May 16, 2024

Bhavana Tv

Its Your Channel

ಸ್ನೇಹ ಜ್ಯೋತಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಮಾವಿನಕುರ್ವೆ ಕಾರ್ಯಕ್ಷೇತ್ರದ ಸ್ನೇಹ ಜ್ಯೋತಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶ ಪಡೆದದ್ದರಿಂದ ಜಿಲ್ಲೆಯ ಮಹಿಳೆಯರಲ್ಲಿ ಹೊಸ ಜೀವನ ಆರಂಭವಾಗಿದ್ದು ಶಿಸ್ತಿನ ಸಿಪಾಯಿಗಳಾಗಿದ್ದಾರೆ. ಜೀವನದಲ್ಲಿ ಶಿಸ್ತು ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುವುದು. ಅದು ನಮ್ಮ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಬೀತಾಗಿದ್ದು ಇಂದು ಅನೇಕ ಮಹಿಳೆಯರು ಸಂಘದ ಚಟುವಟಿಕೆಯಿಂದ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊAಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯ÷ಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಕೋಮಲ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಜಿಲ್ಲಾ ನಿರ್ಧೇಶಕ ಶಂಕರ ಶೆಟ್ಟಿ ಅವರು ಯೋಜನೆಯ ವ್ಯಾಪ್ತಿಯಲ್ಲಿ ಇರುವ ಸದಸ್ಯರುಗಳಿಗೆ ಅನುಕೂಲವಾಗಲು ಸೇವಾ ಕೇಂದ್ರಗಳನ್ನು ತೆರೆಯುತ್ತಿದ್ದೇವೆ. ಈಗಾಗಲೇ ಯೋಜನಾ ಕಚೇರಿಯಲ್ಲಿ ಸೇವಾ ಕೇಂದ್ರ ಆರಂಭವಾಗಿದ್ದು ಅತ್ಯಂತ ಕಡಿಮೆ ವೆಚ್ಚದಲ್ಲಿ ಸೇವೆಯನ್ನು ಪಡೆಯಲು ಸದಸ್ಯರು ಮುಂದಾಗಬೇಕು ಎಂದು ಕರೆ ನೀಡಿದರು. ಜ್ಞಾನ ವಿಕಾಸ ಕಾರ್ಯಕ್ರಮದಿಂದ ಅನೇಕರು ಪ್ರಯೋಜನವನ್ನು ಪಡೆದುಕೊಂಡಿದ್ದು ಎಲ್ಲ ಸದಸ್ಯರೂ ಇದರ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಭಟ್ಕಳ ತಾಲೂಕಾ ಯೋಜನಾಧಿಕಾರಿ ಚಂದ್ರಹಾಸ ಅವರು ಸುಜ್ಞಾನ ನಿಧಿಯನ್ನು ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದ್ದು ಪ್ರತಿಯೋರ್ವ ಸದಸ್ಯರೂ ಕೂಡಾ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯವಿದ್ದಲ್ಲಿ ಸುಜ್ಞಾನ ನಿಧಿಯನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಸುಜ್ಞಾನ ನಿಧಿಯಿಂದ ಸಹಾಯ ಪಡೆದು ಉತ್ತಮ ಸ್ಥಾನ ಪಡೆದವರ ಉದಾಹರಣೆಯನ್ನು ನೀಡಿದ ಅವರು ಅನೇಕರು ತಾವು ಗಳಿಕೆಯನ್ನು ಆರಂಭಿಸಿದ ನಂತರ ಸುಜ್ಞಾನ ನಿಧಿಗೆ ಸಹಾಯ ಮಾಡಿದ್ದನ್ನು ಸ್ಮರಿಸಿದರು.
ಸೇವಾ ಪ್ರತಿನಿಧಿ ದೀಪಾ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿನೋದಾ ಬಾಲಚಂದ್ರ ನಿರೂಪಿಸಿದರು. ಆರತಿ ವಂದಿಸಿದರು. ನಂತರ ಜ್ಞಾನ ವಿಕಾಸ ಕೇಂದ್ರದ ಮಹಿಳೆಯರಿಂದ ಭಕ್ತಿಗೀತೆ, ಜನಪದ ಗೀತೆ, ಕೋಲಾಟ, ಭಜನಾ ನೃತ್ಯ ಕಾರ್ಯಕ್ರಮ ಜರುಗಿತು

error: