ಭಟ್ಕಳ: ಬೆಂಗಳೂರಿನಲ್ಲಿ ಪತಿ ಹಾಗೂ ನಾದಿನಿಯಿಂದ ಚಿತ್ರಹಿಂಸೆ ಅನುಭವಿಸಿ, ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಚೇತರಿಸಿಕೊಂಡ ಕುಂಟವಾಣಿಯ ಸುಧಾ ಶೆಟ್ಟಿಯವರಿಗೆ ತಾಲೂಕಾ ಗಾಣಿಗ ಸೇವಾ ಸಂಘವು ಇತರೆ ಸಂಘ ಸಂಸ್ಥೆಗಳ ಸಹಕಾರದಿಂದ ಸಂಗ್ರಹಿಸಿದ್ದ ರೂ.೮೦,೦೦೦-೦೦ ನಿಧಿಯನ್ನು ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಹಸ್ತಾಂತರಿಸಿದರು.
ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ಸುಧಾ ಶೆಟ್ಟಿಯವರಿಗೆ ಸಾಂತ್ವನ ಹೇಳಿದ ಹಾಗೂ ಮಾನವೀಯ ಕಾರ್ಯಕ್ಕೆ ಸಹಕರಿಸಿದ ದಾನಿಗಳು, ಸಂಘ-ಸAಸ್ಥೆಗಳನ್ನು ಅಭಿನಂದಿಸಿದರು. ಗಾಣಿಗ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ ಅವರ ಕ್ರೀಯಾಶೀಲತೆಯಿಂದ, ನಿಧಿಯನನ್ನು ಸಂಗ್ರಹಿಸುವಲ್ಲಿ ಅನೇಕರನ್ನು, ಸಂಘ-ಸAಸ್ಥೆಗಳನ್ನು ಸಂಪರ್ಕಿಸಿ ಹೆಚ್ಚಿನ ಧನ ಸಹಾಯ ಮಾಡಲು ಸಾಧ್ಯವಾಯಿತು ಎಂದರು.
ಪ್ರಕಾಶ ಶಿರಾಲಿ ಮಾತನಾಡಿ ಬೆಂಗಳೂರಿನ ತನ್ನ ಮನೆಯಲ್ಲಿ ಎರಡು ವರ್ಷಗಳ ಕಾಲ ಪತಿ ಮತ್ತು ನಾದಿನಿಯಿಂದ ಪಡಬಾರದ ಯಾತನೆಯನ್ನು ಅನುಭವಿಸಿ ಕೊನೆಗೂ ಅಲ್ಲಿಂದ ತಪ್ಪಿಸಿಕೊಂಡು ಬಂದಿರುವ ಸುಧಾ ಶೆಟ್ಟಿಯವರು ದೈಹಿಕವಾಗಿ ಗುಣಮುಖರಾಗಿದ್ದರೂ ಸಹ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅಲ್ಲದೇ ಅವರ ೬ ವರ್ಷದ ಮಗಳು ಮಾನಸಿಕವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಅವರಿಗೆ ಮಾನಸಿಕವಾಗಿ ಚಿಕಿತ್ಸೆ ನೀಡುವ ಅಗತ್ಯವಿದ್ದು ದಾನಿಗಳು ನೆರವು ನೀಡುವ ಅಗತ್ಯವಿದೆ ಎಂದರು. ನಿಧಿ ಸಂಗ್ರಹಿಸುವ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಸುಭಾಷ ಎಂ. ಶೆಟ್ಟಿ, ಶಂಕರ ಶೆಟ್ಟಿ, ಎಂ.ಆರ್. ಮುರ್ಡೇಶ್ವರ, ಸಂದೀಪ ಶೆಟ್ಟಿ ಮುಂತಾದವರ ಸಹಕಾರವನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಗಜಾನನ ಶೆಟ್ಟಿ, ಕಾರ್ಯದರ್ಶಿ ರಾಜೇಶ ಶೆಟ್ಟಿ, ವಿಜೇತ ಶೆಟ್ಟಿ, ನಿಖೇತ ಶೆಟ್ಟಿ, ಶ್ರೀಧರ ಶೆಟ್ಟಿ, ಕುಳವಾಡಿ ಶರಣೇಶ ಶೆಟ್ಟಿ ಉಪಸ್ಥಿತರಿದ್ದರು. ಸಹಾಯ ಮಾಡುವುದಾದಲ್ಲಿ ದಾನಿಗಳು ಸುಧಾ ಶೆಟ್ಟಿಯವರ ಕೆ.ವಿ.ಜಿ. ಬ್ಯಾಂಕ್ ಕೋಣಾರ ಶಾಖೆಯ ಖಾತೆ ನಂ. ೮೯೦೯೭೬೫೯೨೫೪, ಐ.ಎಫ್.ಎಸ್.ಸಿ. ನಂ. ಕೆವಿಜಿಬಿ೦೦೦೯೦೫೨ಗೆ ನೇರವಾಗಿ ಜಮಾ ಮಾಡಬಹುದು ಎಂದೂ ತಿಳಿಸಿದ್ದಾರೆ.
More Stories
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ
ನಾಗೇಶ ನಾಯ್ಕ ಹೊನ್ನೇಗದ್ದೆಯವರಿಗೆ ವಿಚಾರ ಕ್ರಾಂತಿ ರತ್ನ ಪ್ರಶಸ್ತಿ
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ