December 22, 2024

Bhavana Tv

Its Your Channel

ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಸ್ವಾಗತಾರ್ಹ – ಕಲ್ಲಿನಾಥ ದೇವರು

ಬಾಗಲಕೋಟೆ: ಜಗತ್ತಿಗೆ ಎಣ್ಣೆಯನ್ನು ನೀಡಿದ ಗಾಣಿಗ ಸಮುದಾಯಕ್ಕೆ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಸಂತಸದ ವಿಚಾರ ಎಂದು ಕೋಲ್ಹಾರದ ದಿಗಂಬರೇಶ್ವರ ಮಠದ ಶ್ರೀಗಳಾದ ಕಲ್ಲಿನಾಥ ದೇವರು ಹೇಳಿದರು.
ಅವರು ಕಮತಗಿ ಪಟ್ಟಣದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ 85ಲಕ್ಷ್ಕ್ಕೂ ಅಧಿಕ ಜನಸಂಖ್ಯೆ ಇರುವ ಗಾಣಿಗ ಸಮುದಾಯವು ಬೇರೆಯವರ ಹಾಗೆ ಹೆದರಿಸಿ ಸರ್ಕಾರದ ಮೇಲೆ ಒತ್ತಡ ಹೇರಿಲ್ಲಾ. ಈ ಸಮುದಾಯವು ನಿರ್ಗತಿಕ ಸಮುದಾಯ ಎಂದು ಮನಗಂಡ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು ಸ್ವಾಗತಾರ್ಹ ಎಂದು ಕಲ್ಲಿನಾಥ ದೇವರು ಹೇಳಿದರು.
ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಗುರುಹಿರಿಯರು ಉಪಸ್ಥಿತರಿದ್ದರು

ವರದಿ ನಿಂಗಪ್ಪ ಕಡ್ಡಿ ಮಟ್ಟಿ

error: