May 19, 2024

Bhavana Tv

Its Your Channel

ಕೊರೋನಾ ಸೋಂಕಿತರನ್ನು ಕೀಳಾಗಿ ಕಾಣಬೇಡಿ ಎಂದು ಮನವಿ ಮಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ

ಮoಡ್ಯ: ಕೊರೋನಾ ಪಾಸಿಟಿವ್ ಸೋಂಕಿಗೆ ಚಿಕಿತ್ಸೆಯನ್ನು ಪಡೆದುಕೊಂಡು ಊರಿಗೆ ಮರಳುತ್ತಿರುವ ಮುಂಬೈ ಕನ್ನಡಿಗರು, ಹೊರನಾಡ ಕನ್ನಡಿಗರು ಹಾಗೂ ಪೌರಕಾರ್ಮಿಕರನ್ನು ನಿಕೃಷ್ಠವಾಗಿ ಕಂಡು ಹೀಯಾಳಿಸುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ಕೊರೋನಾ ಸೋಂಕಿನಿAದ ಮುಕ್ತರಾಗಿ ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿರುವ ಜನರು ನಮ್ಮ ಅಣ್ಣತಮ್ಮಂದಿರೇ ಆಗಿರುವುದರಿಂದ ದಯಮಾಡಿ ಕೊರೋನಾ ಸೋಂಕಿತರನ್ನು ಕೀಳಾಗಿ ಕಾಣಬೇಡಿ ಎಂದು ಮನವಿ ಮಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ ಕೊರೋನಾ ವಾರಿಯರ್ಸ್ ಸೇರಿದಂತೆ ಕೊರೋನಾ ಸೋಂಕಿತರನ್ನು ಕೀಳಾಗಿ ಕಂಡು ಅವರು ಬದುಕುವ ಧಕ್ಕೆ ತಂದರೆ ಅಂತಹ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಕೊರೋನಾ ಸೋಂಕು ಕಡಿಮೆಯಾಗುತ್ತಿದೆ. ಯಾರೂ ಹೆದರುವ ಅಗತ್ಯವಿಲ್ಲ. ಬೆಂಗಳೂರು ಸೇರಿದಂತೆ ಹೊರಗಿನಿಂದ ಆಗಮಿಸುತ್ತಿರುವ ಜನರು ಕಡ್ಡಾಯವಾಗಿ ೧೪ ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿರಬೇಕು. ಅಗತ್ಯ ಆರೋಗ್ಯ ಮುನ್ಸೂಚನಾ ಕ್ರಮಗಳನ್ನು ಪಾಲಿಸುವ ಮೂಲಕ ಕೊರೋನಾ ಮುಕ್ತ ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು..

ಪೌರಕಾರ್ಮಿಕರ ಸೇವೆ ಅಪಾರ:
ಸಾಂಸ್ಥಿಕ ಹೋಂಕ್ವಾರoಟೈನ್ ಕೇಂದ್ರಗಳ ಸ್ವಚ್ಛತೆ ಮತ್ತು ನೈರ್ಮಲ್ಯದ ಕೆಲಸ ಮಾಡುತ್ತಾ ಜೀವದ ಹಂಗುತೊರೆದು ದುಡಿಯುತ್ತಿರುವ ಪೌರಕಾರ್ಮಿಕರ ಸೇವೆಯು ಅಪಾರವಾಗಿದೆ. ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿರುವ ೬ಜನರು ಗುಣಮುಖರಾಗುತ್ತಿದ್ದಾರೆ. ಉಳಿದ ಪೌರಕಾರ್ಮಿಕರು ಸ್ವಚ್ಛತಾ ಕೆಲಸಕ್ಕೆ ಇಲ್ಲವೇ ಅಂಗಡಿ ಮುಂಗಟ್ಟುಗಳಿಗೆ ಬಂದಾಗ ಹೀಯಾಳಿಸಿ ಅವಮಾನಿಸಿದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ ತಹಶೀಲ್ದಾರ್ ಶಿವಮೂರ್ತಿ ಮತ್ತು ಪುರಸಭೆಯ ಮುಖ್ಯಾಧಿಕಾರಿ ಸತೀಶ್ ಕುಮಾರ್ ಪೌರಕಾರ್ಮಿಕರು ತಮ್ಮ ಕೆಲಸಕ್ಕೆ ಆಗಮಿಸದಿದ್ದರೆ ಪಟ್ಟಣದ ಪರಿಸ್ಥಿತಿಯು ಏನಾಗುತ್ತದೆ ಎಂದು ಒಮ್ಮೆ ಆಲೋಚಿಸಬೇಕು. ಕೊರೋನಾ ವಾರಿಯರ್ಸ್ ಅನ್ನು ಗೌರವಿಸುವ ಕೆಲಸವನ್ನು ಆತ್ಮಪೂರ್ವಕವಾಗಿ ಮಾಡಬೇಕು ಎಂದು ಕಿವಿಮಾತು ಹೇಳಿದರು..

ವರದಿ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ. ಮಂಡ್ಯ ಜಿಲ್ಲೆ

error: