
ಭಟ್ಕಳ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರ ಸಹಕಾರದಿಂದ ಭಟ್ಕಳ ತಾಲೂಕಿನ ಕಾರ್ಮಿಕ ಕಚೇರಿ ಹಾಗೂ ಕಾರ್ಮಿಕ ಭವನಕ್ಕೆ ಒಟ್ಟೂ 2.60 ಕೋಟಿ ರೂಪಾಯಿ ಮಂಜೂರಿಯಾಗಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು.
ಅವರು ಭಟ್ಕಳ ಆನಂದ ಆಶ್ರಮ ಕಾನ್ವೆಂಟ್ ಎದುರುಗಡೆ ಕಾರ್ಮಿಕ ಭವನಕ್ಕೆ ಭೂಮಿ ಪೂಜೆ ಮಾಡಿ ನಂತರ ಮಾತನಾಡಿದರು. ಕಾರ್ಮಿಕ ಇಲಾಖೆಯು ರಾಜ್ಯದಲ್ಲಿ ಅತ್ಯಂತ ದೊಡ್ಡ ಇಲಾಖೆಯಾಗಿದ್ದು ತಾಲೂಕಿನಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳೇ ಇಲ್ಲವಾಗಿತ್ತು. ಬೇರೆ ಕಡೆಯಿರುವ ಅಧಿಕಾರಿಯನ್ನು ಭಟ್ಕಳಕ್ಕೆ ನಿಯೋಜನೆ ಮಾಡಲಾಗುತ್ತಿತ್ತು . ಅವರು ಆಗಾಗ ಬಂದು ಹೋಗುತ್ತಿದ್ದುದರಿಂದ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿತ್ತು. ಇಂದು ಕಾರ್ಮಿಕ ಇಲಾಖೆಯಲ್ಲಿ ಇನ್ಸಪೆಕ್ಟರ್ ಹಾಗು ಸಿಬ್ಬಂದಿಗಳು ಇದ್ದಾರೆ ಎಂದರೆ ಕಾರ್ಮಿಕರ ಕೆಲಸ ಅತ್ಯಂತ ಸುಲಭದಲ್ಲಿ ಆಗುತ್ತಿದೆ. ಮುಖ್ಯ ಮಂತ್ರಿಗಳು ಹಾಗೂ ಮುಖ್ಯ ಮಂತ್ರಿಗಳು ಕಾರ್ಮಿಕ ಭವನಕ್ಕೆ 2.60 ಲಕ್ಷ ಮಂಜೂರಿ ಮಾಡಿದ್ದಕ್ಕೆ ಅವರನ್ನು ಅಭಿನಂದಿಸುವುದಾಗಿ ಹೇಳಿದ ಅವರು ಕಾರ್ಮಿಕ ಇಲಾಖೆಯಲ್ಲಿ ಅನೇಕ ಯೋಜನೆಗಳನ್ನು ಸಚಿವ ಶಿವರಾಮ ಹೆಬ್ಬಾರ್ ಅವರು ನೀಡಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‌ನ್ನು ರಾಜ್ಯದಾದ್ಯಂತ ಕಾರ್ಮಿಕ ಸಚಿವರು ತರುವವರಿದ್ದಾರೆ ಎಂದೂ ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಅಕ್ಬರ್ ಹಬೀಬ್ ಮೂಲ್ಲಾ, ತಾಲೂಕಿನ ಕಾರ್ಮಿಕ ಇನ್ಸಪೆಕ್ಟರ್ ಗುರುಪ್ರಸಾದ ನಾಯ್ಕ, ಸಿಬ್ಬಂದಿಗಳಾದ ರೇಖಾ ನಾಯ್ಕ, ರತ್ನಾ ನಾಯ್ಕ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ, ಸಿ.ಐ.ಟಿ.ಯು.ನ ಜಿ.ಎನ್. ರೇವಣಕರ್, ತಾಲೂಕಾ ಅಧ್ಯಕ್ಷ ಪುಂಡಲೀಕ ನಾಯಕ, ಗುತ್ತಿಗೆದಾರರು ಮುಂತಾದವರು ಉಪಸ್ಥಿತರಿದ್ದರು.
ಧಾರ್ಮಿಕ ವಿಧಿ ವಿದಾನಗಳನ್ನು ಕಡವಿನಕಟ್ಟೆ ಅರ್ಚಕರಾದ ಪ್ರಶಾಂತ ಭಟ್ಟ ನೆರವೇರಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ