December 20, 2024

Bhavana Tv

Its Your Channel

ಆನೇಕಲ್ ದೊಡ್ಡಯ್ಯರವರ ಜನಸಂಪರ್ಕ ಕಾರ್ಯಾಲಯ ಉದ್ಘಾಟನೆ

ರೋಣ :-ಆನೇಕಲ್ ದೊಡ್ಡಯ್ಯರವರ ಜನಸಂಪರ್ಕ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆನೇಕಲ್ ದೊಡ್ಡಯ್ಯ ಅವರು ನಮ್ಮ ದೇಶ ಪ್ರಜಾಪ್ರಭುತ್ವದ ದೇಶವಾಗಿದೆ ಯಾರು ಬೇಕಾದರೂ ಎಲ್ಲಿ ಬೇಕಾದರೂ ರಾಜಕೀಯದಲ್ಲಿ ಸ್ಪರ್ಧೆ ಮಾಡಬಹುದು.ಎಲ್ಲಿ ಜನ ಯಾರನ್ನು ಆಪೇಕ್ಷೆ ಮಾಡುತ್ತಾರೋ ಅವರು ಅಲ್ಲಿ ಜನಸೇವೆಗೆ ಸಿದ್ಧರಾಗುತ್ತಾರೆ ಯಾರೇ ತಡೆದರೂ ನಿಲ್ಲುವವರು ನಾವಲ್ಲ. ಯಾರ ಬೆದರಿಕೆಗೂ ಹೆದರುವ ಅವಶ್ಯಕತೆಯಿಲ್ಲ ನಮಗೆ ತಡೆದಷ್ಟು ನಾವು ಪುಟಿದೇಳುತ್ತೇವೆ ಈ ಭಾಗದ ಜನರ ಸೇವೆ ಮಾಡಲು ನಾವು ಬಂದಿದ್ದೇವೆ ಈ ಭಾಗದ ಜನರ ಆಸೆಯೂ ಸಹ ಇದಾಗಿದೆ.ಈಗಾಗಲೇ ನಮ್ಮ ಈ ಕಾರ್ಯಕ್ರಮ ನಡೆಸದಂತೆ ಅನೇಕರು ಪೊಲೀಸರಿಗೆ ತಿಳಿಸಿದ್ದಾರೆ. ದಾರಿ ಬಿಡದಂತೆ ಸೂಚಿಸಿದ್ದಾರೆ ಜನರಿಗೆ ಬ್ಲಾಕ್ ಮೇಲ್ ಮಾಡಿದ್ದಾರೆ ಎಲ್ಲವೂ ನಮಗೆ ತಿಳಿದಿದೆ. ಅಲ್ಲಿಂದ ಇಲ್ಲಿಗೆ ಬಂದು ರಾಜಕಾರಣ ಮಾಡುವಂತ ಅನಿವಾರ್ಯ ಎಂಬ ಪ್ರಶ್ನೆಗೆ ಮುಂದಿನ ದಿನಮಾನಗಳಲ್ಲಿ ಉತ್ತರ ನೀಡುತ್ತೇನೆ ಮತ್ತು ಹಾಲುತದ ಸಮಾಜದ ಮತ್ತು ಇತರೆ ಸಮಾಜ ಅನ್ಯಾಯವಾದಾಗ ಅಲ್ಲಿ ಬಂದು ನಿಲ್ಲುವ ಕರ್ತವ್ಯ ನನ್ನದು ಎಂದರು.

ಕಾರ್ಯಕ್ರಮದಲ್ಲಿ ಆನೇಕಲ್ ದೊಡ್ಡಯ್ಯ , ಹುಲಜಂತಿ ಮಾಳಿಂಗರಾಯ ಮಹಾರಾಜರು, ಖ್ಯಾತ ವಾಗ್ಮಿ. ಮೋಹನ ಮೇಟಿ ಯವರು, ಮಲ್ಲಿಕಾರ್ಜುನ ಬೇವಿನಮರದ ರವರು, ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕರಾದ ಕಳಕನಗೌಡ ಗೌಡರ, ಶಿದ್ದಯ್ಯ ಮಠದ, ಪ್ರಕಾಶ ಭಜೇಮ್ಮನವರ,ಶಿದ್ದಪ್ಪ ಉಂಡAಡಿ, ಪರಶುರಾಮ ಜಾಲಿಹಾಳ,ಪಡಿಯಪ್ಪ ಇಟಗಿ ಮುಂತಾದ ಹಿರಿಯ ಮುಖಂಡರು ಉಪಸ್ಥಿತರಿದ್ದರು

ವರದಿ: ವೀರಣ್ಣ ಸಂಗಳದ

error: