November 1, 2024

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕನಕೋಡ್ ಹಾಗೂ ಕೆಂಚಗಾರ್ ಒಕ್ಕೂಟದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ

ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕನಕೋಡ್ ಹಾಗೂ ಕೆಂಚಗಾರ್ ಒಕ್ಕೂಟದ ಸದಸ್ಯರಿಂದ, ಕೆಂಚಗಾರ್ ಶ್ರೀ ಸೀತಾರಾಮಚಂದ್ರ ಸಭಾಗೃಹದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಯೋಜನೆಯ ಪ್ರಗತಿಬಂಧು ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರುಗಳು ಸಭಾಗೃಹದ ನೆಲ ಹಾಗೂ ಆವರಣವನ್ನು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ಸದ್ಯವಷ್ಟೇ ಸಭಾಗೃಹದ ರಿಪೇರಿ ಕೆಲಸ ನಡೆದಿದ್ದರಿಂದ, ಹೆಚ್ಚುಳಿದ ಸಾಮಗ್ರಿಗಳು ಅಲ್ಲಲ್ಲಿ ಬಿದ್ದಿದ್ದವು. ಅದನ್ನು ಆರಿಸಿ ವ್ಯವಸ್ಥಿತ ಜಾಗದಲ್ಲಿ ಜೋಡಿಸಿಡುವ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು. ಬಳಿಕ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಸಭಾಗೃಹದ ಎದುರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆ ಹಾಡಿ ಧ್ವಜವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ನರಸಿಂಹ ನಾಯ್ಕ್ ಮಾತನಾಡಿ “ಕೇವಲ ಕಛೇರಿಗಳು, ಶಾಲಾ ಕಾಲೇಜುಗಳಿಗೆ ಮಾತ್ರಾ ಮೀಸಲಾದ ರಾಷ್ಟ್ರ ಧ್ವಜವನ್ನು ಈಗ ಮನೆ ಮನೆಗಳಲ್ಲಿ ಹಾರಿಸುವ ಸದಾವಕಾಶವನ್ನು ಕೇಂದ್ರ ಸರಕಾರ ಒದಗಿಸಿದೆ. ಇಂಥ ಅಮೃತ ಮಹೋತ್ಸವದ ಕ್ಷಣದಲ್ಲಿ ನಾವೆಲ್ಲ ಪಾಲ್ಗೊಳ್ಳುತ್ತಿರುವುದು ಪೂರ್ವ ಜನ್ಮದ ಪುಣ್ಯ. ಧ್ವಜದಲ್ಲಿನ ಹೊಲಿಗೆ ಇನ್ನಿತರ ಸಣ್ಣಪುಟ್ಟ ದೋಷಗಳಿದ್ದಾಗ ನಾವೇ ಸರಿಪಡಿಸಿಕೊಂಡು ಮನೆಯಲ್ಲಿ ಧ್ವಜಾರೋಹಣ ಮಾಡಿದ್ದೇವೆ. ಇಂಥ ಸಂದರ್ಭದಲ್ಲಿ ಧ್ವಜ ನೀಡಿದವರನ್ನು ದೂರುವುದು ಸಭ್ಯತೆ ಅಲ್ಲ.” ಎಂದರು.

ವಲಯ ಮೇಲ್ವಿಚಾರಕ ಶ್ರೀರಾಜು ಮಾತನಾಡಿ “75 ನೇ ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ತ ಆಗಸ್ಟ್ 8 ರಿಂದ ಆಗಸ್ಟ್ 14 ರವರೆಗೆ, ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯಂತೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಜನ ಸಹಭಾಗೀತ್ವದಲ್ಲಿ, ‘ನಮ್ಮೂರು ನಮ್ಮ ಶ್ರದ್ಧಾ ಕೇಂದ್ರ’ ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯಾದ್ಯಂತ ಆಯ್ದ ಧಾರ್ಮಿಕ ಶೃದ್ಧಾ ಕೇಂದ್ರಗಳ ಸ್ವಚ್ಛತಾ ಸಪ್ತಾಹ ಕೈಗೊಳ್ಳಲಾಗುತ್ತಿದೆ.” ಎಂದರು.

ಸೇವಾಪ್ರತಿನಿಧಿ ರಮೇಶ್ ಮಾತನಾಡಿ “ಧಾರ್ಮಿಕ ಶೃದ್ಧಾ ಕೇಂದ್ರಗಳ ಪಾವಿತ್ರ‍್ಯತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ.” ಎಂದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಧರ್ ನಾಯ್ಕ್, ಗಣಪತಿ ನಾಯ್ಕ್, ಚಿಕ್ಕನಕೋಡ್ ಸೇವಾಪ್ರತಿನಿಧಿ ವೀಣಾ ಹಾಗೂ ಪ್ರಗತಿ ಬಂಧು, ಸ್ವ-ಸಹಾಯ ಸಂಘಗಳ ಸದಸ್ಯರುಗಳು ಪಾಲ್ಗೊಂಡಿದ್ದರು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: