December 22, 2024

Bhavana Tv

Its Your Channel

ಶ್ರೀ ಸಾಯಿಕಲ್ಯಾಣ ಮಂಟಪದಲ್ಲಿ ಖಾನಾವಳಿ ಚೆನ್ನಿ ಎಂಬ ನಾಟಕ ಪ್ರದರ್ಶನ

ರೋಣ ನಗರದಲ್ಲಿ ಶ್ರೀಮಂಜುನಾಥ ನಾಟ್ಯಸಂಘ ರಾಣೆಬೆನ್ನೂರು ಇವರಿಂದ ಸಂಘದ ಕಲಾವಿದೆಯ ಮದುವೆಯ ಸಹಾಯಾರ್ಥವಾಗಿ ರೋಣ ನಗರದ ಶ್ರೀ ಸಾಯಿಕಲ್ಯಾಣ ಮಂಟಪದಲ್ಲಿ ದಿನಾಂಕ 11:06 2022. ಶನಿವಾರ ಮತ್ತು ದಿನಾಂಕ 12 6 2022 ರವಿವಾರ ಸಂಜೆ 6 ಗಂಟೆಯಿAದ 9 ಗಂಟೆಯವರೆಗೆ ಖಾನಾವಳಿ ಚೆನ್ನಿ ಎಂಬ ನಾಟಕ ಪ್ರದರ್ಶನ ನಡೆಯಲಿದೆ
ಕಾರ್ಯಕ್ರಮದ ಉದ್ಘಾಟಕರಾಗಿ ಶಾಸಕಕಳಕಪ್ಪ ಜಿ ಬಂಡಿ ವಿಶೇಷ ಆಹ್ವಾನಿತರಾಗಿ ಮಾಜಿ ಶಾಸಕ
ಜಿಎಸ್ ಪಾಟೀಲ ,ತಹಶಿಲ್ದಾರ ಕುಮಾರಿ ವಾಣಿ ಉಂಕಿ ಹಾಗೂ ನಗರದ ಸಮಸ್ತ ಗುರುಹಿರಿಯರು ಈ ನಾಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಇದೇ ಸಂದರ್ಭದಲ್ಲಿ ಖಾನಾವಳಿ ಚೆನ್ನಿ ಎಂಬ ನಾಟಕದಲ್ಲಿ ಧಾರಾವಾಹಿಯ ಕಲಾವಿದೆ ಅಗ್ನಿಸಾಕ್ಷಿ. ಸತ್ಯ ಕೃಷ್ಣ ಸುಂದರಿ ನಟಿ ಚಂದ್ರಿಕಾ ಇವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುವವರು. ಎಂದು ಮಲ್ಲಿಕಾರ್ಜುನ ಚಿಕ್ಕಮಠ ಹಾಗೂ ಶ್ರೀದೇವಿ ಚಿಕ್ಮಠ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಾಯಿ ಕಲ್ಯಾಣ ಮಂಟಪದ ಮಾಲೀಕರಾದ ವಿಶ್ವನಾಥ ಜಿಡ್ಡಿಬಾಗಿಲ ರವರು ಉಪಸ್ಥಿತರಿದ್ದರು

ವರದಿ: ವೀರಣ್ಣ ಸಂಗಳದ

error: