ಮoಡ್ಯ ಜಿಲ್ಲೆ : ಕೊರೋನಾ ಮಹಾಮಾರಿಯ ಬಗ್ಗೆ ಹೆದರಬೇಕಾಗಿಲ್ಲ. ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿ ಮುಖಕ್ಕೆ ಮಾಸ್ಕ್ ಅಳವಡಿಸಿಕೊಂಡು ಕೈಗಳನ್ನು ಸ್ಯಾನಿಟೈಸರ್ ಇಲ್ಲವೇ ಸೋಪಿನಿಂದ ತೊಳೆದುಕೊಂಡು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕೈಮುಗಿದು ಮನವಿ ಮಾಡಿದ ಸುಮಲತಾ ಕೊರೋನಾ ಸೀಲ್ ಡೌನ್ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನಿಯಮಿತವಾಗಿ ಆಗಮಿಸಿ ದನಕರುಗಳ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ದೇವರಾಜು ಅವರಿಗೆ ಸೂಚನೆ ನೀಡಿದರು.
ಜಾಗಿನಕೆರೆ ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದ ಸುಮಲತಾ.. ಕೊರೋನಾ ಪಾಸಿಟಿವ್ ಪತ್ತೆಯಾಗಿರುವ ವ್ಯಕ್ತಿಗಳ ಸಂಪರ್ಕದಲ್ಲಿದ್ದ ಎಲ್ಲಾ ವ್ಯಕ್ತಿಗಳ ಗಂಟಲು ದ್ರವದ ಸ್ವೈಪ್ ಪರೀಕ್ಷಾ ಮಾದರಿಯ ಕೊರೋನಾ ಸ್ಯಾಂಪಲ್ ಟೆಸ್ಟ್ ವರದಿಯು ಬಂದಿದ್ದು ಎಲ್ಲರಲ್ಲಿಯೂ ಸೋಂಕು ನೆಗೆಟಿವ್ ಆಗಿರುವುದರಿಂದ ಗ್ರಾಮಸ್ಥರು ಧೈರ್ಯವಾಗಿರಬೇಕು. ಕೊರೋನಾ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಹಗಲಿರುಳೆನ್ನದೇ ದುಡಿಯುತ್ತಿರುವ ವೈದ್ಯರು, ಪೋಲಿಸರು, ಆಶಾ ಮತ್ತು ಆರೋಗ್ಯ ಕಾರ್ಯಕರ್ತರ ಕೆಲಸಕ್ಕೆ ಅಡ್ಡಿಪಡಿಸದೇ ಸಂಪೂರ್ಣ ಸಹಕಾರ ನೀಡಬೇಕು.. ಮುಂಬೈ ಸೇರಿದಂತೆ ಹೊರ ರಾಜ್ಯಗಳು ಹಾಗೂ ಹೊರ ಪ್ರದೇಶಗಳಿಂದ ಆಗಮಿಸುತ್ತಿರುವ ಜನರ ಆರೋಗ್ಯ ಸಂವರ್ಧನೆಗಾಗಿ ನಿರ್ಮಿಸುತ್ತಿರುವ ಕ್ವಾರಂಟೈನ್ ಕೇಂದ್ರಗಳ ಆರಂಭಕ್ಕೆ ಜನರು ಅಡ್ಡಿಪಡಿಸಬಾರದು ಎಂದು ಸುಮಲತಾ ಅಂಬರೀಶ್ ಕೈಮುಗಿದು ಮನವಿ ಮಾಡಿದರು.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ