May 19, 2024

Bhavana Tv

Its Your Channel

೨೪ ಗಂಟೆಗಳಲ್ಲಿ ರಾಜ್ಯದಲ್ಲಿ ೨೪೮ ಸೊಂಕಿತರು ಪತ್ತೆ; ೧೧ ಜಿಲ್ಲೆಯಲ್ಲಿ ಶತಕ ದಾಟಿದ ಕರೋನಾ ಸೊಂಕಿತರು

ಬೆ0ಗಳೂರು: ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ಕರೊನಾ ಸೋಂಕು ೨೪೮ ಹೊಸದಾಗಿ ಪತ್ತೆಯಾಗುವ ಮೂಲಕ, ಸೋಂಕಿತರ ಸಂಖ್ಯೆ ೨೭೮೧ಕ್ಕೆ ಏರಿದೆ. ಇವರ ಪೈಕಿ ಅಂತರರಾಜ್ಯ ಪ್ರಯಾಣಿಕರ ಸಂಖ್ಯೆ ೨೨೭ ಆಗಿದ್ದು ನೆರೆ ರಾಜ್ಯದಿಂದಲೇ ಕರ್ನಾಟಕ ಕರೋನಾ ಹೆಚ್ಚಳವಾಗುವ ಆತಂಕ ಸೃಷ್ಟಿಸಿದೆ.
ಈ ಪೈಕಿ ೮೯೪ ಮಂದಿ ಬಿಡುಗಡೆಗೊಂಡಿದ್ದು, ೧೮೩೭ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಇಂದು ಹೊಸದಾಗಿ ಕರೋನಾ ಸೊಂಕಿತರು ಪತ್ತೆಯಾದ ಮಾಹಿತಿ ಹೀಗಿದೆ.
ರಾಯಚೂರು ೬೨, ಕಲಬುರ್ಗಿ ೬೧, ಯಾದಗಿರಿ ೬೦, ಉಡುಪಿ ೧೫, ಬೆಂಗಳೂರು: ೧೨, ದಾವಣಗೆರೆ ೪, ಹಾಸನ ೪, ಚಿಕ್ಕಬಳ್ಳಾಪುರ ೫, ವಿಜಯಪುರ ೪, ಮೈಸೂರು ೨, ಬಳ್ಳಾರಿ ೯, ತುಮಕೂರು ೨, ಚಿಕ್ಕಮಗಳೂರು ೨, ಮಂಡ್ಯ-೨, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.
ರಜ್ಯದಲ್ಲಿ ಇದುವರೆಗೂ ಶತಕ ದಾಟಿದ ಜಿಲ್ಲೆಗಳನ್ನು ಗಮನಿಸುದಾದರೆ ಬೆಂಗಳೂರಿನಲ್ಲಿ ೩೦೩ ಸೋಂಕಿತರು ಇಲ್ಲಿಯವರೆಗೆ ಪತ್ತೆಯಾಗಿದ್ದರೆ, ಮಂಡ್ಯದಲ್ಲಿ ೨೫೭, ಕಲಬುರಗಿಯಲ್ಲಿ ೨೫೧, ಯಾದಗಿರಿಯಲ್ಲಿ ೨೨೩, ಉಡುಪಿಯಲ್ಲಿ ೧೬೪, ದಾವಣಗೆರೆಯಲ್ಲಿ ೧೪೬, ಬೆಳಗಾವಿಯಲ್ಲಿ ೧೪೬, ಹಾಸನದಲ್ಲಿ ೧೪೪, ಚಿಕ್ಕಬಳ್ಳಾಪುರದಲ್ಲಿ ೧೩೬. ರಾಯಚೂರಿನಲ್ಲಿ ೧೩೪, ಬೀದರ್?ನಲ್ಲಿ ೧೨೦ ಸೋಂಕಿತರು ಇದುವರೆಗೆ ಪತ್ತೆಯಾಗುವ ಮೂಲಕ ಒಟ್ಟಾರೆ ೧೧ ಜಿಲ್ಲೆಗಳಲ್ಲಿ ಸೋಂಕು ಶತಕ ಮೀರಿದೆ.

error: