April 29, 2024

Bhavana Tv

Its Your Channel

ವಿಜೃಂಭಣೆಯಿOದ ಜರುಗಿದ ರೋಣದ ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವ

ರೋಣ: ವೀರಭದ್ರೇಶ್ವರ ದೇವಾಲಯ ಜಾತ್ರಾ ಮಹೋತ್ಸವ ಹಾಗೂ ಉತ್ಸವ ಅದ್ದೂರಿಯಾಗಿ ಜರುಗಿತು. ವೀರಭದ್ರೇಶ್ವರ ದೇವಾಲಯ ತನ್ನದೇ ಆದ ಇತಿಹಾಸ ಹೊಂದಿದ್ದು ಉಗ್ರ ಸ್ವರೂಪದ ದೇವರು ಎಂದು ಹೆಗ್ಗಳಿಕೆ ಪಡೆದಿರುವ ಈ ದೇವಾಲಯಕ್ಕೆ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿ ಪೂಜೆ ಪುನಸ್ಕಾರ ಸಲ್ಲಿಸುತ್ತಾರೆ.

ಸಾವಿರಾರು ಸಂಖ್ಯೆಯ ಜನಸ್ತೋಮ ಮಧ್ಯೆ ಸಂಜೆ ವೇಳೆಗೆ ಅದ್ದೂರಿಯಾಗಿ ರಥೋತ್ಸವ ಎಳೆಯಲಾಯಿತು ಪಾಲಿಕೆ ಉತ್ಸವ ಮತ್ತು ಒಡಪುಗಳು ಹೇಳುವುದರ ಮೂಲಕ ಸಂಜೆ ದೇವಾಲಯ ವೀರಭದ್ರೇಶ್ವರ ದೇವರಿಗೆ ಪೂಜೆ ಸಲ್ಲಿಸಿ,ಪಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ.ಐದು ಸುತ್ತು ಪ್ರದರ್ಶನ ಹಾಕಿ ನಂತರ ಸ್ವಾಮೀಜಿಗಳು ನಡೆದುಕೊಂಡು ಹೋಗುತ್ತಾರೆ.
ಪ್ರತಿ ವರ್ಷದಂತೆ ಶ್ರೀ ಶಾಲಿವಾಹನ ಶಕೆ ೧೯೪೪ ಶುಭಕೃತನಾಮ ಸಂವತ್ಸರ ವೈಶಾಖ ಮಾಸ ಶುಕ್ಲಪಕ್ಷ ನವಮಿ ತಿಥಿ, ನಕ್ಷತ್ರ ದಿನಾಂಕ : ೧೦-೫-೨೦೨೨ ಮಂಗಳವಾರ ಸಂಜೆ ೬-೩೦ ಗಂಟೆಗೆ ರೋಣ ನಗರದಲ್ಲಿ ಶ್ರೀ ವೀರಭದ್ರೇಶ್ವರ ರಥೋತ್ಸವವು ಒಳ್ಳೆ ವಿಜೃಂಭಣೆಯಿAದ ಸಕಲ ಪೂಜೆ, ಮಂತ್ರೋಪಚಾರ ವ, ಶಿಷ್ಟಾಚಾರ ಪ್ರಕಾರ ಶ್ರೀ ಜಿ. ಬಿ. ಜಕ್ಕನಗೌಡ್ರ ತಹಶೀಲ್ದಾರ ರೋಣ ಇವರ ಘನ ಅಧ್ಯಕ್ಷತೆಯಲ್ಲಿ ನಗರದ ಗಣ್ಯ ನಾಗರಿಕರು, ಶ್ರೀ ವೀರಭದ್ರ ದೇವರ ನಗರದ ಸದ್ಭಕ್ತರು ಟ್ರಸ್ಟ ಕಮೀಟಿಯ ಸದಸ್ಯರ ಉಪಸ್ಥಿತಿಯಲ್ಲಿ ಜರುಗುವದು
೧೦-೦೫-೨೦೨೨ ಮಂಗಳವಾರ ಮುಂಜಾನೆ ಗುಗ್ಗಳ ಮೆರವಣಿಗೆ , ೧೦-೫-೨೦೨೨ ಮಂಗಳವಾರ ಸಾ. ೬-೩೦ ಘಂಟೆಗೆ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವವು , ೧೧-೦೫-೨೦೨೨ ಬುಧವಾರ ಕಡಬಿನ ಕಾಳಗ, ೧೨-೦೫-೨೦೨೨ ಗುರುವಾರ ದಿವಸ ಓಕಳ, ೧೪-೦೫-೨೦೨೨ ಶನಿವಾರ ರಾತ್ರಿ ೮ ಘಂಟೆಗೆ ಕಳಸ ವಿಸರ್ಜನೆ ಕಂಕಣ ಬಿಚ್ಚುವುದು ಎಂದು ಟ್ರಸ್ಟ್ ಕಮಿಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ವರದಿ: ವೀರಣ್ಣ ಸಂಗಳದ

error: