March 30, 2023

Bhavana Tv

Its Your Channel

ಹೆರಾವಲಿಯ ಆದಿಶಕ್ತಿ ಜಗನ್ಮಾತೆ ಕಾಳಮ್ಮ ದೇವಾಲಯದ ಮುಖ್ಯ ಅರ್ಚಕ ನಾಗೇಶ ನಾಯ್ಕ ಅವರಿOದ ಉಚಿತ ದಿನಸಿ ವಿತರಣೆ

ಕುಮಟಾ ತಾಲೂಕಿನ ಹೆಗಡೆಯ ಶಿವಪುರದಲ್ಲಿ ಹೊನ್ನಾವರ ತಾಲೂಕಿನ ಹೆರಾವಲಿಯ ಆದಿಶಕ್ತಿ ಜಗನ್ಮಾತೆ ಕಾಳಮ್ಮ ದೇವಾಲಯದ ಮುಖ್ಯ ಅರ್ಚಕ ನಾಗೇಶ ನಾಯ್ಕ ಅವರು ಶನಿವಾರ ಉಚಿತ ದಿನಸಿ ವಿತರಿಸಿದರು.

ಶಿವಪುರದ ಒಟ್ಟೂ ೭೨ ಮನೆಗಳಿಗೆ ಸುಮಾರು ಒಂದು ವಾರಕ್ಕೆ ಬೇಕಾಗುವ ದಿನಸಿ ತುಂಬಿದ ಚೀಲಗಳನ್ನು ನಾಗೇಶ ನಾಯ್ಕ ವಿತರಿಸಿದ್ದು ಇದನ್ನು ದೇವೀಪ್ರೇರಣೆ ಎಂದಿದ್ದಾರೆ. ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ಪರಿಶಿಷ್ಟರು ಹಾಗೂ ತೀರಾ ಹಿಂದುಳಿದ ಬಡವರೇ ಹೆಚ್ಚಿರುವ ಶಿವಪುರ ಭಾಗದಲ್ಲಿ ತಮ್ಮ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

About Post Author

error: