April 29, 2024

Bhavana Tv

Its Your Channel

ಭಟ್ಕಳ ಕೋಟಖಂಡದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ

ಭಟ್ಕಳ ತಾಲೂಕಿನ ಕೋಟಖಂಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಒಟ್ಟೂ 46 ಅರ್ಜಿಗಳು ಬಂದಿದ್ದು ಅವುಗಳಲ್ಲಿ 29 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಿ ತಹಸೀಲ್ದಾರ್ ಅಶೋಕ ಭಟ್ಟ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಅವುಗಳಲ್ಲಿ 13 ಸಂಧ್ಯಾ ಸುರಕ್ಷಾ, 3 ವಿಧವಾ ವೇತನ, 1 ಅಂಗವಿಕಲರ ವೇತನ ಸೇರಿದ್ದು 1 ಚುನಾವಣಾ ಗುರುತಿನ ಚೀಟಿ ಸಮಸ್ಯೆ ಸೇರಿದೆ. ಉಳಿದ 15 ಅರ್ಜಿಗಳು ಬೇರೆ ಬೇರೆ ಕಾರಣದ್ದಾಗಿದ್ದು ಅವುಗಳನ್ನು ಕೂಡಾ ಇತ್ಯರ್ಥ ಪಡಿಸಲಾಯಿತು. ಬೇರೆ ಇಲಾಖೆಗಳಿಗೆ ಸೇರಿದ 9 ಅರ್ಜಿಗಳನ್ನು ಆಯಾಯ ಇಲಾಖೆಗೆ ರವಾನಿಸಲಾಗಿದ್ದು 5 ಅರ್ಜಿಗಳನ್ನು ಸ್ಥಳದಲ್ಲಿಯೇ ತಿರಸ್ಕರಿಸಲಾಯಿತು. ಒಟ್ಟಾರೆ ಕಾರ್ಯಕ್ರಮ ಅತ್ಯಂತ ಯಶಸ್ವೀಯಾಗಿದ್ದು ಸಂಪೂರ್ಣ ಕಾರ್ಯಕ್ರಮವನ್ನು ತಹಸೀಲ್ದಾರ್ ನಿಭಾಯಿಸಿದ್ದು ವಿಶೇಷವಾಗಿತ್ತು.
ಜನರು ತಮ್ಮ ಸಮಸ್ಯೆಗಳ ಬಗ್ಗೆ ಉಪಸ್ಥಿತರಿದ್ದ ಶಾಸಕರು ಮತ್ತು ತಹಸೀಲ್ದಾರರ ಅರ್ಜಿಗಳನ್ನು ಸಲ್ಲಿಸಿ ಪರಿಹಾರಕ್ಕೆ ಆಗ್ರಹಿಸಿದ್ದು ಸಂಧ್ಯಾ ಸುರಕ್ಷಾ, ವಿಧವಾ ವೇತನ, ಸಾಮಾಜಿಕ ಪಿಂಚಣಿ, ಪಹಣಿ ಪತ್ರಿಕೆಯಲ್ಲಿನ ವ್ಯತ್ಯಾಸ, ಹೆಸರು ಸೇರ್ಪಡೆ, ಹೆಸರು ಕಡಿಮೆ ಮಾಡುವುದು, ಸರ್ವೆ ಇಲಾಖೆಗೆ ಸಂಬAಧ ಪಟ್ಟಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಿದ್ದರು.
ಅಂತ್ರವಳ್ಳಿ ಗ್ರಾಮಸ್ಥರು ತಮ್ಮೂರಿನಲ್ಲಿ ಸ್ಥಗಿತಗೊಂಡಿದ್ದ ಶಾಲೆಯಲ್ಲಿ ಪುನರಾರಂಭಿಸುವAತೆ ಮನವಿ ಸಲ್ಲಿಸಿದರು. ಇತ್ತೀಚೆಗೆ ಕಂದಾಯ ಇಲಾಖೆಯಿಂದ ಮನೆ ಬಾಗಿಲಿಗೆ ತಲುಪಿಸಲಾದ ದಾಖಲೆಗಳ ಬಗ್ಗೆಯೂ ಪ್ರಶ್ನಿಸಲಾಯಿತು. ಮಾರುಕೇರಿಯ ಮಾಜಿ ಪಟೇಲರಾದ ಶ್ರೀನಿವಾಸ ಹೆಬ್ಬಾರ ಅವರು ತಮಗೆ 85 ವರ್ಷ ಆಗಿದ್ದು, ಹಲವು ವರ್ಷಗಳಿಂದ ಸರಕಾರದ ಬಳಿ ಪಟೇಲರ ಮಾಸಾಶನ ನೀಡುವಂತೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈ ಕಾರ್ಯಕ್ರಮದಲ್ಲಾದರೂ ಮಾಸಾಶನ ಬಿಡುಗಡೆಗೊಳಿಸಿ ಎಂದು ಶಾಸಕರು ಮತ್ತು ತಹಸೀಲ್ದಾರರ ಬಳಿ ಮನವಿ ಮಾಡಿದರು. ಗ್ರಾಮಾಂತರ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದು, ಬೆಳೆ ಹಾನಿಯಾಗುತ್ತಿದ್ದು ಸೂಕ್ತ ಪರಿಹಾರ ಒದಗಿಸಬೇಕು. ಅತಿಕ್ರಮಣ ಸಕ್ರಮಕ್ಕೆ ಅರ್ಜಿ ಸಲ್ಲಿಸಿ ಹಲವು ವರ್ಷಗಳೇ ಸಂದಿದ್ದು, ಪಟ್ಟಾ ಕೊಡಬೇಕು. ಬೆಳೆ ರಕ್ಷಣೆ ಬಂಧೂಕ ಲೈಸೆನ್ಸ ನವೀಕರಣವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೇ ಮಾಡಿಕೊಡಬೇಕು. ಹಲವು ಕಡೆ ರಸ್ತೆ, ಗಟಾರ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಹಲವು ಬೇಡಿಕೆಗಳನ್ನು ಸಲ್ಲಿಸಲಾಯಿತು. ಅರ್ಜಿಗಳನ್ನು ಸ್ವೀಕರಿಸಿದ ಶಾಸಕರು ಮತ್ತು ತಹಸೀಲ್ದಾರರು ಸಮರ್ಪಕರವಾಗಿ ಜನತೆಗೆ ಉತ್ತರ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಅಶೋಕ ಭಟ್ಟ ಅವರು ಇತರ ಅಧಿಕಾರಿಗಳೊಂದಿಗೆ ಅಲ್ಲಿನ ಅಂಗನವಾಡಿಗೆ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಪರಿಶಿಷ್ಟ ಪಂಗಡದವರ ಕೇರಿಗೆ ಭೇಟಿ ನೀಡಿದ ಅವರು ಜನರ ಸಮಸ್ಯೆಯನ್ನು ಖುದ್ದು ಆಲಿಸಿದರು. ಒಟ್ಟಾರೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಯಶಸ್ವೀಯಾಯಿತು.

error: