ಮಂಡ್ಯ: ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ೪೫ ದಿನಗಳಿಂದ ಕೆಲಸ ಇಲ್ಲದೆ ಜೀವನ ನಡೆಸಲು ತುಂಬಾ ಕಷ್ಟಕರವಾಗಿದ್ದು ನಮಗೂ ಸಹಾಯ ಧನ ನೀಡಬೇಕೆಂದು ಕೃಷ್ಣರಾಜಪೇಟೆ ತಾಲ್ಲೂಕು ಟೈಲರ್ಸ್ ಅಸೋಸಿಯೇಷನ್ ವತಿಯಿಂದ ತಹಶಿಲ್ದಾರ್ ಎಂ.ಶಿವಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ಸರ್ಕಾರವು ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಲಾಗಿತ್ತು.ಈ ಸಮಯದಲ್ಲಿ ಹೂ, ತರಕಾರಿ, ಹಣ್ಣಿನ ಬೆಳೆಗಳ ನಷ್ಟದಿಂದ ತತ್ತರಿಸಿದ ರೈತರಿಗೆ ೨೫,೦೦೦ ರೂಪಾಯಿ ಪರಿಹಾರ ಘೋಷಿಸಿದೆ. ಸವಿತಾ ಸಮಾಜದ ಬಾಂಧವರಿಗೆ, ಆಟೋ ಚಾಲಕರಿಗೆ, ಮಡಿವಾಳ ಸಮಾಜದ ಬಾಂಧವರಿಗೆ, ಕಟ್ಟಡ ಕಾರ್ಮಿಕರಿಗೆ ಹಾಗೂ ನೇಕಾರರಿಗೆ ತಲಾ ಐದು ಸಾವಿರ ರೂ ಸಹಾಯ ಧನ ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ಇವರ ನೆರವಿಗೆ ಧಾವಿಸಿರುದಕ್ಕೆ ಮುಖ್ಯ ಮಂತ್ರಿಗಳಿಗೆ ಅಭಿನಂದನೆಗಳು. ಆದರೆ ಅದೇ ರೀತಿ ಟೈಲರ್ ವೃತ್ತಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಟೈಲರ್ ಗಳಿಗೆ ಯಾವುದೇ ರೀತಿಯ ಸಹಾಯ ಘೋಷಿಸದಿರುವುದು ವಿಷಾಧನೀಯವಾಗಿದೆ. ಆದ್ದರಿಂದ ದಯಮಾಡಿ ಸಂಬAಧಪಟ್ಟ ಅಧಿಕಾರಿಗಳು ಸರ್ಕಾರದ ಗಮನಕ್ಕೆ ಟೈಲರ್ ಗಳ ಸಂಕಷ್ಠವನ್ನು ತಂದು ನಮಗೂ ಸ್ವಲ್ಪಮಟ್ಟಿಗೆ ಸಹಾಯಧನ ಬಿಡುಗಡೆ ಮಾಡಿಸಿ ನಮ್ಮ ಕಷ್ಟಕ್ಕೆ ನೆರವಾಗಬೇಕೆಂದು ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಹಾಗೂ ತಾಲ್ಲೂಕು ಕಾರ್ಮಿಕ ನಿರೀಕ್ಷಕರಾದ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕು ಟೈಲರ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ರವಿ, ಖಜಾಂಚಿ ಮಹಮದ್ ಷಾಹಮಿದ್ (ಶ್ಯಾಮ್ ಟೈಲರ್) ಪ್ರಧಾನ ಕಾರ್ಯದರ್ಶಿ ಹೆಚ್. ಕೆ.ಮಂಜು, ಕಿಕ್ಕೇರಿ ಮಂಜುನಾಥ್, ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಾಕ್ಷ ಸಮೀರ್ ಭಾಗವಹಿಸಿ ಮನವಿ ಸಲ್ಲಿಸಿದರು..
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ