ಶ್ರೀರಂಗಪಟ್ಟಣ :- ಪ್ರಜ್ಞಾವಂತರ ವೇದಿಕೆ ಶ್ರೀರಂಗಪಟ್ಟಣ ತಾಲೂಕು ಘಟಕದ ವತಿಯಿಂದ ಇಂದು ಟಿಪ್ಪು ಎಕ್ಸಪ್ರೆಸ್ ಉಗಿಬಂಡಿಯ ಹೆಸರು ಬದಲಾಯಿಸಿರುವುದನ್ನು ಖಂಡಿಸಿ ಶ್ರೀರಂಗಪಟ್ಟಣ ಟೌನ್ನಲ್ಲಿರುವ ಟಿಪ್ಪುಸುಲ್ತಾನ್ ಮಾಡಿದ ಸ್ಥಳದಿಂದ ತಹಶೀಲ್ದಾರ್ ಕಚೇರಿಯ ವರಿಗೆ ಪ್ರತಿಭಟನೆ ನಡೆಸಿದರು.
ಪ್ರಜ್ಞಾವಂತರ ವೇದಿಕೆ ಅಧ್ಯಕ್ಷರಾದ ವಕೀಲರಾದ ವೆಂಕಟೇಶ್ ಅವರು ಮಾತನಾಡುತ್ತಾ ಮಾನ್ಯ ಕೇಂದ್ರ ಸರ್ಕಾರದ ಆಳ್ವಿಕೆಯಲ್ಲಿರುವ ಬಿಜೆಪಿ ಪಕ್ಷದವರು ಚುನಾವಣೆ ಗೆಲ್ಲಲು ನೀಡಿರುವ ಆಶ್ವಾಸನೆಗಳಾದ ಕಪ್ಪು ಹಣ ವಾಪಸ್, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ, ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ, ಬೆಲೆ ಏರಿಕೆಗೆ ಕಡಿವಾಣವೆಂಬುಗಳು ಈಡೇರಿಸದೆ ಸದಾ ಜನಸಾಮಾನ್ಯರಿಗೆ ಪದಾರ್ಥಗಳ ಮೇಲೆ ಏರಿಕೆ ಮಾಡಿದ ಜೀವನ ಸುಡುತ್ತಿದ್ದಾರೆ ಸರ್ಕಾರಿ ಸಂಘ ಸಂಸ್ಥೆಗಳನ್ನು ಸರ್ಕಾರಿ ಕಾರ್ಖಾನೆಗಳನ್ನು ಕೇಂದ್ರ ಸರ್ಕಾರದ ರಸ್ತೆಗಳನ್ನು ಖಾಸಗಿಕರಣ, ವಿದ್ಯಾರ್ಥಿಗಳಿಗೆ ನಿರುದ್ಯೋಗ ಉಂಟು ಮಾಡಿ ಪಕೋಡ ಮಾರಿ ಎಂಬ ಅವಮಾನಿಸುತ್ತಾ ಭಾರತದ ಸಂವಿಧಾನ ಆಸೆಗಳನ್ನು ಗಾಳಿಗೆ ತೂರಿ ಓಟಿಗಾಗಿ ಬಹುಸಂಖ್ಯಾತರನ್ನು ಹೋಲಿಸಲು ಧರ್ಮ ಧರ್ಮಗಳ ಹಾಗೂ ಜಾತಿ ಜಾತಿಗಳ ನಡುವೆ ಅಶಾಂತಿಯನ್ನು ಉಂಟುಮಾಡುತ್ತ ಭಾರತ ಅಭಿವೃದ್ಧಿ ನೆಲಸಮ ಮಾಡುತ್ತಿದ್ದಾರೆ.
ಅದೇ ರೀತಿ ಇತ್ತೀಚಿಗಿನ ಓಟಿನ ಓಲೆ ಕೆಳಗೆ ಟಿಪ್ಪು ಎಕ್ಸ್ಪ್ರೆಸ್ ಉಗಿಬಂಡಿ ಹೆಸರು ಬದಲಾಯಿಸಿರುವುದು ರಣರಂಗದಲ್ಲಿ ಸ್ವಾಭಿಮಾನ ಮತ್ತು ಸ್ವತಂತ್ರಕ್ಕೆ ಹೋರಾಡಿ ವೀರಮರಣವನ್ನು ಹೊಂದಿದ ಯೋಧನಿಗೆ ಅವಮಾನ ಮಾಡಿದಂತಾಗಿದೆ ಟಿಪ್ಪು ಸುಲ್ತಾನ್ ರವರು ತಮ್ಮ ಕೇವಲ 17 ವರ್ಷಗಳಲ್ಲಿ ಎರಡು ಲಕ್ಷ ಕಿಲೋ ಮೀಟರ್ ಗಳಷ್ಟು ವಿಶಾಲ ಕರ್ನಾಟಕವನ್ನಾಗಿ ಮಾಡಿದರು ರೈತರಿಗೆ ರೂ.3,000 ಕೆರೆ, ರೇಷ್ಮೆ, ಕೃಷಿ ಉಳುವನಿಗೆ ಭೂಮಿ ಮಲಬಾರ್, ಮಹಿಳೆಯರಿಗೆ ಗೌರವ ಶೃಂಗೇರಿ ಶಾರದಾಂಬೆಯ ರಕ್ಷಣೆ ಗುಡಿ ಕೈಗಾರಿಕೆಗಳಿಂದ ಕಾರ್ಮಿಕರಿಗೆ ಉದ್ಯೋಗ, ರೈತರಿಗೆ ಹೊಸ ಯೋಜನೆಯ ಸಾಲ ರೈತರಿಗೆ ಅನುಕೂಲವಾಗುವಂತೆ ಕರಾ ನೀತಿ ಹೊಸ ಮಾದರಿಯ ಕ್ಯಾಲೆಂಡರ್ ವೈಜ್ಞಾನಿಕವಾಗಿ ಆಡಳಿತದಲ್ಲಿ ಸುಧಾರಣೆ ವಿಶ್ವದಲ್ಲಿ ಪ್ರಥಮ ಬಾರಿಗೆ ರಾಕೆಟ್ ಉಡಾವಣೆ ಪರಿಚಯ ಮಾಡಿದರು ಟಿಪ್ಪು ಸುಲ್ತಾನ್ ರವರು. ಉನ್ನತ ಪದವಿಗಳಾದ ದಿವಾನ್ ಮತ್ತು ಸೈನಾಧಿಪತಿಗಳನ್ನ ಆದ್ಯತೆ ನೀಡಿರುವುದು .ಕೌಶಲ್ಯವುಳ್ಳ ಪುಸ್ತಕ ಪ್ರೇಮಿ ಟಿಪ್ಪು ಸುಲ್ತಾನ್ ರವರು ಅಜಾರಾಮರ ನೂರು ವರ್ಷ ನದಿಯಾಗಿ ಬದುಕಿಂತ ಒಂದು ದಿನ ಹುಲಿಯಾಗಿ ಬಾಳುವುದು ಲೇಸು ಮತ್ತು ಅಪಮಾನಕ್ಕಿಂತ ವೀರಮರಣ ಲೇಸು ಎಂದು ಟಿಪ್ಪು ಸುಲ್ತಾನ್ ಅವರು ಅಮೂಲ್ಯವಾದ ಘೋಷಣೆಯನ್ನು ನೀಡಿದರು….
ಭಾರತೀಯರಾದ ನಾವು ಸರ್ವೇ ಜನ ಸುಖಿನೋ ಭವಂತು ಎಂಬ ಜಯ ವಾಕ್ಯವನ್ನು ನಮ್ಮ ಹಿರಿಯರಿಂದ ಕಲಿತ್ತಿದ್ದೇವೆ. ಶಾಂತಿ ಸಮಾನತೆಯನ್ನು ಸಾರಿದ ಬುದ್ಧ, ಬಸವಣ್ಣ, ಮಹಾವೀರ, ಗುರುನಾನಕ್, ಪಿರಿಯಾರ್ ಪಂಪ ಕನಕ ರಾಮಕೃಷ್ಣ, ಪರಮಹಂಸ ಸ್ವಾಮಿ ವಿವೇಕಾನಂದರು ದಯಾನಂದ ಸರಸ್ವತಿ, ರಾಜಾರಾಮ್ ಮೋಹನ್ ರಾವ್, ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಡಾ. ಬಿಆರ್ ಅಂಬೇಡ್ಕರ್, ನಾಲ್ವಡಿ ಕೃಷ್ಣರಾಜ ಒಡೆಯರು, ಕುವೆಂಪು ಮುಂತಾದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹನೀಯರು ಹುಟ್ಟಿದ ನಾಡು ನಮ್ಮದು ಆಗಿದೆ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದು ನಿಂತಿರುವ ಅಸಾಮಾನ್ಯ ಆದರ್ಶ ವತಿಯಿಂದ ಟಿಪ್ಪು ಸುಲ್ತಾನ್ ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ…
ಪ್ರತಿಭಟನೆಯಲ್ಲಿ ಇತಿಹಾಸ ತಜ್ಞ ನಂಜರಾಜ್ ಅರಸು, ಆಮ್ ಆದ್ಮಿ ಪಕ್ಷದ ಮಂಡ್ಯ ಜಿಲ್ಲಾ ಅಧ್ಯಕ್ಷೆ ಅಂಬರಿನ್ ತಾಜ್, ಮಾಜಿ ಹುಲಿಕೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ರೇಷ್ಮಾ ಬಾನು,ಶಿವಣ್ಣ, ರಾಮಣ್ಣ, ಶ್ರೀನಿವಾಸ, ದೇವಮ್ಮ, ಏಜಸ್ ಪಾಶ, ಪುಷ್ಪಲತಾ,
ಗೋವಿಂದರಾಜು, ಫರೀನ್ ಖಾನ್, ಸುಲ್ತಾನ್ ಪಾಶ, ಹಾಜರಿದ್ದರು..
ವರದಿ:-ಟಿ ಎಸ್ ಶಶಿಕಾಂತ್
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ