December 21, 2024

Bhavana Tv

Its Your Channel

ಜೈನ ಸಮಾಜದ ಗುರುಗಳಾದ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಕಮತಗಿಗೆ ಪುರ ಪ್ರವೇಶ

ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಜೈನ ಸಮಾಜದ ಗುರುಗಳಾದ ಸಾವಿರದ ಎಂಟು ಶ್ರೀ ಪಾಶ್ವನಾಥ ದಿಗಂಬರ ಶ್ರೀ ಕ್ಷೇತ್ರ ಅಂಬುಜ ಜೈನ ಮಠದ ಪೂಜ್ಯರಾದ ಸ್ವಸ್ತಿ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಅವರು ಕಮತಗಿಗೆ ಪ್ರಪ್ರಥಮ ಬಾರಿಗೆ ಪುರ ಪ್ರವೇಶ ಮಾಡಿದರು

ಈ ಸಂದರ್ಭದಲ್ಲಿ ಕಮತಗಿ ಹಾಗೂ ಸುತ್ತಮುತ್ತಲಿನ ಊರಿನ ಜೈನ ಸಮುದಾಯದ ಬಾಂಧವರೆಲ್ಲರೂ ಸೇರಿಕೊಂಡು ಮಹಾಸ್ವಾಮಿಗಳನ್ನು ಅದ್ದೂರಿಂದ ಬರಮಾಡಿಕೊಂಡರು ಹಾಗೂ ಸುಮಂಗಲೆಯರು ಎಲ್ಲ ಮಹಿಳೆಯರು ಕುಂಭವನ್ನು ಹೊತ್ತಿದ್ದರು ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಾಶ್ವನಾಥ ಮಂದಿರಕ್ಕೆ ಬಂದು ತಲುಪಿತು ನಂತರ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಪೂಜ್ಯರಾದ ಸ್ವಸ್ತಿ ಶ್ರೀ ದೇವೇಂದ್ರಕೀರ್ತಿ ಪಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಅವರ ಅಮೃತಹಸ್ತದಿಂದ ದೀಪ ಬೆಳಗಿಸುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ಮಹಾಸ್ವಾಮಿಗಳು ಮಾತನಾಡುತ್ತಾ ಡಿಸೆಂಬರ್ ನಲ್ಲಿ 5 ನೇ ತಾರೀಖಿನಿಂದ 7 ನೇ ತಾರೀಖಿನವರೆಗೆ 1008 ಶ್ರೀ ಪಾಶ್ವನಾಥ ದಿಗಂಬರ ಜೈನ ಚೈತ್ಯಾಲಯದಲ್ಲಿರುವ ಮೌನ ಸ್ತಂಭೋಪರಿ ಚತುರ್ಮುಖ ಜಿನ ಬಿಂಬದ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಿಂದ ಹಮ್ಮಿಕೊಂಡಿರುವುದರಿAದ ಆ ಪಾಶ್ವನಾಥ ದೇವರು ತಮಗೆಲ್ಲರಿಗೂ ಒಳ್ಳೆಯದಾಗಲಿ ಕಾರ್ಯಕ್ರಮವನ್ನು ಬಹಳ ಯಶಸ್ವಿಯಿಂದ ಆಚರಿಸಿರಿ ಎಂದು ಆಶೀರ್ವಾದ ನೀಡಿದರು

ಈ ಸಂದರ್ಭದಲ್ಲಿ ಕಮತಗಿಯ ಹಾಗೂ ಸುತ್ತಮುತ್ತಲಿನ ಊರಿನ ಜೈನ ಸಮುದಾಯದ ಮುಖಂಡರೆಲ್ಲರೂ ಹಾಗೂ ಮಹಿಳೆಯರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ವರದಿ ನಿಂಗಪ್ಪ ಕಡ್ಲಿಮಟ್ಟಿ

error: