December 22, 2024

Bhavana Tv

Its Your Channel

ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ

ಮು0ಡಗೋಡ: ನಾನು ಮಾಡಿದಷ್ಟು ಅಭಿವೃದ್ಧಿ ವಿಶ್ವೇಶ್ವರ ಹೆಗಡೆ ಕಾಗೇರಿ ಕನಸಿನಲ್ಲೂ ಮಾಡಿಲ್ಲ. ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಲಿ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸವಾಲೆಸೆದರು.

ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಶಿರಸಿ ಕ್ಷೇತ್ರಕ್ಕೆ ಅವರು ಸೀಮಿತರಾಗಿದ್ದರು. ಹಳಿಯಾಳ, ಕಾರವಾರ ಎಲ್ಲಾ ತಾಲೂಕಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಪ್ರವಾಸೋದ್ಯಮ ಕ್ಷೇತ್ರಕ್ಕೆ, ಜಿಲ್ಲೆಗಾಗಿ ನಾನು ಏನು ಕೆಲಸ ಮಾಡಿದ್ದೇನೆ ಎಂದು ಪಟ್ಟಿ ಕೊಡುತ್ತೇನೆ. ಕಾಗೇರಿ ಅಭಿವೃದ್ಧಿ ಏನು ಮಾಡಿದ್ದಾರೆಂದು ತಿಳಿಸಲಿ. ಅಭ್ಯರ್ಥಿ ಆಗಿದ್ದಾರೆಂದು ಬಾಯಿಗೆ ಬಂದತೆ ಕಾಗೇರಿ ಮಾತನಾಡಬಾರದು. ಅಂಜಲಿಯವರ ಪತಿ ಬಗ್ಗೆ ಕಾಗೇರಿ ಆರೋಪ ಮಾಡುತ್ತಿದ್ದಾರೆ. ಆ ಮೂಲಕ ಬಿಜೆಪಿ ಕೀಳುಮಟ್ಟದ ಪ್ರಚಾರಕ್ಕೆಇಳಿದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

error: