತು ಅವರ ಸಹಾಯಕರಿಗೂ ಜಿಲ್ಲೆಯ ಗಡಿದಾಟಿ ಹೋಗಲು ಪರವಾನಿಗೆ ಪಡೆಯಲು ವಿಳಂಭವಾಗುತ್ತಿದೆ.
ನಗರದ ತಹಶೀಲ್ದಾರ ಕಛೇರಿಯಲ್ಲಿ ಕುಡಿಯುವ ನೀರಿನ ಉಪಕರಣ ಹಾಳಾಗಿದೆ. ಹೋಟೇಲ್‌ಗಳ ಬಂದ್ ಇರುವ ಕಾರಣ ತಾಲೂಕಾ ಆಫೀಸಿಗೆ ಬಂದವರು ದಿನಗಟ್ಟಲೆ ಕಾಯಬೇಕಾಗಿರುವುದರಿಂದ ಕುಡಿಯುವ ನೀರು ಸಿಗುತ್ತಿಲ್ಲ. ಬದಲಿ ವ್ಯವಸ್ಥೆಯನ್ನು ಕಲ್ಪಿಸದೆ ನೆಪ ಹೇಳುತ್ತಿದ್ದಾರೆ ಎಂದು ಸಾವ್ಜನಿಕರು ತಮ್ಮ ಕಷ್ಟ ತೋಡಿಕೊಳ್ಳುತ್ತಿದ್ದಾರೆ, ದಿನಗಟ್ಟಲೆ ಪರವಾನಿಗೆಗಾಗಿ ಕಾದರೂ ಪರವಾನಿಗೆ ಸಿಗುತ್ತಿಲ್ಲ. ಎರಡು ದಿನ ಕಾದ ಮೇಲೆ ಪರವಾನಿಗೆ ನೀಡಲಾಗುತ್ತಿದೆ. ಇದರಿಂದ ನಮಗೆ ತೊಂದರೆಯಾಗುತ್ತದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ನಿಗದಿತ ದಿನಾಂಕ ನಮೂದಿಸಿ, ಪರವಾನಿಗೆ ಕೊಡುವುದರಿಂದ ಇಲ್ಲೇ ಎರಡು ದಿನ ಕಾಯಬೇಕಾಗುತ್ತದೆ. ನಂತರ ಸಾಮಾನು ಖರೀದಿಸಲು ಹೋದರೆ ಅಲ್ಲಿ ಸಾಮಾನು ಸಿಕ್ಕುವುದಿಲ್ಲ ಎಂದು ವಿಷಯವನ್ನು ಶಾಸಕರ ಮತ್ತು ಮಾಧ್ಯಮದವರ ಗಮನಕ್ಕೆ ತಂದರು. ಜೀವನಾವಶ್ಯಕ ವಸ್ತುಗಳ ವಿತರಣೆಯ ಪಾಸುಗಳನ್ನು ಅರ್ಜಿ ಪಡೆದ ೬ತಾಸಿನಲ್ಲಿ ನೀಡಬೇಕು. ಮೆಡಿಕಲ್ ಎಮರ್ಜನ್ಸಿ ಇದ್ದರೆ ಕೂಡಲೇ ಪಾಸ್ ವಿತರಿಸಬೇಕು. ಆದರೆ ಇದಾವುದು ಇಲ್ಲಿ ನಡೆಯುತ್ತಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿಮಾಡಬೇಕು. ಸಕಾಲದಲ್ಲಿ ಫರ್ಮಿಟ್ ನೀಡದಿದ್ದರೆ, ಪೂರೈಕೆಯಲ್ಲಿ ವ್ಯತ್ಯಯವಾದರೆ ಅಧಿಕಾರಿಗಳೇ ಜವಾಬ್ಧಾರರೆಂದು ಶಾಸಕ ದಿನಕರ ಶೆಟ್ಟಿ ಮತ್ತು ಸುನೀಲ ನಾಯ್ಕ ಎಚ್ಚರಿಸಿದ್ದಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ