December 21, 2024

Bhavana Tv

Its Your Channel

ರಾಜಕೀಯ ದಾಳಕ್ಕೆ ನೇಕಾರರ ಹೆಸರು ಬಳಕೆ ಬೇಡ-ವಿಜಯಕುಮಾರ್ ಭಾಪ್ರಿ

ಬಾಗಲಕೋಟೆ:- ಇತ್ತೀಚೆಗೆ ಕೇಂದ್ರ ಜವಳಿ ಸಚಿವ ಪಿಯೂಷ್ ಗೋಯಲ್ ರಿಗೆ ರಾಜ್ಯದ ಕೆಲ ಸಂಸದರು, ಶಾಸಕರು ನೀಡಿದ ಮನವಿ ಪತ್ರದ ಪತ್ರಿಕಾ ಪ್ರಕಟಣೆ ನೀಡಿರುವ ಕುರಿತು ಬಾಗಲಕೋಟೆ ಜಿಲ್ಲೆಯ ಕೆಲ ಕಾಂಗ್ರೆಸ್ ಹಾಗೂ ಭಾಜಪ ನಾಯಕರ ಕೆಸರೆರಚಾಟಕ್ಕೆ ನೇಕಾರರ ಹೆಸರು ಬಳಕೆ ಬೇಡವೆಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ಭಾಪ್ರಿ ಹೇಳಿದ್ದಾರೆ.

ಆಯಾ ಕ್ಷೇತ್ರದಲ್ಲಿನ ನೇಕಾರರನ್ನು ಓಲೈಸುವುದಕ್ಕಾಗಿ ನೇಕಾರರ ಹೆಸರನ್ನು ಬಳಕೆ ಮಾಡಿ ರಾಜಕೀಯ ಮಾಡುವುದು ಸದ್ಯ ಸಲ್ಲದು ಎಂದಿರುವ ಭಾಪ್ರಿ, ಸದ್ಯ ರಾಜ್ಯ ವಿಧಾನಸಭೆ ಚುನಾವಣೆ 8 ತಿಂಗಳ ಉಳಿದಿರುವಾಗ ವ್ಯೋಟ್ ಬ್ಯಾಂಕ್ ಓಲೈಸುವ ಕೆಲಸ ಬೇಡ, ನೇಕಾರರು ಕರೋನಾ ಲಾಕ್ ಡೌನ್ ನಂತರ ಬಿದ್ದ ಜವಳಿ ಮಾರುಕಟ್ಟೆ ನಡುವೆ ಜಿಎಸ್ಟಿ ಬರೆಗೆ ಮೂರುಮಳ ಹಗ್ಗಕ್ಕೆ ಕೊರಳೊಡ್ಡಿದ್ದು ಆಗಿದೆ. ಹೀಗಾಗಿ ನಮ್ಮಗಳ ನೋವನ್ನು ನಮ್ಮವರೇ ಆದ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದಾಗಿದೆ. ನಮ್ಮ ಜನಾಂಗದ ರಾಜ್ಯಸಭಾ ಸದಸ್ಯರು ನಮ್ಮನ್ನು ರಕ್ಷಣಾತ್ಮಕವಾಗಿ ಜನಾಂಗವನ್ನು ಮೇಲೆತ್ತುತ್ತಿದ್ದಾರೆ ಹೀಗಾಗಿ ಉಳಿದವರ ಓಲೈಕೆ ನೇಕಾರರಿಗೆ ಅಗತ್ಯ ಇಲ್ಲದ ಕಾರಣ ರಾಜಕೀಯ ಕೆಸರೆರಚಾಟಕ್ಕೆ ನೇಕಾರರ ಹೆಸರು ಬಳಸದಿರಲು ಎರಡು ಪಕ್ಷದ ಮುಖಂಡರಲ್ಲಿ ಭಾಪ್ರಿ ಮನವಿ ಮಾಡಿದ್ದಾರೆ.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: