December 21, 2024

Bhavana Tv

Its Your Channel

ಶಾಲೆ ಆರಂಭ, ಮಕ್ಕಳಿಗೆ ಪುಷ್ಪ ನೀಡಿ ಸ್ವಾಗತ

ಬಾಗಲಕೋಟೆ:– 2022 -23ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ಶಾಲೆಯ ಎಲ್ಲಾ ಕೊಠಡಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಕ್ಕಳಿಗೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ.ಎನ್. ಪೂಜಾರಿ ಹಾಗೂ ಪಟ್ಟಣ ಪಂಚಾಯತ್ ಸದಸ್ಯರಾದ ದೇವಿಪ್ರಸಾದ್ ನಿಂಬಲಗುAದಿ ಹೂಗುಚ್ಚ ನೀಡುವುದರ ಮೂಲಕ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಾಗೇಶ ಮುರಾಳ, ಸಿ.ಆರ್.ಪಿ.ಗಳಾದ ಪಿ.ಎಸ್.ಚವ್ಹಾಣ, ಎಂ.ಪಿ.ಎಸ್. ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಪ್ರಾರಂಭೋತ್ಸವ ಮೊದಲ ದಿನ ಮಕ್ಕಳು ಖುಷಿಯಿಂದ ತರಗತಿಗೆ ಹಾಜರಾದರು.

ವರದಿ: ಮಾಂತೇಶ ಕುರಿ

error: