March 12, 2025

Bhavana Tv

Its Your Channel

ಹಣವನ್ನು ಎಗರಿಸಲು ಹೊಂಚು ಹಾಕಿ ಓಡಾಡಿಕೊಂಡಿದ್ದ ಮಹಿಳೆಯೋರ್ವಳು ಪೊಲೀಸ ವಶಕ್ಕೆ

ಭಟ್ಕಳ: ಪ್ರವಾಸಿಗರ ಬ್ಯಾಗ್, ಪರ್ಸ್ನಲ್ಲಿರುವ ಚಿನ್ನ, ನಗದು ಹಣವನ್ನು ಎಗರಿಸಲು ಹೊಂಚು ಹಾಕಿ ಓಡಾಡಿಕೊಂಡಿದ್ದ ಮಹಿಳೆಯೋರ್ವಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪ್ರವಾಸಿ ತಾಣ ಮುರ್ಡೇಶ್ವರದಲ್ಲಿ ನಡೆದಿದೆ.

ಆರೋಪಿ ಮಹಿಳೆಯನ್ನು ಗದಗ ಜಿಲ್ಲೆಯ ದಾಕ್ಷಾಯಿಣಿ ಸಿದ್ದಾರ್ಥ ಕೊರಚಾರ (27) ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ಇದ್ದ ಕುಷ್ಟಗಿ ಮೂಲದ ರತ್ನಮ್ಮಾ , ನಾಗಮ್ಮಾ ಹಾಗು ಇನ್ನಿಬ್ಬರು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ. ಬಂಧಿತ ದಾಕ್ಷಾಯಿಣಿ ಶುಕ್ರವಾರವೂ ಮುರ್ಡೇಶ್ವರದ ದೇವಸ್ಥಾನದಲ್ಲಿ ಕಳ್ಳತನ ನಡೆಸುವಾಗಲೇ ದೇವಸ್ಥಾನದ ಕಾವಲುಗಾರರ ಕಣ್ಣಿಗೆ ಬಿದ್ದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

error: