April 24, 2024

Bhavana Tv

Its Your Channel

ವಿವಿಧ ದಲಿತ ಪರ ಸಂಘಟನೆಗಳಿoದ ಪ್ರತಿಭಟನೆ

ಹುನಗುಂದ: ತಾಲೂಕಿನ ಕೂಡಲಸಂಗಮ ಕ್ರಾಸ್ ನಲ್ಲಿ ನಿರ್ಮಿಸಲಾದ ಭಾರತ ರತ್ನ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹರಿದು ಧ್ವಜವನ್ನು ವಿಕೃತಗೊಳಿಸಿದ್ದನ್ನು ಖಂಡಿಸಿ ತಾಲೂಕಿನ ವಿವಿಧ ದಲಿತ ಪರ ಸಂಘಟನೆಗಳು ಗುರುವಾರ ಕೂಡಲಸಂಗಮ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳನ್ನು ಬಂಧಿಸುವAತೆ ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಪ್ರತಿಭಟನೆ ನಿರತ ದಲಿತ ಮುಖಂಡ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿ ವಿಶ್ವಕ್ಕೆ ಮಾದರಿಯಾದ ಲಿಖಿತ ಸಂವಿಧಾನವನ್ನು ನೀಡಿ ದೇಶದ ಆಡಳಿತಕ್ಕೆ ಕಾನೂನು ರೂಪಿಸಿಕೊಟ್ಟ ಮಹಾನನಾಯಕನ ಭಾವಚಿತ್ರವನ್ನು ಹರಿದು ಹಾಕಿರುವುದು ನಿಜಕ್ಕೂ ಖಂಡನೀಯವಾದದ್ದು. ಇಂತಹ ಹೇಯ ಕೃತ್ಯ ಮಾಡಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಕಾನೂನು ಪ್ರಕಾರವಾಗಿ ಶಿಕ್ಷೆ ವಿಧಿಸಬೇಕು. ದೇಶದ ಪ್ರತಿಯೊಂದು ಜಾತಿ ಜನಾಂಗಕ್ಕೆ ಸಮಾನತೆ ಸ್ವಾತಂತ್ರ‍್ಯವನ್ನು ಕಲ್ಪಿಸಿಕೊಟ್ಟ ಪುಣ್ಯಾತ್ಮನನ್ನು ಅಪಮಾನ ಮಾಡುವ ಮನುವಾದಿ ಧೋರಣೆಯನ್ನು ತಕ್ಷಣವೇ ನಿಲ್ಲಬೇಕು ಎಂದರು.

ತಾ.ಪA. ಮಾಜಿ ಸದಸ್ಯ ಚಂದಪ್ಪ ಮಾದರ ಮಾತನಾಡಿ ಇಂದು ದೇಶದ ಸಂಸತ್ ಮತ್ತು ರಾಜ್ಯ ವಿಧಾನಸೌಧ ನಡಿಯೋದು ಡಾಕ್ಟರ್ ಬಾಬಾ ಸಾಹೇಬ್ ಕೊಟ್ಟಂತಹ ಸಂವಿಧಾನದಿAದ ಅಷ್ಟೇ ಅಲ್ಲ ಇವತ್ತು ಜಿಲ್ಲಾಧಿಕಾರಿ ಮತ್ತು ತಾಲೂಕ ದಂಡಾಧಿಕಾರಿ ಕೂಡ ಸಂವಿಧಾನದ ಆಧಾರದ ಮೇಲೆ ಅಧಿಕಾರ ನಡೆಸುತ್ತಿದ್ದು ದೇಶದ ಆಡಳಿತವನ್ನು ನಡಿಸಲು ಚೌಕಟ್ಟು ನಿರ್ಮಿಸಿದವರೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ ಕಿಡಿಗೇಡಿಗಳನ್ನು ಗುರುತಿಸಿ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ತಿಳಿಸಿದರು.

ಮುಖಂಡ ಉಮೇಶ್ ಕಡೆಮನಿ ಮಾತನಾಡಿ ಬಾಬಾ ಸಾಹೇಬರು ವ್ಯಕ್ತಿಯಲ್ಲ ಒಂದು ಶಕ್ತಿ ಅಂತ ಶಕ್ತಿಯ ಮೇಲೆ ಕೈ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕು ಹಾಗೂ ಈ ರಾಜ್ಯದಲ್ಲಿ ಗಡಿಪಾರು ಮಾಡಬೇಕೆಂದರು.

ಮಲ್ಲಿಕಾರ್ಜುನ ಹೊಸಮನಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಚಂದಪ್ಪ ಮಾದರ ,ಮುತ್ತು ಕಡೆಮನಿ, ಜಗದೀಶ್ ಚಲವಾದಿ, ಮಂಜುನಾಥ್ ಮಸ್ಕಿ, ಪರಸಪ್ಪ ಮಾದರ, ಮಂಜುನಾಥ ಬಿಸಿಲದಿನ್ನಿ, ಸುನಿಲ್ ಚಲವಾದಿ, ಕನಕಪ್ಪ ದಾಸರ, ಯಮನಪ್ಪ ಚಲವಾದಿ, ಶಿವು ಕಡೆಮನಿ, ಸುನಿಲ್ ದಾಸರ, ಭೀಮ್, ಭೀಮರಾವ್ ಚಲವಾದಿ, ಅಯ್ಯಪ್ಪ ಚಲವಾದಿ, ರಾಜು ಈಟಿ, ಶ್ರೀಕಾಂತ್ ಚಲವಾದಿ, ಮಹಾಂತೇಶ್ ಚಲವಾದಿ, ಬಸವರಾಜ್ ಚಲವಾದಿ,ಮುಂತಾದವರು ಉಪಸ್ಥಿರಿದ್ದರು

ವರದಿ: ಮಹಾಂತೇಶ ಕುರಿ

error: