September 16, 2024

Bhavana Tv

Its Your Channel

ಅಂಬಿ ಅಭಿಮಾನಿಗಳಿಂದ ಅಂಗವಿಕಲರಿಗೆ ಆಹಾರ ಕಿಟ್ ವಿತರಣೆ. ಸಂಸದೆ ಸುಮಲತಾ ಭಾಗಿ

ಪಾಂಡವಪುರ: ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತಾಲ್ಲೂಕಿನ ಹಲವಾರು ಅಂಗವಿಕಲರಿಗೆ ಇಲ್ಲಿನ ಸಂಸದೆ ಸುಮಲತಾ ಅಂಬರೀಶ್ ಅಭಿಮಾನಿಗಳ ಸಂಘದ ಪರವಾಗಿ ಆಹಾರದ ಕಿಟ್ ವಿತರಿಸಿದರು…

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕರ‍್ಯಕ್ರಮದಲ್ಲಿ ಅವರು ಮಾತನಾಡಿ,
ಲಾಕ್‌ಡೌನ್‌ನಿಂದ ಜನರು ತೀವ್ರ ಕಷ್ಟವನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಅಂಗವಿಕಲರ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಸಂರ‍್ಭದಲ್ಲಿ ಅಂಬರೀಶ್ ಅಭಿಮಾನಿಗಳು ಅವರ ನೆರವಿಗೆ ನಿಂತಿರುವುದು ಶ್ಲಾಘನೀಯ ಎಂದರು…

ಇದೇ ಸಂರ‍್ಭದಲ್ಲಿ ಕಾಂಗ್ರೆಸ್ ಮುಖಂಡ ಸಿ.ಆರ್.ರಮೇಶ್ ಮಾತನಾಡಿ, ಸಂಸದರು ಕೂಡಲೇ ಕೆಡಿಪಿ ಸಭೆ ಕರೆಯಬೇಕು. ತಾಲ್ಲೂಕಿನಲ್ಲಿ ರ‍್ಕಾರಿ ಕೆಲಸ ಮತ್ತು ಕಾಮಗಾರಿಗಳು ಏಕಪಕ್ಷೀಯವಾಗಿ ನಡೆಯುತ್ತಿವೆ. ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಕೆಲಸವನ್ನು ಮಾತ್ರ ಮಾಡುತ್ತಿದ್ದು, ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜನಸಾಮಾನ್ಯರ ಕೆಲಸಗಳು ಸರಾಗವಾಗಿ ನಡೆಯುವಂತೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.
ಇದೇ ಸಂರ‍್ಭದಲ್ಲಿ ಸಂಸದೆ ಸುಮಲತಾ ಪಟ್ಟಣದ ವಿ.ಸಿ. ಕಾಲೂನಿಗೆ ಭೇಟಿ ನೀಡಿ ಅಲ್ಲಿಯ ಪೌರಕರ‍್ಮಿಕರಿಗೆ ಆಹಾರದ ಕಿಟ್ ವಿತರಿಸಿದರು. ಬಳಿಕ ಪಟ್ಟಣದ ಸರ‍್ವಜನಿ ಆಸ್ಪತ್ರೆಯಲ್ಲಿರುವ ಅಂಬಿ ಸುಬ್ಬಣ್ಣ ಅವರ ಕ್ಯಾಂಟಿನ್‌ಗೆ ಭೇಟಿ ನೀಡಿ ಅಲ್ಲಿ ಹಾಕಲಾಗಿರುವ ಅಂಬರೀಶ್ ಅವರ ವಿವಿಧ ಪೋಸ್ಟರ್‌ಗಳನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಉಪ ವಿಭಾಗಾಧಿಕಾರಿ ವಿ.ಆರ್. ಶೈಲಜಾ,ತಹಸಿಲ್ದಾರ್ ಪ್ರಮೋದ್ ಎಲ್.ಪಾಟೀಲ್, ತಾಪಂ ಇಒ ಆರ್.ಪಿ.ಮಹೇಶ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್,
ಪಿಡಿಒ ಶ್ರೀನಿವಾಸ್, ಮುಖಂಡರಾದ ಎಲ್.ಸಿ.ಮಂಜುನಾಥ್, ಈರೇಗೌಡ, ಮಹದೇವು, ದೀಪು, ಎಸ್.ಅಭಿಷೇಕ್, ಎಸ್.ವಿನಯ್ ಕುಮಾರ್, ಜಲೇಂದ್ರ, ಸೈಯದ್ ಅಶ್ರಫ್ ಮುಂತಾದವರು ಇದ್ದರು.

ವರದಿ..
TS ಶಶಿಕಾಂತ್
ಪಾಂಡವಪುರ

error: