December 21, 2024

Bhavana Tv

Its Your Channel

ತಾಳಿಕೋಟೆಯಲ್ಲಿ ನಡೆದ ಶ್ರೀ ಗುರು ಸಾರ್ವಭೌಮ ಶ್ರೀ ರಾಘವೇಂದ್ರರ ಆರಾಧನೆ ಮಹೋತ್ಸವ

ಬಾಗಲಕೋಟೆ: ತಾಳಿಕೋಟಿಯ ನಗರೇಶ್ವರ ದೇವಸ್ಥಾನದಲ್ಲಿ ದಿನಾಂಕ 12, 13 ಹಾಗೂ 14ರಂದು ಪೂರ್ವಾರಾಧನೆ ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಜರುಗಿತು 3 ದಿನಗಳ ಕಾಲ ಹೋಮ, ಭಜನೆ, ಪಲ್ಲಕ್ಕಿ ಸೇವೆ, ಮಹಾಪ್ರಸಾದ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ದಿನಾಂಕ 14 ರಂದು ಸಾಯಂಕಾಲ 6:00 ಗಂಟೆಗೆ ಶ್ರೀ ಗುರುರಾಯರ ಮಹಾ ರಥೋತ್ಸವ ಕಾರ್ಯಕ್ರಮ ಜರುಗಿತು ನಗರೇಶ್ವರ ದೇವಸ್ಥಾನ ದಿಂದ ವಿಠಲ ಮಂದಿರದವರೆಗೆ ಮಾರ್ಗದುದ್ದಕ್ಕೂ ತಾಳ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯಗಳು ಸಹಿತ ಮೆರವಣಿಗೆ ಮಾಡಲಾಯಿತು

ಈ ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಸಮಾಜದ ಮುಖಂಡರು ಡಾ ಎನ್ ಎಲ್ ಶೆಟ್ಟಿ ಹಾಗೂ ಆಚಾರ್ಯ ಗಳಾದ ವಸಂತ್ ಜೋಶಿ , ಶ್ರೀಧರ್ ಜೋಶಿ, ಶ್ರೀಧರ್ ಗ್ರಾಂಪುರೋಹಿತ, ಗುಂಡ ಭಟ್ ಹಾಗೂ ಆನಂದ್ ಕುಲಕರ್ಣಿ ಪ್ರಹಲ್ಲಾದ್ ಮಾನವಿ ಅರುಣ ಕನಕಗಿರಿ ಮಹಿಳೆಯರ ಆದಂತಹ ವಿಜಯ ಅಚಲ್ಕರ್ (ಮುಂಬೈ ) ರಾಜಲಕ್ಷ್ಮಿ ಮಾನ್ವಿ ಅನುಶ್ರೀ ಕುಲಕರ್ಣಿ ಹಾಗೂ ಮತ್ತಿತರ ಸದ್ಭಕ್ತರು ಭಾಗವಹಿಸಿದ್ದರು

ವರದಿ: ಅಮೋಘ ಬಾಗಲಕೋಟೆ

error: