May 15, 2024

Bhavana Tv

Its Your Channel

ಹೊನ್ನಾವರ ದ ನ್ಯಾಯಾಲಯದ ಸಂಕೀರ್ಣದಲ್ಲಿ ನಡೆದ ಲೋಕ ಅದಾಲತ್

ಹೊನ್ನಾವರ :- ನ್ಯಾಯಾಲಯದ ಸಂಕೀರ್ಣದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟೂ 273 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು. ಸಿವಿಲ್ ಜಡ್ಜ÷ ಹಿರಿಯ ವಿಭಾಗ ಮತ್ತು ಎಮ್.ಎ.ಸಿ.ಟಿ ನ್ಯಾಯಾಲಯದಲ್ಲಿ 13 ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು ಇತ್ಯರ್ಥಗೊಂಡವು. ರೂ. 16,01,000/- ಮೊತ್ತ ಪರಿಹಾರ ಮೂಲಕ ವಿತರಿಸಲು ತೀರ್ಮಾನಿಸಲಾಯಿತು. 2 ಅಮಲ್ಜಾರಿ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು. ಸಿವಿಲ್ ಜಡ್ಜ್ ಹಿರಿಯ ವಿಭಾಗ ನ್ಯಾಯಾಧೀಶ ಕುಮಾರ ಜಿ ಹಾಗೂ ಸಂದಾನಕಾರರಾಗಿ ವಕೀಲ ಸತೀಶ ಭಟ್, ಉಳಗೆರೆ ಉಪಸ್ಥಿತರಿದ್ದರು.
ಪ್ರಧಾನ ಜೆ.ಎಂ.ಎಫ್.ಸಿ ಮತ್ತು ಕಿರಿಯ ಸಿವಿಲ್ ಜಡ್ಜ ನ್ಯಾಯಾಲಯದಲ್ಲಿ 182 ಕ್ರಿಮಿನಲ್ ಪ್ರಕರಣಗಳು, 15 ಸಿವಿಲ್ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು. ಪ್ರಿನ್ಸಿಪಲ್ ಜೆ.ಎಂ.ಎಫ್.ಸಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಹಾಗೂ ಸಂದಾನಕಾರರಾಗಿ ವಕೀಲ ಪ್ರಕಾಶ ತಾಂಡೇಲ್ ಉಪಸ್ಥಿತರಿದ್ದರು.
ಹೆಚ್ಚುವರಿ ಜೆ.ಎಂ.ಎಫ್.ಸಿ ಹಾಗೂ ಸಿವಿಲ್ ಜಡ್ಜ್ ಕಿರಿಯ ವಿಭಾಗ ನ್ಯಾಯಾಲಯದಲ್ಲಿ 56 ಕ್ರಿಮಿನಲ್ ಪ್ರಕರಣಗಳು, 5 ಸಿವಿಲ್ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥಗೊಂಡವು.
ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಧೀಶ ಈರಣ್ಣ ಹುಣಸೀಕಟ್ಟೆ ಹಾಗೂ ಸಂದಾನಕಾರರಾಗಿ ವಕೀಲ ರಾಜಾರಾಮ್ ಭಟ್ ಉಪಸ್ಥಿತರಿದ್ದರು.

error: