April 29, 2024

Bhavana Tv

Its Your Channel

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಶಿಕ್ಷಣ ಸಚಿವರಲ್ಲಿ ಐಟಾ ಕರ್ನಾಟಕ ಮನವಿ

ಭಟ್ಕಳ: ರಾಜ್ಯದ ಸರ್ಕಾರಿ, ಅನುದಾನಿತ ಮತ್ತುಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಶಿಕ್ಷಕರ ಮತ್ತು ಶಿಕ್ಷಣ ಇಲಾಖೆ ಸಂಬAಧಿಸಿದ ಎಲ್ಲರೀತಿಯ ಸಮಸ್ಯೆಗಳಿಗೆ ಕೂಡಲೆ ಪರಿಹಾರಕಂಡುಕೊAಡು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಆಲ್‌ಇಂಡಿಯಾಐಡಿಯಲ್‌ಟೀರ‍್ಸ್ ಅಸೋಸಿಯೇಶನ್ ಕರ್ನಾಟಕರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.

ಶನಿವಾರ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಜರಿಗಿದ ಉತ್ತರ ಕನ್ನಡ ಜಿಲ್ಲಾ ಮಹಿಳಾ ಶಿಕ್ಷಕಿಯರ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ರಿಗೆ ಶಿಕ್ಷಕರ ಸಮಸ್ಯೆಗಳ ಕುರಿತು ಮನವಿ ಪತ್ರವನ್ನು ಅರ್ಪಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಆಲ್ ಇಂಡಿಯಾ ಐಡಿಯಲ್ ಟೀರ‍್ಸ್ ಅಸೋಸಿಯೇಶನ್(ರಿ) ‘ಐಟಾ’ವು ಸಮಾಜದಲ್ಲಿ ಶಿಕ್ಷಕರ ಸ್ಥಾನಮಾನವನ್ನು ಉನ್ನತೀಕರಿಸಲು, ಅವರನ್ನು ಹೊಣೆಗಾರಿಕೆಗಳ ಕುರಿತು ಸೂಕ್ಷö್ಮಜ್ಞರನ್ನಾಗಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದ ಅವರು, ಇದು ಶಿಕ್ಷಕ ಸಮುದಾಯದ ಒಂದು ಪ್ರಬಲ ಮತ್ತು ವಿಶ್ವಸನೀಯ ರಾಷ್ಟಿçÃಯ ವೇದಿಕೆಯಾಗಿದೆ. ಇದರ ಮೂಲಭೂತ ಉದ್ದೇಶವು ಶಿಕ್ಷಕರಿಗೆ ಅವರ ಪರಮಗುರಿಯನ್ನು ನೆನಪಿಸಿ ಕೊಡುವುದು ಮತ್ತು ಅವರಲ್ಲಿ ಹೊಣೆಗಾರಿಕಾ ಪ್ರಜ್ಞೆಯನ್ನು ಹುಟ್ಟಿಸುವುದು; ಅಂತೆಯೇ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಮತ್ತು ಅವರ ಅರ್ಹ ಹಕ್ಕುಗಳಿಗಾಗಿ ಪರಿಶ್ರಮ ಪಡುವುದಾಗಿದೆ ಎಂದರು.

ಬೇಡಿಕೆಗಳು:

  1. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟವನ್ನು ಹೆಚ್ಚಿಸಬೇಕು.
  2. ಎಲ್ಲ ಮಾಧ್ಯಮದ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ನೋಡಿಕೊಳ್ಳಬೇಕು.
  3. ವಿದ್ಯಾರ್ಥಿಗಳುಆರೋಗ್ಯ ಮತ್ತು ಶಿಸ್ತನ್ನು ಕಾಪಾಡುವಲ್ಲಿದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಬಹಳ ಮುಖ್ಯ. ಆದ್ದರಿಂದಎಲ್ಲ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಿಓರ್ವದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.
  4. ಶಾಲೆಗಳು ಪ್ರಾರಂಭಕ್ಕೂ ಪೂರ್ವ ಪಠ್ಯಪುಸ್ತಕಗಳು ಲಭಿಸುವಂತೆ ನೋಡಿಕೊಳ್ಳಬೇಕು.
  5. ಅತಿಥಿ ಶಿಕ್ಷಕಕರನ್ನು ಅಕ್ಟೋಬರ್ ತಿಂಗಳಲ್ಲಿ ನೇಮಿಸದೆ ಶೈಕ್ಷಣಿಕ ವರ್ಷದಆರಂಭದಲ್ಲೇ ನೇಮಕವಾಗುವಂತೆಕ್ರಮಜರಗಿಸಬೇಕು.
  6. 1995ರಿಂದ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕವಾಗಿರುವುದಿಲ್ಲ. ಕೂಡಲೇ ನಿರ್ಬಂಧವನ್ನು ತೆರವುಗೊಳಿಸಿ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು. ಹಾಗೂ 1995 ರ ನಂತರಆರAಭಗೊAಡ ಖಾಸಗಿ ಅನುದಾನರಹಿತ ಪ್ರಾಥಮಿಕ ಪ್ರೌಢಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು.
  7. ಅಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೂ ಅನುದಾನ ನೀಡಬೇಕು.
  8. ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರಿಗೆ ಸೇವಾಭದ್ರತೆಜಾರಿಯಲ್ಲಿದ್ದರೂಕೂಡಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ. ಶಿಕ್ಷಕರಿಗೆ ಸೇವಾ ಭದ್ರತೆ ಮತ್ತುಕಡ್ಡಾಯವಾಗಿ ಕನಿಷ್ಠ ವೇತನ ನೀಡುವಂತೆ ಆಡಳಿತ ಮಂಡಳಿಗಳಿಗೆ ಆದೇಶಿಸಬೇಕು.
  9. ಕೋವಿಡ್ ಪರಿಹಾರಧನವಾಗಿ ಬಿಡುಗಡೆಗೊಳಿಸಿದ 5000 ರೂಗಳನ್ನು ಖಾಸಗಿ ಶಾಲೆಯಲ್ಲಿಕಾರ್ಯನಿರ್ವಹಿಸುತ್ತಿರುವಎಲ್ಲ ಶಿಕ್ಷಕರಿಗೂ ಸಿಗುವಂತಾಗಬೇಕು. ಅಲ್ಲದೆ ಮುಂದಿನ ಐದು ವರ್ಷಗಳ ವರೆಗೆ ಪ್ರತಿ ವರ್ಷ 10000 ರೂ ಪರಿಹಾರಧನ ಬಿಡುಗಡೆಗೊಳಿಸಬೇಕು.
  10. ಈಗಿರುವ ಶಿಕ್ಷಕರ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆತಂದುಎಲ್ಲರಿಗೂ ವರ್ಗಾವಣೆಯಲ್ಲಿ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು.
  11. ಟಿ.ಇ.ಟಿ ಪರಿಕ್ಷಾರ್ಥಿಗಳಿಗೆ ಅಂಕ ನೀಡುವಲ್ಲಿ ವಿನಾಯತಿ ನೀಡಿದಂತೆ ಸಿ.ಇ.ಟಿ ಪರೀಕ್ಷಾರ್ಥಿಗಳಿಗೂ ಕನಿಷ್ಠ ಪಕ್ಷ 5 ಅಂಕಗಳಿಗೆ ವಿನಾಯತಿ ನೀಡಬೇಕು.
  12. ರಾಜ್ಯದಎಲ್ಲ ಜಿಲ್ಲೆಗಳಲ್ಲಿ ಉರ್ದು ಇಸಿಒ ಹುದ್ದೆಯಿದ್ದುಉರ್ದುಮಾದ್ಯಮದ ವಿಷಯವಾರು ಇಸಿಒ ಹುದ್ದೆಗಳನ್ನು ಸೃಷ್ಟಿಸಬೇಕು. ಅಲ್ಲದೆತಾಲೂಕು ಹಂತದಲ್ಲಿಓರ್ವಉರ್ದು ವಿಷಯ ಬಲ್ಲ ವ್ಯಕ್ತಿಯನ್ನು ಬಿ.ಆರ್.ಪಿ ಯನ್ನಾಗಿ ನೇಮಕ ಮಾಡಬೇಕು.
  13. ರಾಜ್ಯದಎಲ್ಲ ಸರ್ಕಾರಿಉರ್ದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕನ್ನಡ ಶಿಕ್ಷಕರನ್ನು ಕಡ್ಡಾಯವಾಗಿ ನೇಮಕವಾಗಬೇಕು.
  14. ಎನ್.ಇ.ಪಿ ಸಮರ್ಪಕ ಜಾರಿಗೊಳಿಸುವಲ್ಲಿ ಶಿಕ್ಷಕರಿಗೆ ತರಬೇತಿ ನೀಡಬೇಕು.
  15. ಎನ್.ಇ.ಪಿ ಸ್ವಯಂ ಸೇವಕರನ್ನು/ ಕಾರ್ಯಕರ್ತರನ್ನು ತರಬೇತುಗೊಳಿಸುವಲ್ಲಿ ಆಲ್‌ಇಂಡಿಯಾಐಡಿಯಲ್‌ಟೀರ‍್ಸ್ ಅಸೋಸಿಯೇಶನ್ ಸರ್ಕಾರಕ್ಕೆ ಸಹಕಾರ ನೀಡಲು ಸದಾ ಸಿದ್ದರಿದ್ದು ಉನ್ನತ ಮಟ್ಟದ ಸಭೆಗಳಲ್ಲಿ ಐಟಾದ ಪ್ರತಿನಿಧಿಯನ್ನುಆಹ್ವಾನಿಸಬೇಕು.
error: