May 4, 2024

Bhavana Tv

Its Your Channel

“ಈಸೀ ಲೈಫ್ ಎಂಟರ್‌ಪ್ರೈಸಸ್” ವತಿಯಿಂದ ಕಾರ್ಬನ್ ಪೈಬರ್ ದೋಟಿ ಉಪಯೋಗದ ಕುರಿತು ಉಚಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ

ಹೊನ್ನಾವರ ತಾಲೂಕಿನ ಹಿರೇಬೈಲ್ ನಲ್ಲಿ “ಈಸೀ ಲೈಫ್ ಎಂಟರ್‌ಪ್ರೈಸಸ್” ವತಿಯಿಂದ ಕಾರ್ಬನ್ ಪೈಬರ್ ದೋಟಿ ಉಪಯೋಗದ ಕುರಿತು ಉಚಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರ ನಡೆಯಿತು.

ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ ಸಮಸ್ಯೆಯಾದ ಕೊಳೆರೋಗ ಹಾಗೂ ಕಾರ್ಮಿಕರ ಸಮಸ್ಯೆಗೆ ಶಾಶ್ವತ ಪರಿಹಾರವೆಂಬAತೆ ನೆಲದಿಂದಲೇ 80 ಅಡಿಯ ವರೆಗೆ ಮದ್ದು ಹೊಡೆಯಲು ಮತ್ತು ಕೊನೆ ಕೊಯ್ಯಲು ಕಾರ್ಬನ್ ಪೈಬರ್ ದೋಟಿ ಬಂದಿದೆ. 70 ಫೀಟ್ ನ ಈ ದೋಟಿ ಕೇವಲ ಐದುವರೆ ಕೆಜಿ ತೂಕವಿದ್ದು, ಮನೆ ಮಂದಿಯೇ ಮರಗೆಲಸ ಮಾಡಬಹುದು.

ಇಂಥ ದೋಟಿಯ ಕುರಿತಾಗಿ, ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಕೇಂದ್ರ “ಈಸೀ ಲೈಫ್ ಎಂಟರ್ ಪ್ರೈಸಸ್” ನ ಸಂಪನ್ಮೂಲವ್ಯಕ್ತಿ ರಾಜೇಶ್ ಭಟ್ ಮಾತನಾಡಿ “ಈ ದೋಟಿ ಬಳಸಿ ಮದ್ದು ಹೊಡೆಯುವುದರಿಂದ ಶೇಕಡಾ 40 ರಷ್ಟು ಮದ್ದು ಉಳಿತಾಯವಾಗಲಿದೆ. 60 ರಿಂದ 80 ಫೀಟ್ ಗಳ ವರೆಗೂ ಈ ದೋಟಿ ಲಭ್ಯವಿದ್ದು, ಸರಕಾರದಿಂದ ಸಬ್ಸಿಡಿ ಸಿಗಲಿದೆ.”ಎಂದು ಪರಿಪೂರ್ಣ ಮಾಹಿತಿ ನೀಡಿದರು.

ಪ್ರಾತ್ಯಕ್ಶಿಕೆ ಕಾರ್ಯಾಗಾರದಲ್ಲಿ ಪಾಲ್ಗೊಂಡ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ, ಪ್ರಗತಿಪರ ಕೃಷಿಕ ವಿ.ಡಿ. ನಾಯ್ಕ್ ಮಾತನಾಡಿ “ವಸ್ತುಗಳು ಮಾರ್ಕೆಟಿಗೆ ಬಂದಾಗ, ಇನ್ನೆರಡು ವರ್ಷದಲ್ಲಿ ದರ ಇಳಿಯುತ್ತದೆ. ಆಗಲೇ ಖರೀದಿ ಮಾಡೋಣ ಎಂಬ ಭಾವನೆ ಜನರಲ್ಲಿರುತ್ತದೆ. ಉತ್ತಮ ಗುಣಮಟ್ಟದ ವಸ್ತುಗಳ ದರ ಒಂದೇ ರೀತಿ ಇರುತ್ತದೆ.” ಎಂದರು.

ಕಾರ್ಯಕ್ರಮದ ಆಯೋಜಕ ಹಿರೇಬೈಲ್ ಪ್ರತಿಭಾ ವಾದ್ಯವೃಂದದ ಮಾರುತಿ ನಾಯ್ಕ್ ಮಾತನಾಡಿ “ಈಗ ಕುಮಟಾದಲ್ಲಿ ಇದ್ದಂತೆ ನಮ್ಮ ಹೊನ್ನಾವರದಲ್ಲೂ ಈಸಿ ಲೈಫ್ ಯಂತ್ರೋಪಕರಣಗಳ ಮಾರಾಟ ಮಳಿಗೆಯೊಂದನ್ನು ತೆರೆದರೆ, ನಮ್ಮ ಭಾಗದ ಕೃಷಿಕರಿಗೆ ಹೆಚ್ಚು ಅನುಕೂಲವಾಗಲಿದೆ” ಎಂಬ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು, ಸುತ್ತ ಮುತ್ತಲ ಊರಿನ ಆಸಕ್ತ ಕೃಷಿಕರೆಲ್ಲ ಪಾಲ್ಗೊಂಡು ಪ್ರಾತ್ಯಕ್ಷಿಕೆ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

ವರದಿ: ನರಸಿಂಹ ನಾಯ್ಕ್ ಹರಡಸೆ.

error: