April 28, 2024

Bhavana Tv

Its Your Channel

ಭಟ್ಕಳ ತಾಲೂಕಿನ ಹವ್ಯಕ ವಲಯದ ಐದನೇಯ ಹಾಗೂ ಕೊನೆಯ ವಲಯೋತ್ಸವ ಕಾರ್ಯಕ್ರಮ

ಭಟ್ಕಳ ತಾಲೂಕಿನ ಹವ್ಯಕ ವಲಯದ ಐದನೆಯ ಹಾಗೂ ಕೊನೆಯ ವಲಯೋತ್ಸವ ಕಾರ್ಯಕ್ರಮ ಬಸ್ತಿಮಕ್ಕಿಯಲ್ಲಿರುವ ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಹವ್ಯಕ ವಲಯದ ಅಧ್ಯಕ್ಷ ಶಂಭು ಎನ್. ಹೆಗಡೆ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಹವ್ಯಕ ವಲಯದ ಮಹಿಳೆಯರಿಂದ ಕುಂಕುಮಾರ್ಚನೆ, ಭಜನಾ ತಂಡದವರಿAದ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯದ ಅಧ್ಯಕ್ಷ ಶಂಭು ಎನ್. ಹೆಗಡೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ತಾಲೂಕಿನ ಪ್ರಭಾರ ತಹಸೀಲ್ದಾರ್ ಅಶೋಕ ಎನ್. ಭಟ್ಟ ಅವರನ್ನು ವಲಯದ ವತಿಯಿಂದ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು ಇದೊಂದು ಜವಾಬ್ದಾರಿಯಾಗಿದ್ದು ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತೇನೆ ಎನ್ನುವ ಆತ್ಮವಿಶ್ವಾಸವಿದೆ. ಸರಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಲ್ಲಿ ಅಧಿಕಾರಿಗಳ ಪ್ರಾಮಾಣಿಕ ಕಾರ್ಯ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಲಯದ ಗೌರವಾಧ್ಯಕ್ಷ ವೇ. ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಅವರು ಮಾತನಾಡಿ ನಮ್ಮ ಗುರುಗಳ ಅನುಗ್ರಹದಿಂದ ನಾವು ಇಂದು ಸಂಘಟಿತರಾಗಿದ್ದೇವೆ. ಸಮಷ್ಟಿಯಿಂದ ಮಾತ್ರ ನಾವು ಶಕ್ತಿಯನ್ನು ಪಡೆಯಬಹುದು. ಯಾವುದೇ ಸಮಸ್ಯೆ ಇದ್ದರೂ ಸಹ ಬಗೆಹರಿಸಿಕೊಳ್ಳಲು ಸಂಘಟನೆ ಸಹಕಾರಿ ಎಂದರು. ಶ್ರೀ ಮಠದ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಅವರು ಕರೆ ನೀಡಿದರು.
ವಿಷ್ಣುಗುಪ್ತ ವಿಶ್ವ ವಿದ್ಯಾಲಯದ ಕಾರ್ಯದರ್ಶಿ ನೀಲಕಂಠ ಯಾಜಿ ಅವರು ಮಾತನಾಡಿ ನಾವು ಸುಸಂಸ್ಕೃತರಾಗುವ ಮೂಲಕ ರಾಷ್ಟçದ ಕೀರ್ತಿಗೆ ಭಾಜನರಾಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ನಮ್ಮ ಮಠದ ಪರಂಪರೆಯಿAದ ಮಕ್ಕಳು ಸಂಸ್ಕೃತಿ ಭಕ್ತಿ ಮಾಡುವುದನ್ನು ಕಲಿಯುತ್ತಾರೆ. ವಲಯೋತ್ಸವದಿಂದ ಆದ ಪರಿವರ್ತನೆಯನ್ನು ನಾವು ಗುರುತಿಸಬಹುದು ಎಂದೂ ಹೇಳಿದ ಅವರು ನಾವು ಶ್ರೀ ಮಠದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಶ್ರೀ ಮಠದ ಕಾಯಕ್ರಮವನ್ನ ಯಶಸ್ವೀಗೊಳಿಸೋಣ ಎಂದರು.
ಹವ್ಯಕ ಮಹಾಮಂಡಲದ ವೈದಿಕ ಪ್ರಧಾನ ವೇ.ಮೂ. ನೀಲಕಂಠ ಉಪಾಧ್ಯಾಯ, ಮಂಡಳ ಮಾತೃ ಪ್ರಧಾನ ರೇಶ್ಮಾ ಭಟ್ಟ, ವಲಯ ವಿ.ವಿ. ಸಂಚಾಲಕ ಮಹಾಬಲೇಶ್ವರ ಹೆಗಡೆ, ವಲಯ ಉಪಾಧ್ಯಕ್ಷ ಭಾಲಕೃಷ್ಣ ಶಾಸ್ತಿçç ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಲಯದ 8 ಭಾಗಗಳ ಗುರಿಕಾರರನ್ನು ಗೌರವಿಸಲಾಯಿತು. ವಲಯದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸುವ ಕೋಶಾಧ್ಯಕ್ಷ ಪ್ರಕಾಶ ಭಟ್ಟ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ವಲಯ ಕಾರ್ಯದರ್ಶಿ ಮಂಜುನಾಥ ಹೆಗಡೆ ಕೊರ್ಲಿಕಾನ್ ಕಾರ್ಯಕ್ರಮ ನಿರೂಪಿಸಿ, ಶ್ರೀಮಠದ ಕಾರ್ಯಕ್ರಮಗಳ ವಿವರವನ್ನು ನೀಡಿದರು. ಶಾಂತಿ ಮಂತ್ರ ಹಾಗೂ ಶಂಖನಾದದೊAದಿಗೆ ಸಭಾ ಕಾರ್ಯಕ್ರಮ ಮುಕ್ತಾಯವಾಯಿತು.

error: