May 16, 2024

Bhavana Tv

Its Your Channel

ಮೋದಿಯನ್ನು 3ನೇ ಅವಧಿಗೆ ಪ್ರಧಾನಿಯಾಗಿಸಿ ಎಂದು ಕೆನರಾ ಲೋಕಸಭೆಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ

ಭಟ್ಕಳ : ರಾಮಮಂದಿರ ನಿರ್ಮಾಣವಾದ ಮೇಲೆ ನಾವು ಮೊದಲ ಚುನಾವಣೆಯನ್ನು ಎದುರಿಸುತ್ತಿದ್ದು, ರಾಮನ ಮಂದಿರ ತಂದ ಮೋದಿಜಿಯವರಿಗೆ ಧನ್ಯವಾದ ಸಲ್ಲಿಸುವದಕ್ಕೆ ಪ್ರತಿ ಪ್ರಜೆಗಳಿಗೆ ಇದೊಂದು ಸುವರ್ಣ ಅವಕಾಶ. ಬಿಜೆಪಿಯನ್ನು ಗೆಲ್ಲಿಸಿ ಮೋದಿಯನ್ನು 3ನೇ ಅವಧಿಗೆ ಪ್ರಧಾನಿಯಾಗಿಸಿ ಎಂದು ಕೆನರಾ ಲೋಕಸಭೆಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಭಟ್ಕಳ ಪಟ್ಟಣದ ಬಿಜೆಪಿ ಮುಖಂಡ ಕೇದಾರ ಕೊಲ್ಲೆ ಅವರ ಮನೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಹಿಡಿ ದೇಶದಲ್ಲಿ ಕಾಂಗ್ರೆಸ್ ಹತಾಶ ಸ್ಥಿತಿಗೆ ತಲುಪಿದೆ. ಅಧಿಕೃತ ವಿರೋಧ ಪಕ್ಷವಾಗಲು ಅವರಿಗೆ ಸಾದ್ಯವಾಗುವದಿಲ್ಲ.  ಸೋನಿಯಾ ರಾಹುಲ್ ನೇತೃತ್ವದ ಕಾಂಗ್ರೆಸ್ ಯಾರು ಒಪ್ಪುವದಿಲ್ಲ. ಕಾಂಗ್ರೆಸ್ 250 ಸೀಟು ನಿಲ್ಲಸಿ ಬಹುಮತ ಪಡೆಯುತ್ತೇವೆ ಎಂದು ಯಾವ ನೈತಿಕತೆಯಿಂದ ಮಾತನಾಡುತ್ತಾರೊ ತಿಳಿಯುತ್ತಿಲ್ಲ. ಕಾಂಗ್ರೆಸ್ ಮಿತ್ರಪಕ್ಷಗಳು ದಿನಕ್ಕೊಂದು ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಾರೆ. ಅವರಿಗೂ ಇವರಿಗೂ ಹೊಂದಾಣಿಕೆ ಇಲ್ಲ. ದಿನಕ್ಕೊಬ್ಬರಂತೆ ಮೈತ್ರಿಕೂಟ ಬಿಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನರೇಂದ್ರ ಮೋದಿಯವರ ಪ್ರಣಾಳಿಕೆ ಮುಂದಾಲೋಚನೆಯಿAದ ರಚಿಸಿದ್ದು, 3047ರಲ್ಲಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿದೆ. ಕಾಂಗ್ರೆಸ್ ಪಕ್ಷವೂ ಮುಸ್ಲಿಂ ಲೀಗ್ ನ ಎಡಪಂಥೀಯ ಪಕ್ಷದಂತಿದೆ. ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ ಪೊರೈಸುವದರಲ್ಲಿ ವಿಫಲರಾಗಿದ್ದಾರೆ. ಚುನಾವಣೆಯಲ್ಲಿ ಅದೆ ವಿಷಯ ಬಿಟ್ಟರೆ ಮತ್ತೆ ಬೇರೆ ವಿಷಯವೆ ಇಲ್ಲದೆ ಪರದಾಡುತ್ತಿದ್ದಾರೆ. ಕುಡಿಯುವ ನೀರು, ಅಭಿವೃದ್ದಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಭ್ರಷ್ಟಾಚಾರ, ಪಾಕಿಸ್ತಾನ ಜಿಂದಾಬಾದ, ಪೋಲಿಸ್ ಠಾಣೆ ಸುಟ್ಟವರ ವಿರುದ್ದ ಮೃದುಧೋರಣೆ ತಳೆಯುತ್ತಾರೆ ಎಂದು ಆರೋಪಿಸಿದರು. ತನ್ನ ಗೆಲುವು ನೂರಕ್ಕೆ ನೂರರಷ್ಟು ಶತಸಿದ್ದವಾಗಿದ್ದು, ನಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಬದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ರಾಜ್ಯ ಹಿಂದುಳಿದ ಮೊರ್ಚಾದ ಉಪಾಧ್ಯಕ್ಷ ಈಶ್ವರ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಕೆನರಾ ಲೋಕಸಭಾ ಸಂಚಾಲಕ ಗೋವಿಂದ ನಾಯ್ಕ, ಮಹಿಳಾ ಮೊರ್ಚಾದ ಜಿಲ್ಲಾಧ್ಯಕ್ಷೆ ಶಿಬಾನಿ ಶಾಂತರಾಮ, ಮುಖಂಡರಾದ ಸುಬ್ರಾಯ ದೇವಾಡಿಗ, ಶ್ರೀನಿವಾಸ ನಾಯ್ಕ ಇತರರು ಇದ್ದರು.

error: