May 17, 2024

Bhavana Tv

Its Your Channel

ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರೀಯೆ ಕಾನೂನು ಬಾಹಿರ ;ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಲು ನಿರ್ಧಾರ.

ಭಟ್ಕಳ: ಅರಣ್ಯ ಭೂಮಿ ಹಕ್ಕು ಮಂಜೂರಿ ಪ್ರಕ್ರೀಯೆ ನಾಮನಿರ್ಧೇಶನ ಸದಸ್ಯರ ಅನುಪಸ್ಥಿತಿ ಮತ್ತು ವೈಯಕ್ತಿಕ ಮೂರು ತಲೆಮಾರಿನ ದಾಖಲೆಗಳ ಅಗ್ರಹಿಸುವಿಕೆಗೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅವರು ಇಂದು ಭಟ್ಕಳ ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮೇಲಿನಂತೆ ಸಂಘದ ನಿರ್ಧಾರವನ್ನು ಪ್ರಕಟಿಸಿದರು.

ಪಾರಂಪರಿಕ ಅರಣ್ಯವಾಸಿಗಳ ಅರ್ಜಿ ಮಂಜೂರಿಗೆ ಸಂಬAಧಿಸಿ ನಿರ್ದಿಷ್ಟವಾದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗಲೂ ದಾಖಲೆಗಳಿಗೆ ಒತ್ತಾಯಿಸುವದು ಕಾನೂನು ಬಾಹಿರ ಕ್ರಮ ಎಂದು ಅವರು ಹೇಳುತ್ತಾ, ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು 3 ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಿದರೆ ಸಾಕು ಎಂಬ ಕೇಂದ್ರ ಬುಡಕಟ್ಟು ಮಂತ್ರಾಲಯ ನೀಡಿದ ಆದೇಶವನ್ನು ನಿರ್ಲಕ್ಷಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗಲೂ ಸೂಕ್ತ ಕ್ರಮ ಜರುಗಿಸದೇ ಇರುವುದರಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಸದಸ್ಯರು ಇಲ್ಲದ ಸಮಿತಿಯಿಂದ ವಿಚಾರಣೆ :
ಕಾನೂನಿನ ಸಮಿತಿಯಲ್ಲಿ ಮೂರು ನಾಮನಿರ್ಧೇಶನ ಸದಸ್ಯರನ್ನ ಒಳಗೊಂಡ ಒಟ್ಟು ಆರು ಸದಸ್ಯರು ಇರಬೇಕೆಂಬ ಅಂಶವನ್ನ ಪರಿಗಣನೆಗೆ ತೆಗೆದುಕೊಳ್ಳದೇ, ಕೇವಲ ಅಧಿಕಾರ ವರ್ಗದವರ ಸದಸ್ಯರ ಉಪಸ್ಥಿತಿಯಲ್ಲಿ, ಸಮಿತಿಯ ಹೆಸರಿನಲ್ಲಿ ಅತಿಕ್ರಮಣದಾರರಿಗೆ ನೋಟಿಸ್ ನೀಡಿ ಅರ್ಜಿಗಳನ್ನ ಪುನರ್ ಪರಿಶೀಲಿಸುತ್ತಿರುವುದಕ್ಕೆ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಪಾಂಡುರAಗ ನಾಯ್ಕ ಬೆಳಕೆ, ದೇವರಾಜ ಗೊಂಡ ಭಟ್ಕಳ, ಮಂಜು ಮರಾಠಿ ಕುಮಟ, ಚಂದ್ರು ನಾಯ್ಕ ಗೊರಟೆ, ಚಾಮುಂಡಿ ಶಬ್ಬೀರ್ ಭಟ್ಕಳ, ಎಸ್ ಕೆ ಮನ್ಸೂದ್, ಮೋಹಿದ್ದೀನ್ ಭಟ್ಕಳ, ಶಂಕರ ನಾಯ್ಕ ಬೆಳಕೆ, ಮಂಜಪ್ಪ ಗಿಡ್ಡ ನಾಯ್ಕ, ವೆಂಕಟೇಶ ವೈಧ್ಯ ಬೆಳಕೆ, ಫರಿದಾಬಾನು ಜಾಲಿ ಮುಂತಾದವರು ಉಪಸ್ಥಿತರಿದ್ದರು.

error: