ಮಂಡ್ಯ: ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಆನೆಗೊಳ ಗ್ರಾಮದ ನಿವಾಸಿಯಾದ ಬಿ.ಎಂ ಕಿರಣ್‌ರವರು ತನ್ನದೇ ಆದ ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುತ್ತಿರುವುದು ವಿಶೇಷವಾಗಿ.ಕೊರೋನಾ ವೈರಸ್ ಎಂಬ ಮಾರಕ ಕಾಯಿಲೆಗೆ ದೇಶವೇ ಲಾಕ್ ಡೌನ್ ಮಾಡಿದ್ದು ಹಲವು ರಾಜಕಾರಣಿ ನಾಯಕರುಗಳು ಜನರ ಕಷ್ಟಗಳನ್ನು ಕೇಳದೆ ಮನೆ ಸೇರಿದ್ದಾರೆ..
ಆದರೆ ಆನೆಗೊಳ ಗ್ರಾಮದ ನಿವಾಸಿ ಬಿ.ಎಂ ಕಿರಣ್ ರವರು ಬೆಂಗಳೂರಿನಲ್ಲಿ ಪ್ರಥಮದರ್ಜೆ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದು ಬಂದ ಹಣದಲ್ಲಿ ಸಮಾಜ ಸೇವೆಗಾಗಿ
ಮುಡಿಪಾಗಿಟ್ಟು ಜನರ ಮನಸ್ಸು ಗೆದ್ದಿದ್ದಾರೆ..ಕಿಕ್ಕೇರಿ ಹೋಬಳಿಯ ಪ್ರತಿ ಗ್ರಾಮದಲ್ಲಿ ಎಷ್ಟೂ ವಯಸ್ಸಾದ ಜನರು ಈ ಲಾಕ್ ಡೌನ್ ಇಂದಾಗಿ ಮನೆಯ ಹೊರಗೆ ಬರುಲು ಸಹ ಕಷ್ಟಕರವಾಗಿ. ಬಿ.ಪಿ. ಶುಗರ್, ಹೃದಯ ಸಂಬAಧಿಸಿದ ಕಾಯಿಲೆಗಳಿಗೆ ಮೆಡಿಸಿನಗಳನ್ನು ತಾವೇ ಸ್ವತಃ ಪೂರೈಕೆ ಮಾಡುತ್ತಿದ್ದು ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ..ಅಲ್ಲದೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿರುವ ಬಡವರನ್ನು ಗುರುತಿಸಿ ಪ್ರತಿ ಮನೆಗಳಿಗೆ ಆಹಾರ ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸಿದ್ದಾರೆ. ಅಲ್ಲದೆ ಕಳೆದ ಎರಡು ತಿಂಗಳಿಯಿAದ ಬೃಹತ್ ಆರೋಗ್ಯ ಶಿಬಿರ ನಡೆಸಿ ಸುಮಾರು ೪೫ ಜನರಿಗೆ ಶಸ್ತ್ರ ಚಿಕಿತ್ಸೆ, ಹಾಗೂ ೯ ಜನರಿಗೆ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಿಸುವ ಮೂಲಕ ಮಾದರಿ ನಾಯಕನಾಗಿದ್ದರು..ಜನರ ಕಷ್ಟಗಳಿಗೆ ಸ್ಪಂದಿಸಲೇAದೇ ಕಿಕ್ಕೇರಿ ಪಟ್ಟಣದಲ್ಲಿನ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಹೆಸರಿನಲ್ಲಿ ಒಂದು ಕಛೇರಿಯು ಸಹಾ ತೆರಿಯಲಾಗಿದೆ.. ಇಂತಹ ಮಾನವೀಯತೆ ಉಳ್ಳ ವ್ಯಕ್ತಿಗಳು ರಾಜಕೀಯ ಪ್ರವೇಶ ಮಾಡಿ ಇನ್ನೂ ಹೆಚ್ಚಿನ ಸೇವೆ ಮಾಡಲು ಅವಕಾಶ ನೀಡಬೇಕು ಎಂಬುದೇ ಕಿಕ್ಕೇರಿ ಹೋಬಳಿಯ ಜನರ ಮಾತಾಗಿದೆ..
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ