
ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ಹೊರವಲಯದ ಶ್ರವಣಬೆಳಗೊಳ ರಸ್ತೆಯಲ್ಲಿರುವ ಎರಡು ಎಕರೆ ವಿಸ್ತೀರ್ಣದ ವೀರಶೈವ ಸಮಾಜದ ರುದ್ರಭೂಮಿಯ ಅಭಿವೃದ್ಧಿಗೆ ಕಾಯಕಲ್ಪ ನೀಡುವಂತೆ ತಾಲ್ಲೂಕು ವೀರಶೈವ ಮಹಾಸಭಾದ ಪದಾಧಿಕಾರಿಗಳೊಂದಿಗೆ ಇಂದು ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಶೀಲ್ದಾರ್ ಎಂ. ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದ ಧನಂಜಯ ಜಿಲ್ಲಾಡಳಿತವು ಮಂಜೂರು ಮಾಡಿರುವ ಎರಡು ಎಕರೆ ರುದ್ರಭೂಮಿಯ ಜಾಗವನ್ನು ಕೂಡಲೇ ಪುರಸಭೆಗೆ ಹಸ್ತಾಂತರಿಸಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಅನುಕೂಲ ಮಾಡಬೇಕು ಎಂದು ಧನಂಜಯ ಆಗ್ರಹಿಸಿದರು. ವೀರಶೈವ ಸಮಾಜದ ರುದ್ರಭೂಮಿಯ ಸುತ್ತಲೂ ಕಾಂಪೌAಡ್, ಕುಡಿಯುವ ನೀರಿನ ಸೌಲಭ್ಯ, ಚಿತಾಗಾರದ ನಿರ್ಮಾಣ, ಸಂಪರ್ಕ ರಸ್ತೆ, ಫುಟ್ ಪಾಥ್ ನಿರ್ಮಾಣ ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಸರ್ವೇ ನಂ.೩೬೩ರ ರುದ್ರಭೂಮಿಯ ಜಾಗವು ತಗ್ಗು ಪ್ರದೇಶವಾದ್ದರಿಂದ ಗ್ರಾವಲ್ ಮಣ್ಣಿನ ಭರ್ತಿ ಮಾಡಿಸಿ ಮಳೆ ನೀರು ಹಾಗೂ ಹೇಮಾವತಿ ಜಲಾಶಯ ಯೋಜನೆಯ ನೀರು ನಿಲ್ಲದಂತೆ ಅನುಕೂಲ ಮಾಡಿಕೊಡಬೇಕು ಎಂದು ಧನಂಜಯ ಮನವಿ ಮಾಡಿದರು..
ಈ ಸಂದರ್ಭದಲ್ಲಿ ವೀರಶೈವ ಮಹಾಸಭಾದ ಪದಾಧಿಕಾರಿಗಳಾದ ಕೆ.ಎಸ್.ಸುರೇಶ್ ಕುಮಾರ್, ಎಂ.ಪಿ.ಪ್ರಕಾಶ್, ಶಿವಮೂರ್ತಿ, ನಾಗೇಂದ್ರ, ಆಲಂಬಾಡಿ ಹರೀಶ್, ಶಾಂತಪ್ಪ ಮತ್ತಿತರರು ಉಪಸ್ಥಿತರಿದ್ದರು..
ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ .
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ