
ಮೈಸೂರು: ಜೂ.೧೮ಕ್ಕೆ ಪಿಯುಸಿ ಪರೀಕ್ಷೆ ನಡೆಯಲಿದ್ದು, ಜುಲೈ ೮ಕ್ಕೆ ಫಲಿತಾಂಶ ನೀಡಬಹುದು. ಜೂ.೨೫ ರಿಂದ ಜುಲೈ೪ ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯಲಿದ್ದು, ಜುಲೈ ಅಂತ್ಯಕ್ಕೆ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುಳಿವು ನೀಡಿದ್ದಾರೆ.
ಮೈಸೂರಿನಲ್ಲಿ ಆಡಳಿತ ತರಬೇತಿ ಸಂಸ್ಥೆಯಲ್ಲಿ ಪರೀಕ್ಷೆ ಸಿದ್ಧತೆಗಳ ಕುರಿತಂತೆ ಮೈಸೂರು, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ಡಿಡಿಪಿಐ, ಶಿಕ್ಷಣಾಧಿಕಾರಿಗಳು ಹಾಗೂ ಡಯಟ್ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ೪ ಸಾವಿರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ೮.೪೮.೫೦೦ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವವರಿದ್ದಾರೆ. ಒಂದು ಬೆಂಚಿನಿoದ ಇನ್ನೂ ಬೆಂಚಿಗೆ ನಾಲ್ಕು ಅಡಿ ಅಂತರ ಇರುವಂತೆ ನೋಡಿಕೊಳ್ಳಲಾಗುವುದು. ನಾಲ್ಕು ವಿಭಾಗದಲ್ಲಿ ಮೇಲ್ವಿಚಾರಣೆ ಅಧಿಕಾರಿ ನೇಮಿಸಲಾಗಿದೆ. ಸಮಗ್ರ ಶಿಕ್ಷಣ ನಿರ್ದೆಶಕರಾದ ಡಾ.ರೇಜು ಅವರನ್ನು ಮೇಲುಸ್ತುವಾರಿಯಾಗಿ ನೇಮಿಸಿದ್ದು, ಬೆಂಗಳೂರಿಗೆ ಆಯುಕ್ತರಾದ ಜಗದೀಶ್ ನೇಮಿಸಿದ್ದು ಹಾಗೆಯೇ ಕಲುಬರಗಿ, ಧಾರವಾಡಕ್ಕೂ ನೇಮಿಸಲಾಗುವುದು ಎಂದರು.
ಪರೀಕ್ಷೆ ವೇಳೆ ೨೪ ಮಂದಿ ಕುಳಿತುಕೊಳ್ಳುವ ಕೊಠಡಿಗಳಲ್ಲಿ ೧೨ ಮಂದಿಗಷ್ಟೇ ಅವಕಾಶ ಕಲ್ಪಿಸಲಾಗುವುದು. ವಿದ್ಯಾರ್ಥಿಗೆ ೨ ಜತೆ ಪುನರ್ ಬಳಕೆ ಮಾಸ್ಕ್ ಇಲಾಖೆಯಿಂದ ನೀಡಲಾಗುವುದು. ಕೇಂದ್ರದಲ್ಲಿ ಸ್ಯಾನಿಟರಿ, ಥರ್ಮಲ್ ಸ್ಕ್ರೀನಿಂಗ್, ಥರ್ಮಲ್ ಸ್ಕಾನಿಂಗ್ ತಪಾಸಣೆ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರಾಥಮಿಕ ಚಿಕಿತ್ಸೆಗೆ ಒಳ ಪಟ್ಟ ವೇಳೆ ವ್ಯತಿರಿಕ್ತ ಲಕ್ಷಣ ಕಂಡು ಬಂದ ವಿದ್ಯಾರ್ಥಿಗಳುನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು. ಕಂಟೋನ್ಮೆoಟ್ ಜೋನ್ನಲ್ಲಿ ಇರುವ ಪರೀಕ್ಷಾ ಕೇಂದ್ರಗಳನ್ನು ಬದಲಾಯಿಸಲಾಗುವುದು. ಪರೀಕ್ಷಾ ಕೇಂದ್ರ ಕಂಟೋನ್ಮೆoಟ್ ಜೋನ್ ಆದರೂ ಅದನ್ನು ಸಹ ಬದಲಿಸಲಾಗುವುದು ಎಂದು ತಿಳಿಸಿದರು.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ