May 19, 2024

Bhavana Tv

Its Your Channel

ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆದಿಲ್ಲ ಸುಳ್ಳು ದೂರು ನೀಡಿ ಕೊರೋನಾ ವಾರಿಯರ್ಸ್ ಗೌರವ ಕಳೆಯುತ್ತಿದ್ದಾರೆ; ಗ್ರಾಮಸ್ಥರ ಆಕ್ರೋಶ.

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಮೊಸಳೆಕೊಪ್ಪಲು ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಗಾಯತ್ರಿ ಅವರ ಮೇಲೆ ಹಲ್ಲೆಯಾಗಲೀ ದೌರ್ಜನ್ಯವಾಗಲಿ ನಡೆದಿಲ್ಲ. ಆಶಾ ಕಾರ್ಯಕರ್ತೆ ಗಾಯತ್ರಿ ಕೆಲವು ವ್ಯಕ್ತಿಗಳ ಚಿತಾವಣೆಯಿಂದ ಸುಳ್ಳು ದೂರನ್ನು ನೀಡಿದ್ದಾರೆ. ಆಶಾ ಕಾರ್ಯಕರ್ತೆ ಗಾಯತ್ರಿ ಅವರ ಪತಿ ರವಿಕುಮಾರ್ ಗ್ರಾಮದಲ್ಲಿ ಕೆಲವರೊಂದಿಗೆ ಹಣಕಾಸು ವ್ಯವಹಾರವನ್ನು ಹೊಂದಿದ್ದು ದುಡ್ಡುಕಾಸಿನ ವಿಚಾರಕ್ಕೆ ನಡೆದಿರುವ ಗಲಾಟೆಗೆ ಕೊರೋನಾ ವಾರಿಯರ್ ಹಾಗೂ ಕುಟುಂಬದ ಮೇಲೆ ದೌರ್ಜನ್ಯ ನಡೆದಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅಸಲಿಗೆ ಆಶಾ ಕಾರ್ಯಕರ್ತೆಯನ್ನು ಯಾರೂ ನಿಂಧಿಸಿ, ದೈಹಿಕವಾಗಿ ಹಲ್ಲೆ ಮಾಡಿಲ್ಲ ಆದ್ದರಿಂದ ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಮ್ಮ ಗ್ರಾಮಕ್ಕೆ ಬಂದಿರುವ ಕೆಟ್ಟ ಹೆಸರನ್ನು ಅಳಿಸಿ ಹಾಕಬೇಕು ಎಂದು ಗ್ರಾಮಸ್ಥರು ತಾಲ್ಲೂಕು ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿ ಗ್ರಾಮದಲ್ಲಿ ಧಿಡೀರ್ ಪ್ರತಿಭಟನೆ ನಡೆಸಿದರು. ಕೊರೋನಾ ಸಂಕಷ್ಠದ ಸಮಯದಲ್ಲಿ ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸದೇ ಗ್ರಾಮದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿರುವ ಆಶಾ ಕಾರ್ಯಕರ್ತೆ ಗಾಯತ್ರಿ ಅವರ ಸೇವೆ ನಮ್ಮ ಗ್ರಾಮಕ್ಕೆ ಬೇಕಾಗಿಲ್ಲ. ಕೂಡಲೇ ಗಾಯತ್ರಿ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಬದಲಿ ಆಶಾ ಕಾರ್ಯಕರ್ತೆಗೆ ಗ್ರಾಮದ ಜವಾಬ್ದಾರಿ ನೀಡಿ ಗ್ರಾಮಕ್ಕೆ ಅಂಟಿರುವ ಕೆಟ್ಟ ಹೆಸರನ್ನು ಅಳಿಸಿಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.. ಪ್ರತಿಭಟನೆಯಲ್ಲಿ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ . ಮಂಡ್ಯಜಿಲ್ಲೆ.

error: