
ಭಟ್ಕಳ: ಮನೆಗೆ ಬೀಗ ಹಾಕಿ ಹೋಗಿದ್ದನ್ನು ಉಪಯೋಗಿಸಿಕೊಂಡ ಕಳ್ಳರು ಮನೆಯ ಮುಂಬಾಗಿಲ ಬೀಗವನ್ನು ಒಡೆದು ಒಳಕ್ಕೆ ಹೊಕ್ಕು ರೂ.95,000-00 ಬೆಲೆ ಬಾಳುವ ಚಿನ್ನ ಹಾಗೂ ರೂ.24,000-00 ನಗದು ದೋಚಿ ಪರಾರಿಯಾಗಿರುವ ಘಟನೆ ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿ ನವಾಯತ ಕಾಲೋನಿಯಲ್ಲಿ ನಡೆದಿದೆ.
ದಿನಾಂಕ 22ರಂದು ಸಂಜೆ 4 ಗಂಟೆಯಿAದ 23ರ ಬೆಳಿಗ್ಗೆ 7 ಗಂಟೆಯ ನಡುವೆ ಕಳ್ಳತನ ನಡೆದಿದ್ದು ಕಳ್ಳರು ಮನೆಯೊಳಗೆ ಹೊಕ್ಕು ಮನೆಯ ಕಪಾಟಿನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು 10 ಗ್ರಾಮ ತೂಕದ ಬಂಗಾರದ ಚೈನ್ ಹಾಗೂ ಲಾಕೆಟ್, 5 ಗ್ರಾಮ ತೂಕದ ರಿಂಗ್, 10 ಗ್ರಾಮ ತೂಕದ ಬಳೆ, 5 ಗ್ರಾಮ ತೂಕದ ಕಿವಿಯ ಓಲೆ ಒಂದು ಜೊತೆ, 32 ಇಂಚ ಟಿ.ವಿ. , ಬೈಕಿನ ಆರ್.ಸಿ. ಹಾಗೂ ಬ್ಯಾಂಕ್ ಲಾಕರ್ ಕೀ, ಹಾಗೂ ನಗದು ರೂ.25,000-00 ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟೂ ಕಿಮ್ಮತ್ತು ರೂ.1,20,000-00 ಎಂದು ಅಂದಾಜಿಸಲಾಗಿದೆ.
ಈ ಕುರಿತು ಮುಡೇಶ್ವರ ಠಾಣೆಯಲ್ಲಿ ಹಾಫಿಜಾ ಗುಲ್‌ಶನ ಕೋಂ ಮಹಮ್ಮದ್ ಹಾಫಿಜ್ ಹಾಜಿಕೋಲ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಮುರ್ಡೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಕಾರವಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ