March 19, 2025

Bhavana Tv

Its Your Channel

ದಾಳಿ ಮಾಡಿದ ಕರಡಿ ಜೊತೆ ಸೆಣಸಾಡಿ ಜೀವ ಉಳಿಸಿಕೊಂಡ ವ್ಯಕ್ತಿ

ಭಟ್ಕಳ: ಜಮೀನು ಕೆಲಸ ಮುಗಿಸಿ ವಾಪಸ್ ಬರುತ್ತಿರುವ ವೇಳೆ ವ್ಯಕ್ತಿಯೊಬ್ಬನ ಮೇಲೆ ಕರಡಿಗಳು ದಾಳಿ ನಡೆಸಿದ ಘಟನೆ ತಾಲೂಕಿನ ಉತ್ತರಕೊಪ್ಪ ಚಿಕ್ಕನಳ್ಳಿಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ರಾಮಚಂದ್ರ ನಾರಾಯಣ ನಾಯ್ಕ ಕರಡಿ ದಾಳಿಗೊಳಗಾದ ವ್ಯಕ್ತಿ.


ಈತ ತನ್ನ ಜಮೀನಿನಲ್ಲಿ ಕೆಲಸ ಮುಗಿಸಿ ಉತ್ತರಕೊಪ್ಪ ಚಿಕ್ಕನಳ್ಳಿಯಲ್ಲಿನ ತನ್ನ ಮನೆ ಕಾಲು ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಏಕಾಏಕಿ ಎರಡು ಕರಡಿಗಳು ಮೇಲೆ ದಾಳಿ ನಡೆಸಿದೆ. ನಂತರ ಕರಡಿಯಿಂದ ತಪ್ಪಿಸಿಕೊಂಡು ಬಂದ ಈತನನ್ನು ಸ್ಥಳೀಯರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕರಡಿ ದಾಳಿಯಿಂದಾಗಿ ವ್ಯಕ್ತಿಯ ತಲೆ, ಕೈ ಕಾಲು ಹಾಗೂ ಕಾಲಿನ ತೊಡೆ ಭಾಗದಲ್ಲಿ ತೀರ್ವವಾದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ಮುಂದುವರೆದಿದೆ.

error: