ಬೈಂದೂರು- ಕುಮಾರ ನಾಯ್ಕ ಭಟ್ಕಳರವರ ಪ್ರಧಾನ ಸಂಪಾದಕತ್ವದಲ್ಲಿ ಆರಂಭಗೊAಡಿರುವ ಕನಸಿನ ಭಾರತ ವಾರಪತ್ರಿಕೆ ಕರಾವಳಿ ಕರ್ನಾಟಕದ ನೂತನ ಸಂಚಿಕೆಯ ಪತ್ರಿಕೆಯನ್ನು ರವಿವಾರ ಉದ್ಯಮಿ ,
ಸಮಾಜಸೇವಕರು, ಬಿಜೆಪಿ ಮುಖಂಡರು ಆದ ಶ್ರೀ ಗೋವಿಂದ ಬಾಬು ಪೂಜಾರಿ ಬೈಂದೂರು ಅವರಿಗೆ ಅವರ ಉಪ್ಪುಂದದ ಕಚೇರಿಯಲ್ಲಿ ಭೇಟಿ ಆಗಿ ನೀಡಲಾಯಿತು.ಅವರು ಶುಭ ಹಾರೈಸಿ ಈ ಸಂದರ್ಭದಲ್ಲಿ ಮಾತಾನಾಡಿ ಈ ಕನಸಿನ ಭಾರತ ವಾರ ಪತ್ರಿಕೆಯು ಕರಾವಳಿ ಜನತೆಯ ಕನಸನ್ನು ಸಕಾರಗೊಳಿಸಲು ಹೋರಾಟ ಮಾಡಲಿ ಎಂದು ತಿಳಿಸಿದರು. ತಾವು ಸದಾ ಈ ಪತ್ರಿಕೆಗೆ ಸಹಾಯ ಸಹಕಾರ ನೀಡುವುದಾಗಿ ತಿಳೀಸಿದರು. ರಮೇಶ್ ಎಸ್ ಜಿ ಬೆಂಗಳೂರು ಸಂಪಾದಕರು, ಸೀತಾರಾಮ ಆರ್ ಅಚಾರ್ಯ ಶಿರಸಿ ಜಾಹಿರಾತು ಮುಖ್ಯಸ್ಥರಾಗಿ ಈ ಪತ್ರಿಕೆ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಸಂದರ್ಭದಲ್ಲಿ ಪ್ರಧಾನ ಸಂಪಾದಕ ಕುಮಾರ ನಾಯ್ಕ ಭಟ್ಕಳ, ಉಪಸ್ಥಿತರಿದ್ದರು
More Stories
ಮಕ್ಕಳಿಗಾಗಿ ಸಿದ್ಧ ಸಮಾಧಿ ಯೋಗ ಸಂಸ್ಕಾರ ಶಿಬಿರ ಮತ್ತು ಗಾಂಧಾರಿ ವಿದ್ಯೆ.
ಸೈಬರ್ ಜಾಗ್ರತಿ ಕಾರ್ಯಾಗಾರ
ಯು. ರಾಘವೇಂದ್ರ ಹೊಳ್ಳ ಅವರಿಗೆ ಬೀಳ್ಕೋಡಿಗೆ ಸಮಾರಂಭ