April 10, 2025

Bhavana Tv

Its Your Channel

ನೆನಗುದಿಗೆ ಬಿದ್ದಿರುವ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಯ ಅನುಷ್ಠಾನ ಗೊಳಿಸುವ ಸ್ಥಳಿಯವಾಗಿ ಹೋರಾಟ ಸಮಿತಿ ರಚಿಸಲು ನಿರ್ಧಾರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ನೆನಗುದಿಗೆ ಬಿದ್ದಿರುವ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಯ ಅನುಷ್ಠಾನ ಗೊಳಿಸುವ ಸಲುವಾಗಿ ಸ್ಥಳಿಯವಾಗಿ ಹೋರಾಟ ಸಮೀತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದರು.

ಅವರು ಸಾಹಿತ್ಯ ಭವನದಲ್ಲಿ ನಡೆದ ಹುಬ್ಬಳ್ಳಿ ಅಂಕೋಲಾ ರೈಲು ಯೋಜನೆಯ ಕುರಿತಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಡೋಂಗಿ ಪರಿಸರವಾದಿಗಳಿಂದಾಗಿ ಯೋಜನೆಗೆ ಯಲ್ಲಾಪುರ ಭಾಗದಲ್ಲಿ ವಿಘ್ನ ಬಂದಿದೆ.ಆನೆ ಕಾರಿಡಾರ ಇದೆ ಅಂತಾದರೆ ಆಭಾಗದಲ್ಲಿ ಪೈಓವರ್ ಮಾಡಬಹುದು.ಘಟ್ಟಪ್ರದೇಶದಲ್ಲಿ ಸುರಂಗ ಮಾರ್ಗದ ಮೂಲಕ ಮಾರ್ಗನಿರ್ಮಾಣ ಮಾಡಬಹುದು. ಮರಗಳಿಗೆ ಕಡಿಮೆ ಹಾನಿಯಾಗುವ ಯೋಜನೆ ರೂಪಿಸಲು ಸಾಧ್ಯ. ಇಡೀ ದೇಶದ ತುಂಬೆಲ್ಲಾ ರೈಲು ಮಾರ್ಗವಿದ್ದು,ಅಲ್ಲೆಲ್ಲೂ ಪರಿಸರಕ್ಕೆ ಹಾನಿಯಾಗಿಲ್ಲವೇ? ಕೇವಲ ಯಲ್ಲಾಪುರ ಭಾಗದಲ್ಲಿ ಮಾತ್ರ ಪರಿಸರ ಹಾನಿಯಾಗುತ್ತದೆ ಎಂದು ತಡೆ ತರುವ ಹುನ್ನಾರದಿಂದಾಗಿ ಜಿಲ್ಲೆಯಲ್ಲಿ ಯಲ್ಲಾಪುರ ಮಾತ್ರ ರೈಲು ಯೋಜನೆಯಿಂದ ವಂಚಿತವಾಗುವ ಅಪಾಯ ಇದೆ.ಹಾಗಾಗಿ ಹೋರಾಟ ಚುರುಕು ಗೊಳಿಸಬೇಕು.
ಈಗಾಗಲೇ ಯಲ್ಲಾಪುರ ಹಾಗೂ ಅಂಕೋಲಾ ದಲ್ಲಿ ಸಭೆ ನಡೆಸಲಾಗಿದೆ.ಕೇಂದ್ರ ಸಚಿವ ಪ್ರಹಲ್ಲಾದ ಜೋಷಿ ಅವರಿಗೆ ಮನವಿ ಸಲ್ಲಿಸಲಾಗಿದೆ.ಕೇಂದ್ರ ಪರಿಸರ ಮಂಡಳಿ ಸೆ.16 ರಂದು ತನ್ನ ಅಭಿಪ್ರಾಯ ರಾಜ್ಯ ಹೈಕೊರ್ಟಗೆ ತಿಳಿಸಲಿದೆ.ಅದರ ಅಭಿಪ್ರಾಯ ಏನೇ ಬಂದರೂ ಯೋಜನೆಯ ಕಾರ್ಯಗತ ಮಾಡಲು ಹೋರಾಟ ತೀವೃಗೊಳಿಸುವುದೊಂದೇ ದಾರಿ ಇದೆ. ಸೆ.26 ರಂದು ಕೇಂದ್ರ ಸಮೀತಿ ಮಾರ್ಗಮರು ಪರಿಶೀಲನೆಗೆ ಜಿಲ್ಲೆಗೆ ಆಗಮಿಸಲಿದೆ.ಅವರ ಮುಂದೆ ನಮ್ಮ ಅಹವಾಲು ಮಂಡನೆಯಾಗಬೇಕು.ಈನಿಟ್ಟಿನಲ್ಲಿ ತಾಲೂಕಿನಲ್ಲಿ ರೇಲ್ವೆ ಹೋರಾಟ ಸಮೀತಿ ರಚನೆಗೆ ನಿರ್ಧರಿಸಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಪ್ರಮುಖರಾದ ಡಿ.ಜಿ.ಹೆಗಡೆ,ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ,ಶ್ರೀರAಗ ಕಟ್ಟಿ,ವೇಣುಗೋಪಾಲ ಮದ್ಗುಣಿ,ಜಗನ್ಬಾಥ ರೇವಣಕರ್,ಎಂಡಿ.ಮುಲ್ಲಾ,ಬಾಬು ಬಾಂದೇಕರ್,ಜಿ.ಆರ್.ಹೆಗಡೆ ಕುಂಬ್ರಿಗುಡ್ಡೆ,ಮುAತಾದವರು ಇದ್ದರು.

error: