May 19, 2024

Bhavana Tv

Its Your Channel

ರೈತ ಸಂಜೀವಿನಿ ಯೋಜನೆಯಡಿಯಲ್ಲಿ ಒಂದು ಲಕ್ಷದ ಪರಿಹಾರದ ಮೊತ್ತದ ಆದೇಶದ ಪತ್ರ ವಿತರಣೆ ಮಾಡಿದ ಎಪಿಎಂಸಿ ಮಾಜಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್

ಮಂಡ್ಯ : ಜಿಲ್ಲೆಯ ಕೃಷ್ಣರಾಜಪೇಟೆ ತಾಲೋಕು ಕಿಕ್ಕೇರಿ ಹೋಬಳಿಯ ಹಳೆ ಮಾದಾಪುರ ಗ್ರಾಮದ ರೈತ ಕುಟುಂಬ ವಾದ ಶಿವನಂಜೇಗೌಡ ಅವರ ಮಗ ಎಚ್ ಎಸ್ ಪುಟ್ಟರಾಜು ಅವರು ಅವರ ಜಮೀನನಲ್ಲಿ ತೆಂಗಿನ ಮರ ಹತ್ತಿ ಕಾಯಿ ಕೀಳವ ವೇಳೆ ಆಯಾ ತಪ್ಪಿ ಕೆಳಕ್ಕೆ ಬಿದ್ದು ಸಾವನಪ್ಪಿದ ಘಟನೆ ಕಳೆದ ತಿಂಗಳು ನೆಡೆದಿತ್ತು

ಈ ಘಟನೆ ತಿಳಿದ ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲೇಶ್ ಅವರು ಗ್ರಾಮಕ್ಕೆ ಭೇಟಿ ಕೊಟ್ಟು ಮೃತ ಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳಿ ನಮ್ಮ ಎಪಿಎಂಸಿ ವತಿಯಿಂದ ನಿಮ್ಮ ಕುಟುಂಬಕ್ಕೆ ಪರಿಹಾರ ಕೊಡಿಸುವ ಪ್ರಯತ್ನ ನಮ್ಮ ಎಪಿಎಂಸಿ ವತಿಯಿಂದ ನಾವು ಮಾಡುತ್ತೇವೇ ಎಂದು ಭರವಸೆ ನೀಡಿ ಈ ಇಂದೇ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಾಗಿತ್ತು.

ಅದರಂತೆ ಇಂದು ಕಿಕ್ಕೇರಿ ಕೃಷಿ ಮಾರುಕಟ್ಟೆಯಲ್ಲಿ ಇಂದು ಕಿಕ್ಕೇರಿ ಜೆಡಿಎಸ್ ಪಕ್ಷದ ಹೋಬಳಿ ಅಧ್ಯಕ್ಷ ಕಾಯಿ ಮಂಜೇಗೌಡ ಮಾದಾಪುರ ಗ್ರಾಮ ಪಂಚಾಯಿತಿ ಸದಸ್ಯರು ಆದ ಶೇಖರ್ ಅವರ ಸಮ್ಮುಖದಲ್ಲಿ ಒಂದು ಲಕ್ಷ ಪರಿಹಾರ ಹಣದ ಆದೇಶದ ಪ್ರತಿಯನ್ನು ಮೃತನ ಕುಟುಂಬಕ್ಕೆ ವಿತರಿಸಲಾಯಿತು.ಇದೆ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತಾಡುವ ಮೂಲಕ ನಮ್ಮ ಕೆ ಆರ್ ಪೇಟೆ ತಾಲೋಕಿನ ರೈತ ಬಾಂದವರು ನಮ್ಮ ಎಪಿಎಂಸಿ ಕೃಷಿ ಮಾರುಕಟ್ಟೆಯ ಅವಕಾಶವನ್ನು ಅತಿಹೆಚ್ಚು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಿಗೆ ಕರೆ ಕೊಟ್ಟರು. ಕಿಕ್ಕೇರಿ ಗ್ರಾಮ ಪಂಚಾಯತಿ ಸದ್ಯಸ ಕಾಯಿ ಮಂಜೇಗೌಡ ಮಾತನಾಡಿ ಎಪಿಎಂಸಿ ಅಧ್ಯಕ್ಷರು ಆಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅನೇಕ ಸಮಾಜಮುಖಿ ಕೆಲಸಗಳನ್ನ ಮಾಡಿ ಅನೇಕ ಜನರಿಗೆ ಹಾಗೂ ಜನಪ್ರತಿನಿದಿನಗಳಿಗೆ ಮಾದರಿಯಾಗಿದ್ದಾರೆ.. ಇವರು ಇನ್ನಷ್ಟು ಇದೆ ತರ ಸಮಾಜ ಕಾಳಜಿ ಇಂದ ಇನ್ನಷ್ಟು ಓಳ್ಳೆ ಕೆಲಸ ಮಾಡುವ ಭಾಗ್ಯ ಆ ದೇವರು ಕೊಡಲಿ ಎಂದು ಐನೋರಹಳ್ಳಿ ಮಲ್ಲೇಶ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಹಾಗೂ ಮಾದಾಪುರ ಗ್ರಾಮ ಪಂಚಾಯತಿ ಸದಸ್ಯರು ಶೇಖರ್ ಮಾತನಾಡಿ ನಮ್ಮ ಗ್ರಾಮದ ಶಿವೆನಂಜೇಗೌಡರ ಮಗ ಮೃತ ಪಟ್ಟಿದ್ದಕ್ಕೆ ಅಂದಿನ ಎಪಿಎಂಸಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್ ಅವರು ಮೃತರ ಕುಟುಂಬಕ್ಕೆ ಆದೊಷ್ಟು ಬೇಗ ಸಂಬAಧ ಪಟ್ಟ ಅಧಿಕಾರಿಗಳನ್ನು ಭೇಟಿ ಆಗಿ ರೈತರ ಕುಟುಂಬಕ್ಕೆ ಇಂದು ಒಂದು ಲಕ್ಷ ಚೆಕ್ ವಿತರಣೆ ಮಾಡುತ್ತಿರುವುದು ನಿಜಕ್ಕೂ ಸಂತಸ ಕೊಡುವ ವಿಷಯ ಆಗಾಗಿ ರೈತರು ಇಂತಹ ವ್ಯಕ್ತಿ ಗಳಿಗೆ ಸಹಕರಿಸಿ ಅವರಿಗೆ ಅಭಿನಂದಿಸಿ ಗೌರವಿಸಬೇಕು. ಹಾಗೂ ರೈತರು ಕೂಡ ರೈತ ಸಂಜೀವಿನಿ ಎಂದ ಕೃಷಿ ಮಾರುಕಟ್ಟೆಯ ವತಿಯಿಂದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ ಐನೋರಹಳ್ಳಿ ಮಲ್ಲೇಶ್ ಅವರಿಗೆ ಚಪ್ಪಾಳೆಯ ಮುಖಾಂತರ ಅಭಿನಂದಿಸಿದರು

ಈ ಸಂದರ್ಭದಲ್ಲಿ ಗುತ್ತಿಗೆದಾರಾರದ ಕಡಹೆಮ್ಮಿಗೆ ರಮೇಶ್ ಹಾಗೂ ಪ್ರವೀಣ್. ರಾಜೇಶ್. ಶಿವರಾಮ್. ಕೆಂಪಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು

ವರದಿ ಪೃಥ್ವಿ ಕಿಕ್ಕೇರಿ ಮಂಡ್ಯ

error: