December 21, 2024

Bhavana Tv

Its Your Channel

ತಾಳಿಕೋಟೆಯಲ್ಲಿ ಕಂಡು ಬಂದ ಅಪರೂಪದ ಪುಷ್ಪ ಬ್ರಹ್ಮ ಕಮಲ

ತಾಳಿಕೋಟೆ: ನಿನ್ನೆ ರಾತ್ರೆ ತಾಳಿಕೋಟಿ ನಗರದಲ್ಲಿ ವಿದ್ಯಾನಗರ ಕಾಲೋನಿಯಲ್ಲಿ ಅಪರೂಪದ ಬ್ರಹ್ಮ ಕಮಲ ಅರಳಿತು ಈ ಹೂವಿನ ವಿಶೇಷತೆ ವರ್ಷದಲ್ಲಿ ಆಷಾಢಮಾಸ ಒಂದರಲ್ಲಿ ಮಾತ್ರ ಈ ಹೂವು ಅರಳುತ್ತದೆ ಹಾಗೂ ರಾತ್ರಿ 10:30 ಗಂಟೆಗೆ ಯಿಂದ 12 ಗಂಟೆ ತನಕ ಮಾತ್ರ ಅರಳುತ್ತದೆ ನಂತರ ಯಥಾಸ್ಥಿತಿಗೆ ಬಾಡಿಕೊಳ್ಳುತ್ತದೆ
ಈ ಹೂವನ್ನು ನೋಡಲು ವಿದ್ಯಾನಗರದ ಕಾಲೋನಿ ನಿವಾಸಿಗಳು ಆದಂತಹ ಗುರುಪಾದಪ್ಪ ಕಾದಳ್ಳಿ, ಮಲ್ಲಿಕಾರ್ಜುನ ಅರಮನೆ, ಆನಂದ ಕುಲಕರ್ಣಿ, ಸಾತಪ್ಪ ಗೊಂಗಡಿ, ಭೂಪಾಲ್ ಕೊಂಗಡಿ, ಲಕ್ಷ್ಮಣ್ ಮಹಿಂದ್ರಕರ್, ಅಮೋಘ ಕುಲಕರ್ಣಿ ಹಾಗೂ ಸೋಮು, ಅನುಶ್ರೀ ಕುಲಕರ್ಣಿ, ಶ್ರೀದೇವಿ ಕುಲಕರ್ಣಿ, ಸಾವಿತ್ರಿ ಗೊಂಗಡಿ, ರೇಖಾರಂಗರೇಜ್ ಹಾಗೂ ಮತ್ತಿತರ ಅಪರೂಪದ ಹೂವಿನ ವೀಕ್ಷಿಸಲು ಕಾರಣರಾದರು

ವರದಿ: ಅಮೋಘ ತಾಳಿಕೋಟೆ

error: