May 16, 2024

Bhavana Tv

Its Your Channel

ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿ ದೇಶದ ಮೇಲಿನ ಅಭಿಮಾನ ಮೆರೆದ
ಕಾರವಾರದ ಮಿಲಿಂದ್ ಅಣ್ವೇಕರ

ಕಾರವಾರ ತಾಲೂಕಿನ ಕಡವಾಡದ ಆಭರಣ ತಯಾರಾಕ ಮಿಲಿಂದ್ ಅಣ್ವೇಕರ ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿ ದೇಶದ ಮೇಲಿನ ಅಭಿಮಾನ ಮೆರೆದಿದ್ದಾರೆ.

ದೇಶಾದ್ಯಂತ ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮಾಚಾರಣೆ ಮನೆ ಮಾಡಿದ್ದು, ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ವಾತಂತ್ರ‍್ಯ ಸಿಕ್ಕಿ 75 ವರ್ಷವಾದ ಸಂಭ್ರಮದ ಹಿನ್ನೆಲೆಯಲ್ಲಿ ಮಿಲಿಂದ್ ಅಣ್ವೇಕರ್ ಬೆಳ್ಳಿಯಲ್ಲಿ ಸಂಸತ್ ಭವನ ನಿರ್ಮಾಣ ಮಾಡಿದ್ದಾರೆ. ಇದು 2 ಇಂಚು ಎತ್ತರ, 1.5 ಇಂಚು ಸುತ್ತಳತೆ, 35 ಗ್ರಾಂ ತೂಕವಿದ್ದು, ನಿರ್ಮಾಣ ಮಾಡಲು 5 ದಿನ ತೆಗೆದುಕೊಂಡಿದ್ದಾರೆ. ಮೂಲತಃ ಅಕ್ಕಸಾಲಿಗ ವೃತ್ತಿಯವರಾದ ಮಿಲಿಂದ್ ಅವರು ಕಡಿಮೆ ಬೆಳ್ಳಿ ಬಂಗಾರ ಬಳಸಿ ಸೂಕ್ಷ್ಮಕರಕುಶಲ ಕಲಾಕೃತಿಗಳನ್ನು ತಯಾರಿಸುವಲ್ಲಿ ಸಿದ್ದಹಸ್ತರು. ಈ ಮೊದಲು 2013 ರಲ್ಲಿ ಇವರ ಬಂಗಾರದ ಸೂಕ್ಷ್ಮ ಕಲಾಕೃತಿಯೊಂದು ಲಿಮ್ಕಾ ದಾಖಲೆ ಬರೆದಿದೆ. 2019 ರ ಕಲಾಕೃತಿಗೆ ಕರ್ನಾಟಕ ಅಚೀವರ್ಸ್ ಅವಾರ್ಡ್ ದೊರೆತಿದೆ.

ಸ್ವರ್ಣ ಕಲಾಕಾರ ಮಿಲಿಂದ್ ಮಾತನಾಡಿ “ಕಡಿಮೆ ಲೋಹ ಬಳಸಿ ಸೂಕ್ಷ್ಮ ಕಲಾಕೃತಿಗಳನ್ನು ರಚಿಸುವುದು ನನ್ನ ಹವ್ಯಾಸ. ಆಕರ್ಷಕ ಕಲಾಕೃತಿಗಳ ಮೂಲಕ ಜನರಿಗೆ ನಮ್ಮ ಸಂಸ್ಕೃತಿ ಬಗ್ಗೆ ಮಾಹಿತಿ ನೀಡುವ ಉದ್ದೇಶ ಇದರ ಹಿಂದಿದೆ.” ಎಂದು ತಮ್ಮ ಅನಿಸಿಕೆ ಹೇಳಿದರು.

ಬಂಗಾರದಲ್ಲಿ ತಾಜ್ ಮಹಲ್, ಹಂಪಿ ರಥ ಮೊದಲಾದ ಕಲಾಕೃತಿಗಳನ್ನು ಮಾಡಿರುವ ಇವರು, ಬಂಗಾರ ಬೆಳ್ಳಿ ತಾಮ್ರದಿಂದ 54 ಗ್ರಾಂ ತೂಕದ ಕೇಧಾರನಾಥ ದೇವಾಲಯದ ಪ್ರತಿಕೃತಿ ತಯಾರಿಸಿ ಪ್ರಧಾನಿ ಮೋದಿಗೆ ಉಡುಗೊರೆ ನೀಡಿ ಸೈ ಅನಿಸಿಕೊಂಡಿದ್ದಾರೆ. ಇವರ ವೃತ್ತಿ ಜೀವನದಲ್ಲಿ ಹವ್ಯಾಸವಾಗಿ ಇನ್ನಷ್ಟು ಕಲಾಕೃತಿಗಳು ಮೂಡಿಬಂದು, ಉಜ್ವಲ ಭವಿಷ್ಯ ಸದಾ ಪ್ರಜ್ವಲಿಸಲಿ ಎಂಬುದೇ ನಮ್ಮ ಆಶಯ.

ವರದಿ : ನರಸಿಂಹ ನಾಯ್ಕ್ ಹರಡಸೆ.

error: