May 2, 2024

Bhavana Tv

Its Your Channel

ಶ್ರೀ ರಾಮಲಿಂಗ ಚೌಡೇಶ್ವರಿ ಉತ್ಸವ

ಕಮತಗಿ: ಪಟ್ಟಣದ ದೇವಾಂಗ ಸಮಾಜದ ದೇವತೆ ಶ್ರೀ ರಾಮಲಿಂಗ ಚೌಡೇಶ್ವರಿ ಉತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಮಾಡಲಾಯಿತು. ಮಧ್ಯಾಹ್ನ ಅರ್ಚಕ ಚಂದ್ರಶೇಖರ್ ಅಳ್ಳಿಮನಿ ದೇವಿಯ ಮುಖವಾಡ ಧರಿಸಿ ಊರಿನ ಬೀದಿಗಳಲ್ಲಿ ಸಂಚರಿಸಿ ಕೋಲಾಟ ಆಡುತ್ತಾ. ಕೋಲಿನ ದಂಡದ ಮೂಲಕ ಎದುರಾಳಿಯನ್ನು ಬಂಧಿಸುವ ಮೂಲಕ ಅವರಲ್ಲಿದ್ದ ದೌರ್ಬಲ್ಯ ನನ್ನು ದಂಡಿಸಿ ಚುರುಕುತನ ಮೂಡಿಸುವ ಮೂಲಕ ಕೊನೆಗೆ ಶರಣಾಗುವ ಭಕ್ತರಿಗೆ ಆಶೀರ್ವದಿಸುತ್ತಾಳೆ ಇಲ್ಲಿನ ಚೌಡೇಶ್ವರಿ.

ತೆಂಗಿನಕಾಯಿ ಸವಾಲು ವಿಶೇಷ*
ಬಾದ್ಮಿ ಅಮವಾಸ್ಯೆಯ ಐದು ದಿನಗಳ ಮೊದಲು ಘಟ ಸ್ಪಾಪನೆ ವೇಳೆ ಸಂಕಲ್ಪಕ್ಕಿಟ್ಟ ಐದು ಭೂಮಿತಾಗದ ತೆಂಗಿನಕಾಯಿಗಳನ್ನು ಊರ ಹೃದಯಭಾಗವಾದ ಸುತ್ತುಗಟ್ಟಿಯಲ್ಲಿ ದೇವಾಂಗ ಸಮಾಜಸ್ಥರು ಬಹಿರಂಗ ಸವಾಲು ಮಾಡುತ್ತಾರೆ. ಆ ತೆಂಗಿನಕಾಯಿಗಳನ್ನು ಸವಾಲಿನಲ್ಲಿ ಪಡೆಯುವ ಭಕ್ತರು ತಮ್ಮ ಮನೆಯ ಜಗುಲಿಯ ಮೇಲೆ ಪೂಜಿಸುತ್ತಾ, ತಮ್ಮ ಬೇಕು ಬೇಡಿಕೆಗಳನ್ನು ಆ ತೆಂಗಿನಕಾಯಿಗೆ ಸಂಕಲ್ಪಿಸುತ್ತಾರೆ.

ದೇವಿಯ ಅವತಾರ ವಿವರಿಸುವ ಸಿಂಗದ:-
ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರು ಭಕ್ತರ ಪಾಲಿನ ಕಾಮಧೇನು ಎನ್ನುವ ಸ್ಥಳೀಯ ದೇವಾಂಗ ಸಮಾಜದ ಸೇವಕ ಯಲ್ಲಪ್ಲ ಬಾಬಣ್ಣ ಸಿಂಗದ ಊರ ಗಾಂಧಿಚೌಕದಲ್ಲಿ ಕಾಯಿ ಸವಾಲಿ ಕಾರ್ಯಕ್ರಮ ಜರುಗಿತು.

ವರದಿ. ಮಹಾಂತೇಶ್ ಕುರಿ

error: